ರಾಮ್ ರಹೀಮ್ಗೆ ಜೀವಾವಧಿ ಶಿಕ್ಷೆಗೆ ಸಂತ್ರಸ್ತೆಯರ ಪಟ್ಟು

Posted By:
Subscribe to Oneindia Kannada

ರೋಹ್ಟಕ್, ಆಗಸ್ಟ್ 28 : ಐವತ್ತು ವರ್ಷದ ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್ ಗೆ 10 ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಶೇಷ ನ್ಯಾಯಾಲಯ ಪ್ರಕಟಿಸುತ್ತಿದ್ದಂತೆ ತೀವ್ರ ಆಕ್ರೋಶಕ್ಕೊಳಗಾದವರು ಆತನ ಕಟ್ಟಾ ಅನುಯಾಯಿಗಳಲ್ಲ, ಅತ್ಯಾಚಾರಕ್ಕೊಳಗಾದ ಸಾಧ್ವಿಗಳು.

ಬಾಬಾ ರಾಮ್ ರಹೀಂಗೆ 10 ವರ್ಷ ಜೈಲು

ಕಾವಿ ಧರಿಸಿ ಮಾಡಬಾರದ್ದನ್ನೆಲ್ಲ ಮಾಡಿರುವ ಸ್ಟೈಲಿಶ್ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಇನ್ನೂ ಉಗ್ರ ಶಿಕ್ಷೆ ನೀಡಬೇಕಾಗಿತ್ತು ಎಂದು ಢೋಂಗಿ ಬಾಬಾನಿಂದ ಸತತ ಮೂರು ವರ್ಷ ಅತ್ಯಾಚಾರಕ್ಕೊಳಗಾಗಿರುವ ಸಾಧ್ವಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Why no life term for Ram Rahim : Rape victims ask court

ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ವಿರುದ್ಧ ನ್ಯಾ. ಜಗದೀಪ್ ಸಿಂಗ್ ಅವರು ನೀಡಿರುವ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿಯೂ ಅವರು ತೀರ್ಮಾನಕ್ಕೆ ಬಂದಿದ್ದಾರೆ. 10 ವರ್ಷದ ಬದಲು ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಾಗಿತ್ತು ಎಂಬುದು ಅವರ ಅಳಲು.

ಬಯಲಿಗೆ ಬಂತು ರಾಮ್ ರಹೀಂ ಬಾಬಾನ ಮತ್ತೊಂದು ರಾಸಲೀಲೆ?

ಸರಕಾರಿ ವಕೀಲರು ಕೂಡ ದುರುಳ ಬಾಬಾನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ವಾದ ಮಂಡಿಸಿದ್ದರು. ಇದನ್ನು ವಿರೋಧಿಸಿ, ಬಾಬಾ ಸಮಾಜ ಸೇವಕನಾಗಿರುವುದರಿಂದ ಶಿಕ್ಷೆ ಪ್ರಮಾಣವನ್ನು ತಗ್ಗಿಸಬೇಕೆಂದು ಬಾಬಾ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.

ಬಾಬಾ ರಾಮ್ ರಹೀಂ ಶಿಕ್ಷೆ ಪ್ರಮಾಣ ನಿಗದಿ ವಿಚಾರಣೆ ಮುಕ್ತಾಯ

ಹದಿನೈದು ವರ್ಷಗಳ ಹಿಂದೆಯೇ ರಾಮ್ ರಹೀಮ್ ವಿರುದ್ಧ ಅತ್ಯಾಚಾರದ ಕೇಸನ್ನು ಜಡಿಯಲಾಗಿತ್ತು. ಈ ಕೇಸಿನಲ್ಲಿ ತೀರ್ಪು ಪ್ರಕಟವಾಗಲು ಇಷ್ಟು ವರ್ಷ ಬೇಕಾಗಿದ್ದು ನಿಜಕ್ಕೂ ಕಳವಳಕಾರಿ ಸಂಗತಿ. ತನ್ನ ಜನಪ್ರಿಯತೆಯನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಬಾಬಾನಿಗೆ ಕಡೆಗೂ ಶಿಕ್ಷೆಯಾಗಿರುವುದು ಹಲವರಿಗೆ ನಿರಾಳ ತಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rape victims are demanding life term for the rapist baba Ram Rahim Singh, the self styled godman, who had raped several sadhwis 15 years ago in Haryana. The special CBI court has sentenced him to 10 year regorous imprisonment on 28th August, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X