ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?

|
Google Oneindia Kannada News

Recommended Video

Bharat Bandh: ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ? | Oneindia Kannada

ಬೆಂಗಳೂರು, ಜನವರಿ 07: ಭಾರತಕ್ಕೆ 'ಬಂದ್' ಗಳೇನು ಹೊಸತಲ್ಲ. ಒಂದಿಲ್ಲೊಂದು ಕಾರಣಕ್ಕೆ ತಿಂಗಳಿಗೊಂದಾದರೂ ಬಂದ್ ನಡೆಯುವುದು ಮಾಮೂಲು.

ಅಂತೆಯೇ ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೂ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು, ಉಬರ್ ಮತ್ತು ಓಲಾ ಕ್ಯಾಬ್ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ.

ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?

ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಅಷ್ಟಕ್ಕೂ ಜ 08-09 ರಂದು ಭಾರತ್ ಬಂದ್ ನಡೆಯುತ್ತಿರುವುದೇಕೆ? ಇಲ್ಲಿವೆ ಕಾರಣಗಳು

ಸಾಮಾಜಿಕ ಸುರಕ್ಷೆ

ಸಾಮಾಜಿಕ ಸುರಕ್ಷೆ

* ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಬಂದ್ ನಡೆಯುತ್ತಿದೆ.

ಜನವರಿ 8 ಮತ್ತು 9ರಂದು ಕೆಎಸ್ಆರ್‌ಟಿಸಿ ನೌಕರರ ಮುಷ್ಕರ ಜನವರಿ 8 ಮತ್ತು 9ರಂದು ಕೆಎಸ್ಆರ್‌ಟಿಸಿ ನೌಕರರ ಮುಷ್ಕರ

ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಗೆ ವಿರೋಧ

ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಗೆ ವಿರೋಧ

* ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಮಸೂದೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ರೂ.100ರಿಂದ ಕನಿಷ್ಠ ರೂ.500 ಹಾಗೂ ಗರಿಷ್ಠ 500, ಅತಿವೇಗಕ್ಕೆ ರೂ.400 ರಿಂದ ರೂ.1000, ನಿರ್ಲಕ್ಷ್ಯದ ಚಾಲನೆಗೆ ರೂ.1000 ರಿಂದ ರೂ.5000 ಹೆಚ್ಚಿಸಲಾಗಿದೆ ಇದನ್ನು ವಿರೋಧಿಸಿ ಬಂದ್ ನಡೆಯಗುತ್ತಿದೆ.

ಜನವರಿ 8, 9 ರಂದು ಆಟೋ ಮುಷ್ಕರ, ಸಂಚಾರ ಸ್ಥಗಿತ?ಜನವರಿ 8, 9 ರಂದು ಆಟೋ ಮುಷ್ಕರ, ಸಂಚಾರ ಸ್ಥಗಿತ?

ಆಂಬುಲೆನ್ಸ್ ಗೆ ದಾರಿ ಬಿಡದಿದ್ದರೆ 10,000 ರೂ ದಂಡ!

ಆಂಬುಲೆನ್ಸ್ ಗೆ ದಾರಿ ಬಿಡದಿದ್ದರೆ 10,000 ರೂ ದಂಡ!

*ಆಂಬುಲೆನ್ಸ್ ಗೆ ದಾರಿ ಬಿಡದಿರುವುದಕ್ಕೆ ರೂ.10 ಸಾವಿರ ದಂಡ ಮತ್ತು 6 ತಿಂಗಳ ಜೈಲು ವಿಧಿಸಲಾಗುತ್ತದೆ. ವಿಮೆ ಇಲ್ಲದೆ ಚಾಲನೆಗೆ ರೂ.2 ಸಾವಿರ ದಂಡ ಮತ್ತು ಆರು ತಿಂಗಳ ಜೈಲು ವಿಧಿಸಲಾಗುತ್ತದೆ ಇದಕ್ಕೆ ಮುಷ್ಕರನಿರತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಂದ್ ಕರೆದಿದ್ದು ಯಾರು?

ಬಂದ್ ಕರೆದಿದ್ದು ಯಾರು?

* ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್‌ಪಿಎಫ್ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ರಾಷ್ಟ್ರವ್ಯಾಪ್ತಿ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿವೆ.

ವಿವಿಧ ಬೇಡಿಕೆ

ವಿವಿಧ ಬೇಡಿಕೆ

* ಪ್ರತಿಭಟನಕಾರರು ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸಿ ಮತ್ತು ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ. ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕಾರ್ಮಿಕರ ವೇತನ ಹೆಚ್ಚಳ, ಸಾರ್ವಜನಿಕ ಮತ್ತು ಸರ್ಕಾರಿ ವಿಭಾಗಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿಯೂ ಬಂದ್ ನಡೆಯುತ್ತಿದೆ.

English summary
Trade unions call 2 days bharat bandh on Jan 8 and 9. Here are the important reasons for Bharat bandh. Why is Bharat Bandh on Jan 8 and 9
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X