ಪಾಕ್ ತನಿಖಾ ತಂಡ ಪಠಾಣ್ ಕೋಟ್ ಪ್ರವೇಶಿಸುವಂತಿಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 20 : ಪಠಾಣ್ ಕೋಟ್ ದಾಳಿಯ ತನಿಖೆ ನಡೆಸುತ್ತಿರುವ ಪಾಕಿಸ್ತಾನದ ಕ್ರಮವನ್ನು ಭಾರತ ಶ್ಲಾಘಿಸಿದೆ. ಆದರೆ, ಪಾಕ್ ವಿಶೇಷ ತನಿಖಾ ತಂಡ ವಾಯುನೆಲೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಈಗಾಗಲೇ ಪಾಕ್ ತಂಡ ವಾಯುನೆಲೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ವಾಯುನೆಲೆ ಮೇಲಿನ ದಾಳಿಯ ಸಂಚು ರೂಪಿಸಿದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಅದಕ್ಕಾಗಿ ವಾಯುನೆಲೆಗೆ ಭೇಟಿ ನೀಡುತ್ತೇವೆ ಎಂದು ಪಾಕ್ ಹೇಳಿತ್ತು. [ಪಠಾಣ್ ಕೋಟ್ ವಾಯುನೆಲೆ ವಿಶೇಷತೆಗಳೇನು?]

pathankot

ಯಾವುದೇ ದೇಶವೂ ಮತ್ತೊಂದು ದೇಶದ ಅಧಿಕಾರಿಗಳಿಗೆ ವಾಯುನೆಲೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಇದನ್ನೇ ಭಾರತವೂ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಭಾರತದ ಮಾಜಿ ಸೈನಿಕರು ಪಾಕ್‌ಗೆ ಸೇನೆಯ ಮಾಹಿತಿಗಳನ್ನು ಒದಗಿಸಿರುವುದು ಬೆಳಕಿಗೆ ಬಂದಿತ್ತು. ಆದ್ದರಿಂದ, ತನಿಖಾ ತಂಡಕ್ಕೆ ವಾಯುನೆಲೆ ಪ್ರವೇಶ ನಿರಾಕರಿಸಲಾಗಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿದೆ. ಇದು ದೇಶದ ಮಹತ್ವದ ಸೇನಾ ನೆಲೆಯಾಗಿದೆ. ಪಾಕ್‌ ಮೊದಲಿನಿಂದಲೂ ಇದರ ಮೇಲೆ ಕಣ್ಣಿಟ್ಟಿದೆ.

1965, 1971ರ ಭಾರತ-ಪಾಕ್ ನಡುವಿನ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಈ ವಾಯುನೆಲೆ ಮೇಲೆ ದಾಳಿ ಮಾಡಿತ್ತು. 1971ರಲ್ಲಿ ಪಾಕ್ ವೈಮಾನಿಕ ದಾಳಿಯಿಂದಾಗಿ ವಾಯುನೆಲೆಯ ರನ್‌ವೇಗೆ ಹಾನಿ ಉಂಟಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan may be upset that India has said no to its investigators entering the Pathankot air force station to probe the case. India however has every reason to deny the investigators permission to enter into the air base.
Please Wait while comments are loading...