ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ? ಕಾರಣ ಬಹಿರಂಗ

By Sachhidananda Acharya
|
Google Oneindia Kannada News

Recommended Video

ಹಾರ್ದಿಕ್ ಪಟೇಲ್ ಚುನಾವಣೆಗೆ ನಿಂತಿಲ್ಲದ ಕಾರಣ ಬಹಿರಂಗ | Oneindia Kannada

ಅಹಮದಾಬಾದ್, ಡಿಸೆಂಬರ್ 14: ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ನೈಜ ಸವಾಲು ಹಾಕಿದವರು ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್.

ಲಕ್ಷ ಲಕ್ಷ ಜನರ ಸಮಾವೇಶಗಳನ್ನು ನಡೆಸಿ ಸ್ವತಃ ಮೋದಿಗೆ ನಡುಕ ಹುಟ್ಟಿಸಿದ ಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಅದಕ್ಕೆ ಸ್ವತಃ ಅವರೇ ಉತ್ತರಿಸಿದ್ದಾರೆ.

ಹಾರ್ದಿಕ್ ಪಟೇಲ್ ವಿಡಿಯೋ ಬಹಿರಂಗ, ಪಾಟಿದಾರ್ -ಬಿಜೆಪಿ ಕಿತ್ತಾಟಹಾರ್ದಿಕ್ ಪಟೇಲ್ ವಿಡಿಯೋ ಬಹಿರಂಗ, ಪಾಟಿದಾರ್ -ಬಿಜೆಪಿ ಕಿತ್ತಾಟ

ಗುಜರಾತ್ ನಲ್ಲಿ ಇಂದು ತಮ್ಮ ಮತ ಚಲಾಯಿಸಿದ ಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ. "ನನಗೆ ಮೊದಲು ವಯಸ್ಸಾಗಲಿ ನಂತರ ಬರುತ್ತೇನೆ," ಎಂದಿದ್ದಾರೆ.

ತುಂಬಿಲ್ಲ ಇನ್ನೂ 25

ತುಂಬಿಲ್ಲ ಇನ್ನೂ 25

23 ತರುಣ ಹಾರ್ದಿಕ್ ಪಟೇಲ್ ಗೆ ಚುನಾವಣೆಗೆ ನಿಲ್ಲಲು ಅರ್ಹತೆಯಿಲ್ಲ (ಚುನಾವಣೆಗೆ ನಿಲ್ಲಲು 25 ವರ್ಷವಾಗಿರಬೇಕು). ಹೀಗಿದ್ದೂ ಗುಜರಾತಿನಲ್ಲಿ ಚುನಾವಣಾ ದೃಷ್ಟಿಯಿಂದ ಪ್ರಭಾವ ಬೀರಿದ ಪ್ರಮುಖ ವ್ಯಕ್ತಿಯಾಗಿ ಹಾರ್ದಿಕ್ ಪಟೇಲ್ ಗುರುತಿಸಿಕೊಂಡಿದ್ದಾರೆ.

ಎರಡೂವರೆ ವರ್ಷದಲ್ಲಿ ನಿರ್ಧಾರ

ಎರಡೂವರೆ ವರ್ಷದಲ್ಲಿ ನಿರ್ಧಾರ

"ನಾನೀಗಾಗಲೇ ಹೇಳಿರುವಂತೆ ನಾನು ಈ ಬಗ್ಗೆ (ಚುನಾವಣೆಗೆ ಸ್ಪರ್ಧಿಸುವ ಬಗ್ಗೆ) ಎರಡೂವರೆ ವರ್ಷಗಳಲ್ಲಿ ಆಲೋಚನೆ ಮಾಡಿ ನಿರ್ಧರಿಸುತ್ತೇನೆ," ಎಂದು ಹಾರ್ದಿಕ್ ಸ್ಪಷ್ಟಪಡಿಸಿದಿದ್ದಾರೆ.

ಲಕ್ಷ ಜನ ಸೇರಿಸುವ ತಾಕತ್ತು

ಲಕ್ಷ ಜನ ಸೇರಿಸುವ ತಾಕತ್ತು

ಹಾಗೆ ನೋಡಿದರೆ ಹಾರ್ದಿಕ್ ಪಟೇಲ್ ಗೆ ಚುನಾವಣೆಗೆ ಸ್ಪರ್ಧಿಸುವಷ್ಟು ವಯಸ್ಸಾಗದೇ ಇದ್ದರೂ ಅವರ ಸಮಾವೇಶಗಳಿಗೆ ಲಕ್ಷ ಲಕ್ಷ ಜನ ಸೇರಿದ್ದಾರೆ. ಇವೆಲ್ಲಾ ಬಿಜೆಪಿಯ ವಿರುದ್ಧ ಮತಗಳಾಗಿ ಬದಲಾಗುತ್ತವೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

ಜನರ ಮೇಲೆ ಹಾರ್ದಿಕ್ ಗೆ ವಿಶ್ವಾಸ

ಜನರ ಮೇಲೆ ಹಾರ್ದಿಕ್ ಗೆ ವಿಶ್ವಾಸ

"6 ಕೋಟಿ ಜನರು ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ನಮಗೆ ಈ ಬಗ್ಗೆ ಭರವಸೆ ಇದೆ," ಎನ್ನುತ್ತಾರೆ ಹಾರ್ದಿಕ್ ಪಟೇಲ್. ಇದಕ್ಕೆಲ್ಲಾ ಡಿಸೆಂಬರ್ 18ರಂದು ಹೊರಬೀಳಲಿರುವ ಫಲಿತಾಂಶ ಉತ್ತರ ನೀಡಲಿದೆ.

English summary
23-year-old Hardik Patel is not eligible to contest elections (25 years is must to stand for elections). “let me first come of age," said Hardik after reporters questioned about his future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X