ಐಶ್ವರ್ಯಾ ರೈ & ಅಭಿಷೇಕ್ ಬಚ್ಚನ್ ವಿಚ್ಛೇದನ ಗಾಸಿಪ್‌ಗೆ ಬ್ರೇಕ್ ಹಾಕ್ತಾ 5050 ನಂಬರ್?-ಏನಿದು? ಇಲ್ಲಿದೆ ವಿವರ
ಈಗಾಗಲೇ ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ. ಈ ಜೋಡಿ ವಿಚ್ಛೇದನ ಪಡೆದುಕೊಂಡು, ದೂರ ಆಗಲಿದೆ ಎನ್ನುವ ಗಾಸಿಪ್‌ಗಳು ಹರಿದಾಡಿದ್ದವು. ಆದರೆ ಇದೀಗ ಅಭಿಷೇಕ್ ಬಚ್ಚನ್ ಹೊಸ ಕಾರು ಖರೀದಿ ಮಾಡಿ ಅದನ್ನು ಐಶ್ವರ್ಯ ಅವರಿಗೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ ಈ ಕಾರಿನ ನಂಬರ್ ಏನು ಹಾಗೂ ಇದರ ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.
ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮಗನ ಮದುವೆ ಸಂಭ್ರಮದಲ್ಲಿ ಐಶ್ವರ್ಯಾ ತಮ್ಮ ಮಗಳು ಆರಾಧ್ಯ ಜೊತೆ ಬಂದಿದ್ದು, ಮತ್ತೊಂದೆಡೆ ಅಭಿಷೇಕ್ ಬಚ್ಚನ್ ಅವರು ತಮ್ಮ ತಂದೆ-ತಾಯಿ ಮತ್ತು ಸಹೋದರಿ ಜೊತೆ ಬಂದಿದ್ದರು. ಇದು ಇವರಿಬ್ಬರ ನಡುವೆ ವಿಚ್ಚೇದನ ಗಾಸಿಪ್‌ಗೆ ಕಾರಣವಾಗಿತ್ತು. ಆದರೆ ಈ ನಡುವೆ ಐಶ್ವರ್ಯಾ ರೈ ಅಭಿಮಾನಿಗಳಿ ಸಂತೋಷ ಸುದ್ದಿಯೊಂದು ಸಿಕ್ಕಿದೆ.

ಅಭಿಷೇಕ್ ಬಚ್ಚನ್ ಹೊಸ ಕಾರೊಂದನ್ನು ಚಲಾಯಿಸಿಕೊಂಡು ಬಂದಿದ್ದು, ಅದರಲ್ಲಿ ತನ್ನ ಸಹೋದರಿ ಶ್ವೇತಾ ಪುತ್ರಿ ನವ್ಯಾ ಮತ್ತು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅವರನ್ನು ಡಿನ್ನರ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ ಈ ಕಾರನ್ನು ನೋಡುತ್ತಲೇ ಐಶ್ವರ್ಯಾ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆ ಗೊತ್ತಾ ಆ ಕಾರಿನ ಮೇಲಿದ್ದ ನಂಬರ್ ಐಶ್ವರ್ಯಾ ರೈ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಈ ಹಿಂದೆ ಐಶ್ವರ್ಯಾ ರೈ ಬಳಿ ಒಂದು ಮೆರ್ಸಿಡೀಸ್ ಬೆನ್ಜ್ ಕಾರು ಇದ್ದು, ಅದನ್ನು ಈಗಾಗಲೇ ಮಾರಾಟ ಮಾಡಲಾಗಿತ್ತು. ಆ ಕಾರಿನ ಸಂಖ್ಯೆ 5050 ಆಗಿದ್ದು, ಇದೀಹ ಅಭಿಷೇಕ್ ಬಚ್ಚನ್ ಚಲಾಯಿಸಿಕೊಂಡು ಬಂದಿದ್ದ ಹೊಸ ಕಾರಿನ ಸಂಖ್ಯೆ ಕೂಡ 5050 ಆಗಿದೆ. ಆದ್ದರಿಂದ ಈ ಕಾರನ್ನು ಐಶ್ವರ್ಯಾಗೆ ಅಭಿಷೇಕ್ ಉಡುಗೊರೆ ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತವೆ. ಅಲ್ಲದೆ, ಅಭಿಷೇಕ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳ್ತಿದ್ದಾರೆ ಅಭಿಮಾನಿಗಳು.












Click it and Unblock the Notifications