• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವರೇನು ದಾನಕ್ಕೆ ಡೀಸೆಲ್ ಸ್ಮಗ್ಲಿಂಗ್ ಮಾಡ್ತಾರೋ?

|

ನವದೆಹಲಿ, ಜ. 5: ಸ್ಫೋಟಕಗಳಿಂದ ತುಂಬಿದ್ದ ಪಾಕಿಸ್ತಾನದ ದೋಣಿ ಅರಬ್ಬಿ ಸಮುದ್ರದಲ್ಲಿ ಬೆಂಕಿಗೆ ಆಹುತಿಯಾಗಿರುವುದು ಡೀಸೇಲ್ ಕಳ್ಳಸಾಗಣೆದಾರರಿಂದ ಎಂಬ ಮಾತಿನ ಮೂಲ ಹುಡುಕುತ್ತಾ ಹೋದರೆ ನೂರಾರು ಪ್ರಶ್ನೆಗಳು ಎದುರಾಗುತ್ತದೆ.

ಒಂದು ಸಣ್ಣ ಲೆಕ್ಕ ನೋಡೋಣ. ಪಾಕಿಸ್ತಾನದಲ್ಲಿ ಡೀಸೆಲ್ ಗೆ 86 ರೂ. ಇದೆ. ಭಾರತದಲ್ಲಿ 56 ರೂ. ಇದೆ. ಅಂದರೆ 30 ರೂ. ವ್ಯತ್ಯಾಸ. ಲೀಟರ್ ಗೆ 30 ರೂ. ಹೆಚ್ಚಿಗೆ ತೆತ್ತು ಭಾರತಕ್ಕೆ ತಂದು ಮಾರಾಟ ಮಾಡುವಷ್ಟು ಉದಾರಿಗಳಾದರೆ ಪಾಕಿಸ್ತಾನಿಗಳು!?[ಮಾದಕ ವಸ್ತು ಸಾಗಣೆ ನೆಪದಲ್ಲಿ ಒಳನುಸುಳುವ ಉಗ್ರರು]

ಬಂದಿದ್ದವರು ಮಾದಕ ವಸ್ತು ಸಾಗಣೆದಾರರೇ ಅಂದುಕೊಳ್ಳಿ, ಅವರು ತಮ್ಮ ಬಳಿಯಿದ್ದ ವಸ್ತುವನ್ನು ನೀರಿಗೆಹಾಕಿ ಪರಾರಿಯಾಗಲು ಯತ್ನಿಸಿದ್ದರೆ ಅನುಮಾನ ದೃಢವಾಗುತ್ತಿತ್ತು. ಯಾರಾದರೂ ಪೊಲೀಸರಿಗೆ ಶರಣಾಗುವ ಆಯ್ಕೆ ತೆಗೆದುಕೊಳ್ಳುತ್ತಾರೋ? ಇಲ್ಲಾ ಪ್ರಾಣ ಕಳೆದುಕೊಳ್ಳುತ್ತಾರೋ? ಒಟ್ಟಿನಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರೂ ಇಲ್ಲ.

ಡೀಸೆಲ್ ಕಳ್ಳ ಸಾಗಣೆಯ ದಾರಿಯೇ ಬೇರೆ. ಭಾರತದಿಂದ ಪಾಕಿಸ್ತಾನಕ್ಕೆ ಡಿಸೇಲ್ ಕಳ್ಳಸಾಗಾಟ ನಡೆಯುತ್ತಿದೆ ಎಂಬ ಮಾತನ್ನು ಒಪ್ಪಿಕೊಳ್ಳಬಹುದು. ಆದರೆ ಯಾವ ದಾರಿಯಲ್ಲಿ? ಮತ್ತೆ ಉತ್ತರ ಗೊತ್ತಾಗುವುದಿಲ್ಲ. ಆದರೆ 26/11 ರ ದಾಳಿಯ ಹಿಂದೆ ಡೀಸೆಲ್ ಕಳ್ಳಸಾಗಾಟದಲ್ಲಿ ನಿರತವಾಗಿದ್ದ ಮಹಿಳೆಯೊಬ್ಬಳ ಕೈವಾಡವಿತ್ತು ಎಂಬ ಸಂಗತಿ ಹಿಂದೆಯೇ ದೃಢಪಟ್ಟಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಡೀಸೆಲ್ ಕಳ್ಳಸಾಗಾಟ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡರೂ , ಅದು ಪಾಕಿಸ್ತಾನದಿಂದ ಭಾರತಕ್ಕಲ್ಲ, ಭಾರತದಿಂದ ಪಾಕಿಸ್ತಾನಕ್ಕೆ ಎಂಬುದು ಸತ್ಯ.[ಭಾರತದೊಳು ನುಗ್ಗುವ ಉಗ್ರರ ಯತ್ನ ವಿಫಲ, ಬೋಟ್ ಸ್ಫೋಟ]

ಮಾದಕ ವಸ್ತು ಸಾಗಾಟವೇ?

ಇನ್ನೊಂದು ರೀತಿಯಲ್ಲಿ ಪ್ರಕರಣವನ್ನು ನೋಡುವವರು ಇದು ಮಾದಕ ವಸ್ತು ಸಾಗಾಟ ಮಾಡುವವರ ಕೃತ್ಯ ಎನ್ನುತ್ತಾರೆ. ಆದರೆ ನೀರಿನ ಮೇಲೆ ಇದ್ದ ವ್ಯಕ್ತಿಗಳು ಮಾದಕ ವಸ್ತುಗಳು ತಮ್ಮ ಬಳಿ ಇದ್ದಿದ್ದರೆ ಸುಲಭವಾಗಿ ಸಮುದ್ರಕ್ಕೆ ಚೆಲ್ಲಬಹುದಿತ್ತು. ಆದರೆ ಬೋಟ್ ಸ್ಫೋಟ ಮಾಡಿದ್ದು ಯಾಕೆ?

ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಬೆನ್ನು ಹತ್ತಿದರೆ ಸಾಮಾನ್ಯವಾಗಿ ಸಾಗಾಟದಾರರು ಒಂದೋ ಪರಾರಿಯಾಗಲು ಯತ್ನಿಸುತ್ತಾರೆ. ಸಾಧ್ಯವಿಲ್ಲ ಎಂದರೆ ಸಿಕ್ಕಿಬೀಳುತ್ತಾರೆ, ಯಾವ ಕಾರಣಕ್ಕೂ ಪ್ರಾಣ ಕಳೆದುಕೊಳ್ಳುವುದಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಬೋಟ್ ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳು ಇದ್ದಿದ್ದು ನಿಜ, ಅವು ಪಾಕಿಸ್ತಾನದಿಂದ ತಂದಿದ್ದು ಎಂಬುದು ಅಷ್ಟೇ ಸತ್ಯ. ಪೋರಬಂದರ್ ಮೂಲಕ ಭಾರತ ಪ್ರವೇಶಿಸಿ ಯಾವ ನಗರವನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬ ಸಂಗತಿ ಸರಿಯಾದ ತನಿಖೆಯಿಂದ ಹೊರಬರಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Several media outlets have burnt the midnight oil to debunk the operation of the Coast Guard which intercepted The Qalandar or the boat from Pakistan. These suspicious four who did their best to conceal evidence have been branded by a few as diesel or drug smugglers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more