ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ಸ್ಥಳದಲ್ಲಿಯೇ ರಾಮಮಂದಿರ ಕಟ್ಟಲು ಬಿಜೆಪಿ ಏಕೆ ಬಯಸುತ್ತಿದೆ?

|
Google Oneindia Kannada News

ಗುಣ (ಮಧ್ಯಪ್ರದೇಶ), ನವೆಂಬರ್ 5: ವಿವಾದಿತ ಪ್ರದೇಶದಲ್ಲಿಯೇ ರಾಮ ಮಂದಿರ ನಿರ್ಮಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಕೆ ಹಠ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ಚುನಾಚಣೆಯ ಸಮೀಪಿಸುತ್ತಿದ್ದಾಗ ಮಾತ್ರ ಅವರು ರಾಮನನ್ನು ನೆನಪಿಸುತ್ತಾರೆ. ನನ್ನ ನಿಲುವು ಸ್ಪಷ್ಟವಾಗಿದೆ, ರಾಮ ಮಂದಿರ ನಿರ್ಮಿಸಲು ಯಾವ ಸಮಸ್ಯೆಯೂ ಇಲ್ಲ. ಆದರೆ, ಅದನ್ನು ಆ ವಿವಾದಿತ ಸ್ಥಳದಲ್ಲಿಯೇ ಏಕೆ ಕಟ್ಟಲು ಬಯಸುತ್ತೀರಿ? ವಿವಾದಿತ ಪ್ರದೇಶದಲ್ಲಿಯೇ ಕಟ್ಟಲೇಬೇಕು ಎಂದು ನೀವು ಅಂದುಕೊಂಡಿದ್ದರೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿ ಎಂದು ಬಿಜೆಪಿ ಸವಾಲು ಹಾಕಿದರು.

digvijay singh

ರಾಮಮಂದಿರಕ್ಕಾಗಿ 1992 ರ ಮಾದರಿ ಹೋರಾಟ ಮಾಡಲು ಸಿದ್ಧ: RSSರಾಮಮಂದಿರಕ್ಕಾಗಿ 1992 ರ ಮಾದರಿ ಹೋರಾಟ ಮಾಡಲು ಸಿದ್ಧ: RSS

ಅಧಿಕಾರಾರೂಢ ಬಿಜೆಪಿಯು ಎಲ್ಲ ಆಯಾಮಗಳಿಂದಲೂ ವಿಫಲವಾಗಿದೆ. ವಿದೇಶಾಂಗ ನೀತಿ, ಕೃಷಿಕರಿಗಾಗಿ ನೀತಿ, ಆರ್ಥಿಕ ನೀತಿ ಮತ್ತು ಇತರೆ ಎಲ್ಲ ನೀತಿಗಳಲ್ಲಿಯೂ ಮೋದಿ ಸರ್ಕಾರ ವೈಫಲ್ಯ ಅನುಭವಿಸಿದೆ. ಬಿಜೆಪಿ ಸರ್ಕಾರ ಮತ್ತು ಮುಖ್ಯವಾಗಿ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

English summary
Congress leader Digvijay Singh asked BJP government that, why they wants to build Ram Temple on a disputed spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X