Bihar Results: NDAಗೆ ಮಹಿಳೆಯರ ಭಾರೀ ಬೆಂಬಲ: ಬಿಜೆಪಿ ಮಹಿಳಾ ಮೋರ್ಚಾದ ವಿಶೇಷ ತಂತ್ರ ಹೇಗಿತ್ತು ಗೊತ್ತಾ?
Bihar Election Results 2025: ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಮಹಿಳಾ ಮತದಾರರು ಅಪಾರ ಬೆಂಬಲ ನೀಡಿದ್ದಾಗಿ ತಿಳಿದು ಬಂದಿದೆ. ಬಿಹಾರ 'ಕಾಡುರಾಜ್ಯ' ಎಂಬ ಹಣೆಪಟ್ಟಿಯಿಂದ ಮುಕ್ತಗೊಳಿಸಲಾಗಿದೆ. ಸುರಕ್ಷತೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ ಆದ್ಯತೆ ನೀಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಮಹಿಳೆಯರು ಸಂಪೂರ್ಣ ನಂಬಿಕೆ ಇಟ್ಟುಕೊಂಡಿದ್ದಾರೆ. ವಿಶೇಷವಾಗಿ, "ಜೀವಿಕಾ ದೀದಿ"ಯಂತಹ ಸ್ವ-ಸಹಾಯ ಗುಂಪುಗಳ ಯೋಜನೆಗಳು ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿರುವುದರಿಂದ ಮಹಿಳೆಯರು ತೃಪ್ತ ಭಾವನೆ ಹೊಂದಿದ್ದಾರೆ. ಇದರ ಹಿಂದೆ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯತಂತ್ರವು ಅಡಿಗಿದೆ ಎಂಬುದನ್ನು ಮರೆಯುವಂತಿಲ್ಲ.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ, ಈ ಚುನಾವಣಾ ಯಶಸ್ಸಿನ ಹಿಂದಿನ ಕಾರ್ಯತಂತ್ರಗಳನ್ನು ವಿವರಿಸಿದರು. ಮಹಿಳಾ ಮೋರ್ಚಾ ತಮ್ಮ ಪ್ರಚಾರ ಕಾರ್ಯವನ್ನು ಚುನಾವಣೆಗೆ ಮೊದಲೇ, ಅಂದರೆ ಜೂನ್-ಜುಲೈ ತಿಂಗಳಲ್ಲೇ ಬಿಹಾರದಲ್ಲಿ ಆರಂಭಿಸಿತ್ತು. ಪ್ರಚಾರಕ್ಕಾಗಿ ಏಳು ರಾಜ್ಯಗಳಿಂದ 300ಕ್ಕೂ ಹೆಚ್ಚು ಸ್ವಯಂಸೇವಕ ಸಹೋದರಿಯರು ಬಿಹಾರದಲ್ಲಿ ಸಂಚರಿಸಿದ್ದರು. ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇದರ ಜೊತೆಗೆ, ಸ್ಥಳೀಯ ಮಹಿಳಾ ಕಾರ್ಯಕರ್ತರು, ಅಧಿಕಾರಿಗಳು ಮತ್ತು ಸ್ವ-ಸಹಾಯ ಗುಂಪಿನ ಸದಸ್ಯರೊಂದಿಗೆ ನೇರ ಸಂಪರ್ಕ ಸಾಧಿಸಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನು ಅಂದುಕೊಂಡಂತೆ ಮಾಡಿ ಮುಗಿಸಿದ್ದರು.

ಎನ್‌ಡಿಎ ಪಕ್ಷವು ರಾಜ್ಯದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಹತ್ತಿರವಾಗಿತ್ತು. ಅವರನ್ನು ಭಾವನಾತ್ಮಕವಾಗಿ ಸಳೆಯಿತು. ಮಹಿಳಾ ಮತದಾರರನ್ನು ನೇರವಾಗಿ ತಲುಪಿ, ಅವರ ಸಮಸ್ಯೆಗಳನ್ನು ಆಲಿಸಿ, ಸರ್ಕಾರವು ಕೈಗೊಂಡ ಪರಿಹಾರ ಕ್ರಮಗಳನ್ನು ವಿವರಿಸುವುದು ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖ ತಂತ್ರವಾಗಿತ್ತು. ಅದರಂತೆ ಕ್ಷೇತ್ರಗಳಲ್ಲಿ ಓಡಾಡಿ ಕಾರ್ಯ ಸಾಧನೆ ಮಾಡಿದರು.
ಪ್ರಧಾನಿ ಯೋಜನೆಗಳಿಂದ ಮಹಿಳೆಯರಲ್ಲಿ ತೃಪ್ತ ಭಾವನೆ
ವನತಿ ಶ್ರೀನಿವಾಸನ್ ಅವರ ಪ್ರಕಾರ, ಬಿಹಾರದ ಮಹಿಳೆಯರು 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಯೋಜನೆಗಳಿಂದ ಪ್ರಯೋಜನ ಪಡೆದಿರುವುದು ಸ್ವತಃ ಅವರಿಗೆ ಅರಿವಿಗೆ ಬಂದಿದೆ. ವಸತಿ, ಶೌಚಾಲಯ ನಿರ್ಮಾಣ, ಹೆಚ್ಚಿದ ಸುರಕ್ಷತೆ ಮತ್ತು ಜೀವನಮಟ್ಟದ ಸುಧಾರಣೆಯಲ್ಲಿ ಕಂಡ ಬದಲಾವಣೆಗಳೇ ಬಿಜೆಪಿಗೆ ಅವರ ಬೃಹತ್ ಬೆಂಬಲಕ್ಕೆ ಕಾರಣ. ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಬಿಜೆಪಿ ಅವರಿಗೆ ಆತ್ಮವಿಶ್ವಾಸ ಮತ್ತು ಭದ್ರತೆಯ ಭಾವನೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಮತ್ತು ರಾಜ್ಯ ಘಟಕಗಳ ನಡುವಿನ ಅತ್ಯುತ್ತಮ ಸಮನ್ವಯವು ಈ ಚುನಾವಣಾ ಯಶಸ್ಸಿಗೆ ಕಾರಣವಾಗಿತು. ಬಿಹಾರದ ನಾಲ್ಕು ಪ್ರಮುಖ ವಲಯಗಳಿಗೆ ಪ್ರತ್ಯೇಕ ಉಸ್ತುವಾರಿಗಳನ್ನು ನೇಮಿಸಲಾಯಿತು. ಈ ಉಸ್ತುವಾರಿಗಳು ಮೂರು ತಿಂಗಳಿಗೂ ಹೆಚ್ಚು ಕಾಲ ನೆಲಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಮೇಯರ್‌ಗಳು, ಮಾಜಿ ಮೇಯರ್‌ಗಳು ಮತ್ತು ಮಹಿಳಾ ಜನಪ್ರತಿನಿಧಿಗಳನ್ನು ಕ್ಷೇತ್ರಗಳಿಗೆ ಕಳುಹಿಸಿ, ಮಹಿಳೆಯರ ಅಹವಾಲುಗಳನ್ನು ಆಲಿಸುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಸಿದರು. ತಂತ್ರಜ್ಞಾನವನ್ನು ಬಳಸಿಕೊಂಡು ವರ್ಚುವಲ್ ಸಭೆಗಳು ಮತ್ತು ಗುಂಪು ಕರೆಗಳ ಮೂಲಕ ಪ್ರಚಾರದ ಮೇಲ್ವಿಚಾರಣೆ ನಡೆಸಿದರು.
Joined Hon’ble Chief Minister of Delhi, Smt. @gupta_rekha Ji, at Ashok Vihar Phase-1, Delhi for the inauguration of “Kanak Bal Vatika”, dedicated to the memory of Late Smt. Kanak Agarwal Ji, former National Treasurer, BJP Mahila Morcha.
— Vanathi Srinivasan (@VanathiBJP) November 13, 2025
Her life of dedication and service… pic.twitter.com/k0AVc1pb6u
ಬಿಹಾರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ರಾಜಕೀಯ ಜಾಗೃತಿಯನ್ನು ಬಿಜೆಪಿ ಪ್ರಮುಖ ಅವಕಾಶವಾಗಿ ಪರಿಗಣಿಸಿದೆ. ಹಿಂದೆ ಮಹಿಳೆಯರನ್ನು ಕೇವಲ ಮತಬ್ಯಾಂಕ್ ಎಂದು ಮಾತ್ರ ನೋಡಲಾಗುತ್ತಿತ್ತು. ಆದರೆ ಈಗ ಮಹಿಳೆಯರು ಪ್ರಚಾರ ಸಭೆಗಳಲ್ಲಿ ಭಾಗವಹಿಸಲು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ರಾಜಕೀಯದಲ್ಲಿ ಸಕ್ರಿಯರಾಗಲು ಮುಂದೆ ಬರುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಮಹಿಳಾ ಮೋರ್ಚಾ ನೀಡಿದ ಈ ಪ್ರೋತ್ಸಾಹ ಮತ್ತು ಭದ್ರತೆಯ ಭಾವನೆಯು ಮಹಿಳಾ ಮತದಾರರನ್ನು ಪಕ್ಷದತ್ತ ಇನ್ನಷ್ಟು ಸೆಳೆದಿದೆ. ಈ ಸಮಗ್ರ ಕಾರ್ಯತಂತ್ರ, ನಿರಂತರವಾದ ನೆಲಮಟ್ಟದ ಕಾರ್ಯಚಟುವಟಿಕೆ ಮತ್ತು ಮಹಿಳೆಯರೊಂದಿಗೆ ಸ್ಥಾಪಿಸಿದ ಸಂಪರ್ಕವು 2025ರ ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಮಹಿಳಾ ಬೆಂಬಲವನ್ನು ಬಲಪಡಿಸಿತು ಎಂದು ವಿಶ್ಲೇಷಿಸಲಾಗಿದೆ. ಅದರ ಪ್ರತಿಫಲವಾಗಿಯೇ ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎ ಪರ ಫಲಿತಾಂಶ ಬಂದಿದೆ. ಅಂತಿಮ ಫಲಿತಾಂಶದಲ್ಲೂ ಎನ್‌ಡಿಗೆ ನಿರಂತರ ಮುನ್ನಡೆ ಸಾಧಿಸಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications