40 ಕೊಲೆಗೈದ ಗ್ಯಾಂಗ್ ಸ್ಟರ್ ಬಜರಂಗಿ ಹಿಂದಿನ ಕಥೆ!
ಲಕ್ನೋ, ಜುಲೈ 09 : ಬಾಘ್ಪತ್ ಜಿಲ್ಲಾ ಕಾರಾಗೃಹದಲ್ಲಿಂದು ಕುಖ್ಯಾತ ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಬಜರಂಗಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಮೂಲಕ ಎರಡು ದಶಕಗಳ ಕಾಲದ ರಕ್ತಚರಿತ್ರೆಗೆ ಫುಲ್ ಸ್ಟಾಪ್ ಬಿದ್ದಿದೆ.
ಸುಲಿಗೆ ಪ್ರಕರಣವೊಂದರಲ್ಲಿ ಝಾನ್ಸಿ ಜೈಲಿನಲ್ಲಿದ್ದ ಜರಂಗಿಯನ್ನು ಬಾಘ್ಪತ್ ನ್ಯಾಯಾಲಯಕ್ಕೆ ಒಪ್ಪಿಸುವ ಸಲುವಾಗಿ ಜು.07 ರಂದು ಝಾನ್ಸಿಯಿಂದ ಕರೆತರಲಾಗಿತ್ತು. ಆದರೆ, ಇಂದು ಜೈಲಿನಲ್ಲೇ ಸಂಚು ಮಾಡಿ, ಕೊಲೆ ಮಾಡಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬಜರಂಗಿಯ ಪತ್ನಿ ಸೀಮಾ ಸಿಂಗ್, ತಮ್ಮ ಪತಿಯ ಪ್ರಾಣಕ್ಕೆ ಅಪಾಯವಿದೆ, ಅವರಿಗೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿಕೊಂಡಿದ್ದರು.
ಯಾರು ಈ ಮುನ್ನಾ ಬಜರಂಗಿ? ಬಿಎಸ್ಪಿ ಶಾಸಕ ಲೋಕೇಶ್ ದೀಕ್ಷಿತ್ ಗೆ ಜೀವ ಬೆದರಿಕೆ, ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಕೊಲೆ ಕೇಸಿನಲ್ಲಿ ಬಜರಂಗಿ ಆರೋಪಿಯಾಗಿ ಜೈಲು ಸೇರಿದ್ದ.

1984ರಲ್ಲಿ ಮೊದಲ ಕೊಲೆ
* ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಬಜರಂಗಿ, ಉತ್ತರಪ್ರದೇಶದ ಜುನಾಪುರದಲ್ಲಿ 1967ರಲ್ಲಿ ಜನಿಸಿದರು.
* 5ನೇ ತರಗತಿ ತನಕ ಮಾತ್ರ ಓದಿದ್ದ ಮುನ್ನಾ ಬಜರಂಗಿಗೆ ಚಿಕ್ಕಂದಿನಿಂದಲೇ ಶಸ್ತ್ರಾಸ್ತ್ರಗಳ ಬಗ್ಗೆ ಒಲವಿತ್ತು.
* ಮುನ್ನಾ ಬಜರಂಗಿಗೆ 17ನೇ ವಯಸ್ಸಿದ್ದಾಗ, ಆತನ ಮೇಲೆ ಮೊದಲ ಕೇಸ್ ಬಿತ್ತು. 1984ರಲ್ಲಿ ಮೊದಲ ಕೊಲೆ ಮಾಡಿ, ಜೈಲು ಸೇರಿದ್ದ.

ಸಾವಿನ ದವಡೆಯಿಂದ ಪಾರಾಗಿದ್ದ
* 1998ರಲ್ಲಿ ಮುನ್ನ ಬಜರಂಗಿ ಮೇಲೆ ದೆಹಲಿ ಪೊಲೀಸರು ಗುಂಡಿನ ಮಳೆಗೈದಿದ್ದರು. ಬಜರಂಗಿ ಕಥೆ ಮುಗಿಯಿತು ಎಂದು ಶವಾಗಾರಕ್ಕೂ ಕಳಿಸಲಾಗಿತ್ತು. ಆದರೆ, ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು.
* 2012ರಲ್ಲಿ ಅಪ್ನಾದಳ ಪಕ್ಷದಿಂದ ಟಿಕೆಟ್ ಪಡೆದು, ಜನಾಪುರದ ಅರಿಯಾಹು ಕ್ಷೇತ್ರದಿಂದ ಸ್ಪರ್ಧಿಸಿದ್ದ.
* ಅಪ್ನಾದಳ ಹಾಗೂ ದಿ ಪೀಸ್ ಪಾರ್ಟಿಯ ಬೆಂಬಲದಿಂದ ಜಂಟಿ ಅಭ್ಯರ್ಥಿಯಾಗಿ ಯುಪಿ ಅಸೆಂಬ್ಲಿಗೆ ಸ್ಪರ್ಧಿಸಿದ್ದ ಬಜರಂಗಿ, ಅಭ್ಯರ್ಥಿಯಾದ ಸಂದರ್ಭದಲ್ಲಿ ಜೈಲಿನಲ್ಲಿದ್ದ.

ರಾಜಕೀಯರಂಗಕ್ಕೂ ಧುಮುಕಿದ್ದ ಬಜರಂಗಿ
* 2013ರಲ್ಲಿ ಭೂಗತ ಲೋಕದಿಂದ ರಾಜಕೀಯರಂಗಕ್ಕೆ ಧುಮುಕಿದ ಮುಖ್ತಾರ್ ಅನ್ಸಾರಿ ಅವರ ಜತೆ ಬಜರಂಗಿ ಕೈ ಜೋಡಿಸಿದ್ದ.
* 2016ರಲ್ಲಿ ಮಾರ್ಚ್ ನಲ್ಲಿ ಬಜರಂಗಿಯ ಅಳಿಯ ಪುಷ್ಪಜೀತ್ ನನ್ನು ಲಕ್ನೋದ ವಿಕಾಸ್ ನಗರ ಕಾಲೋನಿಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
* ಜೂನ್ 29ರಂದು ಬಜರಂಗಿಯ ಪತ್ನಿ ಸೀಮಾ ಸಿಂಗ್, ತಮ್ಮ ಪತಿಯ ಪ್ರಾಣಕ್ಕೆ ಅಪಾಯವಿದೆ ಎಂದು ಸುದ್ದಿಗೋಷ್ಠಿ ಕರೆದು ತಮ್ಮ ಗೋಳು ತೋಡಿಕೊಂಡಿದ್ದರು.
|
ಝಾನ್ಸಿಯ ಜೈಲಿನಲ್ಲಿ ನಡೆದ ಕೃತ್ಯ
ಜೈಲಿನಲ್ಲಿದ್ದ ಸಹ ಕೈದಿಯಿಂದ ನಡೆದ ಕೃತ್ಯ, ಕೃತ್ಯಕ್ಕೆ ಬಳಸಲಾದ ಪಿಸ್ತೂಲ್ ಅನ್ನು ಹತ್ತಿರದ ಮೋರಿಯೊಂದರಲ್ಲಿ ಎಸೆಯಲಾಗಿತ್ತು. ಸಿಎಂ ಕಚೇರಿಗೆ ಮನವಿ ಮಾಡಿ, ಬಜರಂಗಿಗೆ ರಕ್ಷಣೆ ನೀಡುವಂತೆ ಕೋರಲಾಗಿತ್ತು ಎಂದು ಮುನ್ನಾ ಬಜರಂಗಿ ಪರ ವಕೀಲ ಶ್ರೀವಾಸ್ತವ ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications