ಉದಯನಿಧಿ ಸ್ಟಾಲಿನ್‌ಗೆ "ಅನ್‌ಫಿಟ್ ಎನ್ನುವ ನಾನು" ಎಂದಿದ್ದು ಯಾರು
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ರಾಜಕೀಯ ಪ್ರವೇಶದ ಕೆಲವೇ ವರ್ಷಗಳ ಒಳಗಾಗಿ ಅವರಿಗೆ ಸಚಿವ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಇದೀಗ ತಮಿಳುನಾಡು ರಾಜಕೀಯದಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ನೆಪೋ ಪೊಲಿಟಿಕಲ್ ಕಿಡ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ತಮಿಳುನಾಡಿನ ಆಡಳಿತ ಪಕ್ಷದಲ್ಲಿ ಪ್ರಭಾವಿ ನಾಯಕರು ಇದ್ದರೂ ಉದಯನಿಧಿ ಸ್ಟಾಲಿನ್ ಅವರನ್ನು ಮುನ್ನೆಲೆಗ ತರುತ್ತಿರುವುದು.
ತಮಿಳುನಾಡಿನಲ್ಲಿ ಈಗ ಡಿಎಂಕೆ ಪಕ್ಷ ಆಡಳಿತದಲ್ಲಿ ಇದೆ. ಡಿಎಂಕೆ ಎಂದರೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ. ಈ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಐದೇ ವರ್ಷದಲ್ಲಿ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಲಭಿಸಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಗಳಿಸಿರುವುದು ತಮಿಳುನಾಡು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಉದಯನಿಧಿ ಸ್ಟಾಲಿನ್ ಅವರು ನೆಪೋ ಪೊಲಿಟಿಕಲ್ ಕಿಡ್ ಎಂದು ಜನ ಟೀಕಿಸುತ್ತಿದ್ದಾರೆ. ತಮಿಳುನಾಡಿನ ಡಿಎಂಕೆಯಲ್ಲಿ ಸ್ವಜನಪಕ್ಷಪಾತ (nepotism) ನಡೆಗೆ ಡಿಎಂಕೆ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಅಪ್ಪ ಮುಖ್ಯಮಂತ್ರಿ ಹಾಗೂ ಪುತ್ರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದು ತಮಿಳುನಾಡು ರಾಜಕೀಯದಲ್ಲಿ ಇದೇ ಮೊದಲೇನು ಅಲ್ಲ ಬಿಡು. ಈ ಹಿಂದೆನೂ ಇದು ಆಗಿದೆ. ಅಂದಿನ ಕರುಣಾನಿಧಿ ನೇತೃತ್ವದ ಆಡಳಿತದಲ್ಲಿ ಸ್ಟಾಲಿನ್ ಇದ್ದರು.
ಅಯೋಗ್ಯ ಟ್ವೀಟ್ ಟ್ರೆಂಡ್: ಉದಯನಿಧಿ ಸ್ಟಾಲಿನ್ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ (ಭಾನುವಾರ) ತಮಿಳುನಾಡಿನಲ್ಲಿ "ಅನ್‌ಫಿಟ್ ಎನ್ನುವ ನಾನು" ಎನ್ನುವ ವಿಷಯವು ಭಾರೀ ಟ್ರೆಂಡ್ ಆಗಿದೆ. ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ, ಉದಯನಿಧಿ ಸ್ಟಾಲಿನ್ ಎನ್ನುವ ನಾನು ಎಂದು ಹೇಳುವುದನ್ನು ಅಲ್ಲಿನ ಜನ ಅನ್‌ಫಿಟ್ ಎನ್ನುವ ನಾನು ಎನ್ನುವ ರೀತಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ರೆಂಡ್ ಮಾಡಿದ್ದರು. ಅಂದರೆ ಅಯೋಗ್ಯ (ಅರ್ಹನಲ್ಲದ) ನಾನು ಎನ್ನುವ ಅರ್ಥ ಬರುವಂತೆ ಟ್ರೋಲ್ ಮಾಡಲಾಗಿದೆ.

ಸ್ವಜನ ಪಕ್ಷಪಾತಕ್ಕೆ ಸಾಕ್ಷಿಯಾಗಿರುವ ಡಿಎಂಕೆ: ಡಿಎಂಕೆ ಪಕ್ಷವು ತಮಿಳುನಾಡಿನಲ್ಲಿ ಸ್ವಜಪಕ್ಷಪಾತಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನಲ್ಲಿ ಈ ಪಕ್ಷವನ್ನು ವಾರಿಸು ಪಾರ್ಟಿ (varisu politics) ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಈ ಪಾರ್ಟಿಯಲ್ಲಿ ಈ ಹಿಂದೆಯೂ
2009ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಂ. ಕರುಣಾನಿಧಿ ಇದ್ದರೆ, ಆಗ ಅವರ ಪುತ್ರ ಎಂ.ಕೆ ಸ್ಟಾಲಿನ್ ಅವರು (ತಮಿಳುನಾಡಿನ ಮೊದಲ ಉಪಮುಖ್ಯಮಂತ್ರಿ) ಮೊದಲ ಬಾರಿ ಉಪ ಮುಖ್ಯಮಂತ್ರಿಯಾಗಿದ್ದರು. ತಮಿಳುನಾಡಿನ ಮೊದಲ ಉಪ ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟಾಲಿನ್ ಅಧಿಕಾರ ನಡೆಸಿದ್ದರು.
ಇದೀಗ ಎಂ.ಕೆ ಸ್ಟಾಲಿನ್ ಸರ್ಕಾರದಲ್ಲಿ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಪಕ್ಷದಲ್ಲಿ ಎಂ ಕರುಣಾನಿಧಿ, ಎಂ.ಕೆ ಸ್ಟಾಲಿನ್, ಕನಿಮೊಳಿ, ಉದಯ್, ದಯಾನಿಧಿ,ಮುರಸೋಲಿ, ಅಳಗಿರಿ ಹೀಗೆ... ಎಲ್ಲರೂ ಒಂದೇ ಕುಟುಂಬದವರು.
ಉದಯನಿಧಿ ಸ್ಟಾಲಿನ್ ರಾಜಕೀಯ ಹಿನ್ನೆಲೆ: ಉದಯನಿಧಿ ಸ್ಟಾಲಿನ್ ಅವರು ಚೆನ್ನೈ ಚೆಪಾಕ್ಕಂ - ತಿರುವಲ್ಲಿಕೇಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದಿದ್ದರು. ಕಳೆದ ವರ್ಷವಷ್ಟೇ ಅವರು ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಇದೀಗ ತಮಿಳುನಾಡಿನ ಮೂರನೇ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.












Click it and Unblock the Notifications