ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸಂಕ್ಷಿಪ್ತ ಪರಿಚಯ

Posted By: Gururaj
Subscribe to Oneindia Kannada

ನವದೆಹಲಿ, ಆಗಸ್ಟ್. 28 : ನ್ಯಾಯಮೂರ್ತಿ ದೀಪಕ್ ಮಿಶ್ರಾ 45ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜೆ.ಎಸ್.ಖೇಹರ್ ಭಾನುವಾರ ನಿವೃತ್ತರಾಗಿದ್ದಾರೆ.

1953ರ ಅಕ್ಟೋಬರ್ 3 ರಂದು ಜನಿಸಿದ ದೀಪಕ್ ಮಿಶ್ರಾ ಅವರು, 2018ರ ಅಕ್ಟೋಬರ್ 2ರಂದು ನಿವೃತ್ತರಾಗಲಿದ್ದಾರೆ. 1977ರ ಫೆಬ್ರವರಿ 14ರಂದು ವಕೀಲರಾಗಿ ಸೇವೆ ಆರಂಭಿಸಿದ ದೀಪಕ್ ಮಿಶ್ರಾ ಅವರು, ಸಿವಿಲ್, ಕ್ರಿಮಿನಲ್, ಕಂದಾಯ, ಸೇವಾ ತೆರಿಗೆ ಮುಂತಾದ ಪ್ರಕರಣಗಳಲ್ಲಿ ಓಡಿಸ್ಸಾ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

Who is Justice Dipak Misra, the 45th CJI of India

ದೀಪಕ್ ಮಿಶ್ರಾ ಅವರು ಓಡಿಸ್ಸಾ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ 1996ರ ಜನವರಿ 17ರಂದು ನೇಮಕವಾದರು. ಮಾರ್ಚ್ 3, 1997ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆಗೊಂಡರು.

ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ

ಡಿಸೆಂಬರ್ 19, 1997ರಲ್ಲಿ ಅವರು ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಡಿಸೆಂಬರ್ 23, 2009ರಲ್ಲಿ ನೇಮಕಗೊಂಡರು. ಮೇ 24, 2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು.

ದೀಪಕ್ ಮಿಶ್ರಾ ಅವರು ಅಕ್ಟೋಬರ್ 10, 2011ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೀಪಕ್ ಮಿಶ್ರಾ ಓಡಿಸ್ಸಾ ಮೂಲದ ಮೂರನೇ ಮುಖ್ಯನ್ಯಾಯಮೂರ್ತಿಗಳು. ಹಿಂದೆ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ, ಜಿ.ಬಿ.ಪಟ್ನಾಯಕ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.

ದೀಪಕ್ ಮಿಶ್ರಾ ಅವರು ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆನನ್ ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Who is Justice Dipak Misra
English summary
Justice Dipak Misra will be sworn in as the 45th Chief Justice of India today. He takes over from Justice J S Khehar who retired on Sunday. Justice Misra would retire on October 2 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X