Devendra Fadnavis: ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವಿಸ್ ಯಾರು, ರಾಜಕೀಯ ಹಿನ್ನೆಲೆ ಏನು: ಕಿರಿಯ ಮೇಯರ್‌ನಿಂದ ಸಿ.ಎಂ ವರೆಗೆ.
Devendra Fadnavis: ಮಹಾರಾಷ್ಟ್ರ ರಾಜಕೀಯದಲ್ಲಿ ಇದೀಗ ಹೊಸ ಪರ್ವ ಶುರುವಾಗಿದೆ. ಸೋತು ಸುಣ್ಣವಾಗಿದ್ದ ಬಿಜೆಪಿಯನ್ನು ಮತ್ತೆ ಬಲಿಷ್ಠವಾಗಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರಿಗೆ ಪಟ್ಟಾಭಿಷೇಕ ಮಾಡುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ. ಇನ್ನು ದೇವೇಂದ್ರ ಫಡ್ನವಿಸ್ ಅವರು ಈಗಾಗಲೇ ಒಂದು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು ಅಲ್ಲದೇ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ದೇವೇಂದ್ರ ಫಡ್ನವಿಸ್ ರಾಜಕೀಯ ಹಿನ್ನೆಲೆ ಏನು ಹಾಗೂ ಅವರ ವ್ಯಕ್ತಿತ್ವವೇನು ಎನ್ನುವ ವಿವರ ಇಲ್ಲಿದೆ.
54 ವರ್ಷದ ದೇವೇಂದ್ರ ಫಡ್ನವಿಸ್ ಅನುಭವಿ ರಾಜಕಾರಣಿ. ಮೂರು ದಶಕಗಳಿಂದ ರಾಜಕೀಯದಲ್ಲಿ ಇದ್ದಾರೆ. ನಾಗ್ಪುರದಲ್ಲಿ ಮೇಯರ್ ಆಗುವ ಮೂಲಕ ಇವರ ರಾಜಕೀಯ ಪ್ರವೇಶ ಪ್ರಾರಂಭವಾಯಿತು. ಅಲ್ಲಿ ಕಾರ್ಪೊರೇಟ್ ಆಗಿಯೂ ಇವರು ಮಿಂಚಿದ್ದರು.ಇವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಕಾನೂನಿನಲ್ಲಿ ಪದವಿ ಮಾಡಿದ್ದಾರೆ. ಅಲ್ಲದೇ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ 10 ದಿನಗಳಿಗೂ ಹೆಚ್ಚು ಕಾಲದ ನಂತರ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಘೋಷಣೆಯಾಗಿದೆ. ಮಹಾರಾಷ್ಟ್ರದಲ್ಲಿ ಇದೀಗ ಮಹಾಯುತಿ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಣಿಯನ್ನು ಹಿಡಿದಿದೆ. ಇನ್ನು ದೇವೇಂದ್ರ ಫಡ್ನವಿಸ್ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಚುನಾವಣೆಯ ಫಲಿತಾಂಶ ಪ್ರಕವಾದಾಗಿನಿಂದಲೂ ಹೇಳುತ್ತಲ್ಲೇ ಇದೆ. ಆದರೆ, ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಡಿಮ್ಯಾಂಡ್ ಹಾಗೂ ತಕರಾರಿನಿಂದ ಈ ಪ್ರಕ್ರಿಯೆ ಮುಂದೂಡಿಕೆ ಆಗುತ್ತಲ್ಲೇ ಇತ್ತು. ಇದೀಗ ಅಧಿಕೃತವಾಗಿ ಬಿಜೆಪಿಯು ಬುಧವಾರ ಡಿಸೆಂಬರ್ 4ಕ್ಕೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರ ಹೆಸರು ಘೋಷಿಸಿದೆ. ಮಹಾಯುತಿ ಮೈತ್ರಿಕೂಟವು ಸಹ ದೇವೇಂದ್ರ ಫಡ್ನವಿಸ್ ಅವರನ್ನು ಅಂತಿಮವಾಗಿ ಒಪ್ಪಿಕೊಂಡಿದೆ.
ದೇವೇಂದ್ರ ಫಡ್ನವಿಸ್ ಅವರು ಕಳೆದ ಮೂರು ದಶಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಮೃಧುಸ್ವಭಾವದ ವ್ಯಕ್ತಿತ್ವ ಹಾಗೂ ಕಳಂಕ ರಹಿತ ಆಡಳಿತ ಇವರಿಗೆ ಇರುವ ಪ್ಲಸ್ ಪಾಯಿಂಟ್ಸ್‌ಗಳು. ಅವರನ್ನು ಇದೀಗ ಮಹಾರಾಷ್ಟ್ರ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 2019ರಲ್ಲಿ ಬಿಜೆಪಿ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಿತ್ತು. ಆದರೆ, ಬಿಜೆಪಿಗೆ ನಿರೀಕ್ಷಿತ ವಿಜಯ ಸಿಗಲಿಲ್ಲ. ಅಲ್ಲದೇ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಒಳ್ಳೆಯ ಸ್ಥಾನಗಳನ್ನೇನು ಗೆಲ್ಲಲಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯೊಂದೇ 132 ಸೀಟುಗಳನ್ನು ಗೆದ್ದಿದೆ. ಈ ರಾಜ್ಯದ ಮ್ಯಾಜಿಕ್‌ಸಂಖ್ಯೆ (ಬಹುಮತ) 145 ಆಗಿದೆ. ಹೀಗಾಗಿ, ಬಿಜೆಪಿಯಿಂದಲೇ ಈ ಬಾರಿ ಮುಖ್ಯಮಂತ್ರಿ ಆಯ್ಕೆ ಖಚಿತ ಎನ್ನಲಾಗಿತ್ತು.

ಆರ್‌ಎಸ್‌ಎಸ್ ಹಿನ್ನೆಲೆ: ದೇವೇಂದ್ರ ಫಡ್ನವಿಸ್ ಅವರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಲ್ಲ. ಮಧ್ಯಮ ವರ್ಗದಿಂದ ರಾಜಕೀಯ ಪ್ರವೇಶ ಮಾಡಿ. ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಇತಿಹಾಸವನ್ನು ಇವರು ಸೃಷ್ಟಿ ಮಾಡಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್‌ನೊಂದಿಗೆ ಇವರಿಗೆ ಉತ್ತಮ ಒಡನಾಟವಿದೆ. ಇದೇ ಕಾರಣಕ್ಕೆ ಇವರು ಸೋತರೂ ಸಹ ಹಲವು ಬಾರಿ ಇಲ್ಲಿ ಆರ್‌ಎಸ್‌ಎಸ್ ಇವರ ಕೈಹಿಡಿದಿದೆ.
ಭಾರತದ ಎರಡನೇ ಕಿರಿಯ ಮೇಯರ್: ಫಡ್ನವಿಸ್ ಅವರು ದೇಶದ ಅಂತ್ಯತ ಕಿರಿಯ ಹಾಗೂ ಎರಡನೇ ಮೇಯರ್ ಎನ್ನುವ ಖ್ಯಾತಿಯನ್ನು ಗಳಿಸಿದ್ದರು. 1992ರಲ್ಲೇ ಇವರ ರಾಜಕೀಯ ಜೀವನ ಪ್ರಾರಂಭವಾಗಿತ್ತು. ಅಲ್ಲದೇ ನಾಗ್ಪುರ ಪಾಲಿಕೆಯ ಸದಸ್ಯನಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಮೇಯರ್ ಸಹ ಆಗಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಮೇಯರ್ ಆಗಿರುವ ಹೆಗ್ಗಳಿಕೆ ದೇವೇಂದ್ರ ಫಡ್ನವಿಸ್ ಅವರಿಗೆ ಇದೆ. 1999ರಲ್ಲಿ ಅವರು ಮೊದಲ ಬಾರಿ ಮಹಾರಾಷ್ಟ್ರದ ವಿಧಾನಸಭೆ ಪ್ರವೇಶ ಮಾಡಿದರು. ಇದಾದ ಮೇಲೆ ಅವರು ಇಂದಿಗೂ ಸೋಲಿಲ್ಲದ ಸರದಾರ!












Click it and Unblock the Notifications