ವ್ಯಕ್ತಿ ಚಿತ್ರ : ಮೇಘಗಳ ನಾಡಿನ ಸಿಎಂ ಕೊನ್ರಾಡ್ ಸಂಗ್ಮಾ

ಬೆಂಗಳೂರು, ಮಾರ್ಚ್ 06: ಈಶಾನ್ಯ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸುವಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಜೋಡಿ ಯಶಸ್ವಿಯಾಗಿದೆ.

ಚುನಾವಣೆ ಫಲಿತಾಂಶದ ನಂತರ ಅತಂತ್ರ ಸ್ಥಿತಿಯಲ್ಲಿದ್ದ ಮೇಘಾಲಯದಲ್ಲೂ ಬಿಜೆಪಿ ಮಿತ್ರ ಪಕ್ಷ ಅಧಿಕಾರ ಗದ್ದುಗೆ ಹಿಡಿದೆ. ಮೇಘಗಳ ನಾಡಿನ ಮುಖ್ಯಮಂತ್ರಿಯಾಗಿ ಕೊನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೊನ್ರಾಡ್ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಸ್ಥಾಪಕ ಪಿ.ಎ ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಹಾಗೂ ಪುತ್ರ ಜೇಮ್ಸ್ ಸಂಗ್ಮಾ ಇಬ್ಬರು ಕ್ರಮವಾಗಿ ಡೌತ್ ಟುರಾ ಹಾಗೂ ಡಡೆಂಗ್ರೆ ಕ್ಷೇತ್ರಗಳಿಂದ ಜಯಭೇರಿ ಬಾರಿಸಿದ್ದಾರೆ.

ಈ ನಡುವೆ ಎನ್ ಪಿಪಿಯ ಅಧ್ಯಕ್ಷರಾಗಿರುವ ಕೊನ್ರಾಡ್ ಸಂಗ್ಮಾ ಅವರು ಇತರೆ ಅಭ್ಯರ್ಥಿಗಳ ಬೆಂಬಲದಿಂದ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಐದು ಪಕ್ಷಗಳ ಮೈತ್ರಿಕೂಟ ರಚಿಸಿಕೊಂಡು 34 ಶಾಸಕರ ಬೆಂಬಲದೊಂದಿಗೆ ಅಧಿಕಾರ ಸ್ಥಾಪಿಸಿದ್ದಾರೆ.

ಹಾಲಿ ಎನ್ ಪಿಪಿ ಅಧ್ಯಕ್ಷ ಕೊನ್ರಾಡ್ ಸಂಗ್ಮಾ

ಹಾಲಿ ಎನ್ ಪಿಪಿ ಅಧ್ಯಕ್ಷ ಕೊನ್ರಾಡ್ ಸಂಗ್ಮಾ

27 ಜನವರಿ 1978ರಂದು ಜನಿಸಿದ ಕೊನ್ರಾಡ್ ಸಂಗ್ಮಾ ಅವರು ಮೇಘಾಲಯದ 8ನೇ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಪಕ್ಷದ ಅಧ್ಯಕ್ಷರಾಗಿದ್ದು, ಸೆಲ್ಸೆಲ್ಲಾ(ಎಸ್ ಟಿ) ಕ್ಷೇತ್ರ, ಪಶ್ಚಿಮ ಗರೋ ಹಿಲ್ ಜಿಲ್ಲೆಯಿಂದ ಆಯ್ಕೆಯಾದವರು.

ಪಿ.ಎ ಸಂಗ್ಮಾ ಅವರ ಪುತ್ರ

ಪಿ.ಎ ಸಂಗ್ಮಾ ಅವರ ಪುತ್ರ

ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಪಕ್ಷದ ಸ್ಥಾಪಕ, ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ ಸಂಗ್ಮಾ ಅವರ ಪುತ್ರ ಸಂಗ್ಮಾ.

ಅಗಾಥಾ ಸಂಗ್ಮಾ ಭವಿಷ್ಯದ ನಾಯಕಿ

ಅಗಾಥಾ ಸಂಗ್ಮಾ ಭವಿಷ್ಯದ ನಾಯಕಿ

ಕೊನ್ರಾಡ್ ಸಂಗ್ಮಾ ಅವರ ಸೋದರಿ ಆಗಾಥಾ ಸಂಗ್ಮಾ ಅವರು 15ನೇ ಲೋಕಸಭಾ ಸದಸ್ಯೆಯಾಗಿದ್ದರು. ಕೇಂದ್ರದ ಮಾಜಿ ಸಚಿವೆಯಾಗಿದ್ದು, ಭವಿಷ್ಯದ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ. ಸೋದರ ಜೇಮ್ಸ್ ಸಂಗ್ಮಾ ಅವರು ಮೇಘಾಲಯ ಅಸೆಂಬ್ಲಿಯ ಚೀಫ್ ವಿಪ್ ಆಗಿದ್ದಾರೆ.

ಮುಕುಲ್ ಸಂಗ್ಮಾ ಅಧಿಕಾರ ಅಂತ್ಯ

ಮುಕುಲ್ ಸಂಗ್ಮಾ ಅಧಿಕಾರ ಅಂತ್ಯ

ಮುಕುಲ್ ಸಂಗ್ಮಾ ಅಧಿಕಾರ ಅಂತ್ಯ ಕಂಡಿದೆ. 2008ರಲ್ಲಿ ಮೇಘಾಲಯದ ಕಿರಿಯ ವಯಸ್ಸಿನಲ್ಲೇ ವಿತ್ತ ಸಚಿವರೆನಿಸಿಕೊಂಡಿದ್ದ ಕೊನ್ರಾಡ್ ಅವರು ಸದ್ಯ ತುರಾ ಲೋಕಸಭೆ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+