• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧುಮೇಹಕ್ಕೆ ಯಾವ ಚಿಕಿತ್ಸಾ ವಿಧಾನ ಉತ್ತಮ; ಸಮೀಕ್ಷಾ ವರದಿ

|

ಬೆಂಗಳೂರು, ಸೆಪ್ಟೆಂಬರ್ 08 : "ಉಪವಾಸದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸುವ ಪಾಶ್ಚಿಮಾತ್ಯ ವಿಧಾನ ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರಿಗೆ ಸೂಕ್ತವಾಗಿರುವುದಿಲ್ಲ" ಎಂದು ಡಾ. ವಿ ಮೋಹನ್ ಹೇಳಿದರು.

"ಕಾರ್ಬೊಹೈಡ್ರೇಟ್ ಅಧಿಕವಾಗಿರುವ ಆಹಾರವನ್ನು ಭಾರತೀಯರು ಸೇವಿಸುತ್ತಾರೆ. ಆದ್ದರಿಂದ, ಊಟದ ನಂತರ ರಕ್ತದ ಸಕ್ಕರೆ ಮಟ್ಟ ಹೆಚ್ಚಳವಾಗುತ್ತದೆ. ಅದನ್ನೂ ಸಹ ಪತ್ತೆ ಹಚ್ಚಬೇಕಾಗುತ್ತದೆ" ಎಂದು ಡಾ. ವಿ. ಮೋಹನ್ ವಿವರಣೆ ನೀಡಿದರು.

ಜಗತ್ತಿನಲ್ಲಿ ಕೇವಲ 43 ಜನರಲ್ಲಷ್ಟೇ ಇರುವ ಈ ರಕ್ತದ ಮಾದರಿ ಬಗ್ಗೆ ಕೇಳಿದ್ದೀರಾ?

ದೇಶಾದ್ಯಂತ ವೈದ್ಯರೊಂದಿಗೆ ನಡೆಸಿದ ಸಮೀಕ್ಷೆಯೊಂದರ ಫಲಿತಾಂಶಗಳನ್ನು 13ನೇ ರಾಷ್ಟ್ರೀಯ ಇನ್ಸುಲಿನ್ ಶೃಂಗಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ಡಾ. ಮೋಹನ್ಸ್ ಡಯಾಬಿಟಿಸ್ ಸ್ಪೆಸಿಯಾಲಿಟಿಸ್ ಸೆಂಟರ್ ಪ್ರೈವೇಟ್ ಲಿ. ಚೇರ್ಮನ್ ಡಾ. ವಿ. ಮೋಹನ್ ಇದರಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಲ್ಲಿ ಶೇ.19ರಷ್ಟು ಗರ್ಭಿಣಿಯರಿಗೆ ಮಧುಮೇಹ:ಸಮೀಕ್ಷೆ

ಶೃಂಗಸಭೆಯಲ್ಲಿ ಪ್ರಮುಖ ನಿರ್ನಾಳಗ್ರಂಥಿ ತಜ್ಞರು ಮತ್ತು ಮಧುಮೇಹ ತಜ್ಞರನ್ನೂ ಒಳಗೊಂಡಂತೆ 450ಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು. ಮಾಜಿ ಕ್ರಿಕೆಟಿಗ ಮತ್ತು ನೋವೊ ನಾರ್ಡಿಸ್ಕ್ ಬ್ರ್ಯಾಂಡ್‌ ಅಂಬಾಸಿಡರ್ ಅನಿಲ್ ಕುಂಬ್ಳೆ ಸಹ ಇದರಲ್ಲಿ ಪಾಲ್ಗೊಂಡಿದ್ದರು.

GST: ಸಕ್ಕರೆ, ಟೀ, ಕಾಫಿ ಬೆಲೆ ಇಳಿಕೆ

ಮಧಮೇಹಿಗಳಿಗೆ ಯಾವ ಚಿಕಿತ್ಸೆ

ಮಧಮೇಹಿಗಳಿಗೆ ಯಾವ ಚಿಕಿತ್ಸೆ

"ಪಾಶ್ಚಿಮಾತ್ಯ ವಿಧಾನದ ಬದಲಿಗೆ, ಉಪವಾಸದ ಮತ್ತು ಊಟದ ನಂತರದ ರಕ್ತದ ಸಕ್ಕರೆಯ ಮಟ್ಟಗಳೆರಡನ್ನೂ ಪತ್ತೆಹಚ್ಚಿ ಚಿಕಿತ್ಸೆ ನೀಡುವ ವಿಧಾನವು ಮಧುಮೇಹವಿರುವ ಹೆಚ್ಚಿನ ಭಾರತೀಯರಿಗೆ ಹೆಚ್ಚು ಸೂಕ್ತವಾಗುತ್ತದೆ" ಎಂದು ಡಾ. ವಿ ಮೋಹನ್ ಹೇಳಿದರು.

ಆಹಾರ ಕ್ರಮ ಕಾಪಾಡುವುದು ಕಷ್ಟ

ಆಹಾರ ಕ್ರಮ ಕಾಪಾಡುವುದು ಕಷ್ಟ

ಸಮೀಕ್ಷೆಯ ವರದಿಯಂತೆ ಪಾಶ್ಚಾತ್ಯ ಆಹಾರದಲ್ಲಿ ಕಂಡುಬರುವಂತೆ ಶೇ 40% ರಷ್ಟು ಕಾರ್ಬೋಹೈಡ್ರೇಟ್‌ ಆಹಾರ ಪದ್ದತಿಗೆ ವಿರುದ್ಧವಾಗಿ ಭಾರತೀಯ ರೋಗಿಗಳ ಆಹಾರದಲ್ಲಿ ಶೇ 65% ರಷ್ಟು ಕಾರ್ಬೋಹೈಡ್ರೇಟ್‌ ಮಟ್ಟವಿದೆ ಎಂದು ಶೇ 74% ರಷ್ಟು ವೈದ್ಯರು ಹೇಳಿದ್ದಾರೆ. ಶೇ 80% ರಷ್ಟು ವೈದ್ಯರು ರೋಗಿಗಳು ಮಧುಮೇಹ ಆರೈಕೆಗೆ ಅಗತ್ಯವಾದ ಸರಿಯಾದ ಆಹಾರ ಕ್ರಮ ಕಾಪಾಡಿಕೊಳ್ಳಲು ಹೆಣಗಾಡುತ್ತಾರೆ ಎಂದು ಹೇಳಿದರು.

ಇನ್ಸುಲಿನ್‌ ಬಗ್ಗೆ ಅಭಿಪ್ರಾಯ

ಇನ್ಸುಲಿನ್‌ ಬಗ್ಗೆ ಅಭಿಪ್ರಾಯ

ಸಮೀಕ್ಷೆ ವರದಿಯ ಪ್ರಕಾರ ಇನ್ಸುಲಿನ್‌ಗೆ ಸಲಹೆ ನೀಡಿದಾಗ ತಮ್ಮ ರೋಗಿಗಳು ಹೊಸ ವೈದ್ಯರತ್ತ ಬದಲಾಗುತ್ತಾರೆ ಎಂಬ ವೈದ್ಯರ ಗ್ರಹಿಕೆಗೆ ವಿರುದ್ಧವಾಗಿ, ಹೆಚ್ಚಿನ ರೋಗಿಗಳು ಇನ್ಸುಲಿನ್ ಚಿಕಿತ್ಸೆಯನ್ನು ಸ್ವೀಕರಿಸಲು ಮುಕ್ತರಾಗಿದ್ದಾರೆ ಮತ್ತು ಅವರ ವೈದ್ಯರನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ.

ನೆನಪು ಮಾಡಿಕೊಂಡ ಅನಿಲ್ ಕುಂಬ್ಳೆ

ನೆನಪು ಮಾಡಿಕೊಂಡ ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ವಿವಿಧ ಖಂಡಗಳಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ ಅವರು ಆಡಿದ ದಿನಗಳನ್ನು ನೆನಪಿಸಿಕೊಂಡರು. ಅಲ್ಲಿದ್ದ ಸ್ಥಿತಿಗಳಿಗೆ ಅನುಗುಣವಾಗಿ ಅವರು ತಮ್ಮ ಆಟದ ಯೋಜನೆಯನ್ನು ಸರಿಹೊಂದಿಸಬೇಕಾಗಿತ್ತು, ಆ ಮೂಲಕ ಅವರು ಮಧುಮೇಹ ಆರೈಕೆಗೆ ಭಾರತೀಯ ನೈಜತೆಯನ್ನು ಪರಿಗಣಿಸಬೇಕು ಎಂಬುದನ್ನು ಸೂಚಿಸಿದರು.

ಪ್ರೋಟೀನ್ ಆಧಾರಿತ ಆಹಾರ

ಪ್ರೋಟೀನ್ ಆಧಾರಿತ ಆಹಾರ

ಸಾಂಪ್ರದಾಯಿಕ ಚಿಕಿತ್ಸೆಯ ಮಾರ್ಗಸೂಚಿಗಳನ್ನು ಪ್ರೋಟೀನ್ ಆಧಾರಿತ ಆಹಾರದ ಪಾಶ್ಚಿಮಾತ್ಯ ಸಂದರ್ಭದಿಂದ ಪಡೆಯಲಾಗಿದೆ. ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿರುವ ಮಧುಮೇಹ ಹೊಂದಿರುವ ಜನರಿಗೆ, ಪಾಶ್ಚಿಮಾತ್ಯ ವೈದ್ಯರು ಸಾಮಾನ್ಯವಾಗಿ ಅಗತ್ಯವಿರುವಾಗ ದೀರ್ಘಕಾಲೀನ ಇನ್ಸುಲಿನ್ ಮತ್ತು ಅಲ್ಪ-ಕಾರ್ಯನಿರ್ವಹಿಸುವ ಇನ್ಸುಲಿನ್‌ಗಳ ಬಹು ಪ್ರಮಾಣಗಳ ಸಂಯೋಜನೆಯನ್ನು ಸೂಚಿಸುತ್ತಾರೆ. ಈ ಚಿಕಿತ್ಸಾ ಪದ್ಧತಿಗಳು ಪಾಶ್ಚಿಮಾತ್ಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾದರೂ ಕೆಲವೊಮ್ಮೆ ನಿರ್ವಹಿಸುವುದು ಕಷ್ಟವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Western type of treatment will not help for sugar patients of India. Treatment will decide after and before sugar check in country. Here are the survey report of treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more