ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಖರೀದಿಸಲು ದೇಶದಲ್ಲಿ ಎನ್‌ಆರ್‌ಐಗಳ ಆಯ್ಕೆ ಯಾವುದು ಗೊತ್ತೆ...?

|
Google Oneindia Kannada News

ನವದೆಹಲಿ, ನ. 04: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ದೇಶಾದ್ಯಂತ ಸುದ್ದಿಯಾಗುತ್ತಿದೆ ಇದರ ನಡುವೆಯೇ ಅನಿವಾಸಿ ಭಾರತೀಯರ ಮನೆ ಖರೀದಿಸುವ ನಗರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಕಾಯ್ದುಕೊಂಡಿದೆ.

ಹೌದು, ಅಧ್ಯಯನವೊಂದರ ಪ್ರಕಾರ ಅನಿವಾಸಿ ಭಾರತೀಯರು, ಬೆಂಗಳೂರು, ದೆಹಲಿಮತ್ತು ಹೈದರಾಬಾದ್‌ನಲ್ಲಿ ಮನೆ ಖರೀದಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಬಹಿರಂಗಪಡಿಸಿದೆ.

ದೀಪಾವಳಿಗೆ ರಾಜಧಾನಿ ಎಕ್ಸ್‌ಪ್ರೆಸ್ ವಿಶೇಷ ಸೇವೆ, ಎಲ್ಲಿಂದ ಎಲ್ಲಿಗೆ ತಿಳಿಯಿರಿ ದೀಪಾವಳಿಗೆ ರಾಜಧಾನಿ ಎಕ್ಸ್‌ಪ್ರೆಸ್ ವಿಶೇಷ ಸೇವೆ, ಎಲ್ಲಿಂದ ಎಲ್ಲಿಗೆ ತಿಳಿಯಿರಿ

ಅಪಾಯಕಾರಿ ವಾಯು ಮಾಲಿನ್ಯ ಮತ್ತು ಬೆಂಗಳೂರಿನಲ್ಲಿನ ಅಸಮರ್ಪಕ ನಾಗರಿಕ ಮೂಲಸೌಕರ್ಯಗಳ ಹೊರತಾಗಿಯೂ ದೆಹಲಿ ಮತ್ತು ಬೆಂಗಳೂರು ಅನಿವಾಸಿ ಭಾರತೀಯರ ಮನೆ ಖರೀದಿಸುವ ಇಚ್ಛೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಅಧ್ಯಯನವೊಂದು ಹೇಳಿದೆ.

Which Are The Top Choices For NRIs For Buying Homes :check here

CII-ಅನಾರಾಕ್ ಗ್ರಾಹಕರ ಭಾವನೆ ಸಮೀಕ್ಷೆ H1-2022 ಪ್ರಕಾರ, ಕನಿಷ್ಠ 60% ಅನಿವಾಸಿ ಭಾರತೀಯರು ಮೂರು ನಗರಗಳು ಅಂದರೆ ಹೈದರಾಬಾದ್, ದೆಹಲಿ (NCR) ಮತ್ತು ಬೆಂಗಳೂರಿನಲ್ಲಿ ಮನೆಗಳನ್ನು ಖರೀದಿಸುವುದಾಗಿ ಹೇಳಿದ್ದಾರೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (MMR) ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

2021 ರ ಮೊದಲ ಆರು ತಿಂಗಳ (H1) ಸಮೀಕ್ಷೆಯಲ್ಲಿ ಹೆಚ್ಚಿನ ಎನ್‌ಆರ್‌ಐಗಳು ಬೆಂಗಳೂರು, ಪುಣೆ ಮತ್ತು ಚೆನ್ನೈ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರು.

ಈ ವರ್ಷ ಹೈದರಾಬಾದ್ ಅತ್ಯಂತ ಆದ್ಯತೆಯ ತಾಣವಾಗಿದೆ. ಸರ್ವೆಯಲ್ಲಿ ಪಾಲ್ಗೊಂಡ 22% ಜನರು ಜನರು ತೆಲಂಗಾಣದ ರಾಜಧಾನಿ ಹೈದರಾಬಾದ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 20% ಜನರು ದೆಹಲಿ ಸುತ್ತಮುತ್ತಲಿನ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಶೇ 18ರಷ್ಟು ಜನರು ದೇಶದ ಐಟಿ ರಾಜಧಾನಿಯಾಗಿರುವ ಬೆಂಗಳೂರಿಗೆ ಆದ್ಯತೆ ನೀಡಿದ್ದಾರೆ.

Which Are The Top Choices For NRIs For Buying Homes :check here

ಅನಾರಾಕ್ ಗ್ರೂಪ್‌ನ ಹಿರಿಯ ನಿರ್ದೇಶಕ ಮತ್ತು ಸಂಶೋಧನಾ ಮುಖ್ಯಸ್ಥ ಪ್ರಶಾಂತ್ ಠಾಕೂರ್ ಈ ಬಗ್ಗೆ ಮಾಹಿತಿ ನೀಡಿದ್ದು, "ಗೃಹ ಸಾಲದ ಬಡ್ಡಿದರಗಳು ಮತ್ತು ಆಸ್ತಿ ಬೆಲೆಗಳು ಹೆಚ್ಚಾಗುತ್ತಿರುವ ಹೊರತಾಗಿಯೂ ಮನೆ ಮಾಲೀಕತ್ವ ಹೊಂದುವ ಭಾವನೆಯು ಪ್ರಬಲವಾಗಿದೆ. ಅಮೆರಿಕಾ ಡಾಲರ್‌ಗೆ ಹೊಲಿಸಿದರೇ, ರೂಪಾಯಿ ಮೌಲ್ಯವು ಅನಿವಾಸಿ ಭಾರತೀಯರಿಗೆ ವಿಶಿಷ್ಟ ಪ್ರಯೋಜನ ನೀಡುತ್ತದೆ" ಎಂದಿದ್ದಾರೆ.

2021ರ ಇದೇ ಅವಧಿಗೆ ಹೋಲಿಸಿದರೆ 2022ರ ಮೊದಲ ಒಂಬತ್ತು ತಿಂಗಳಲ್ಲಿ ಅನಿವಾಸಿ ಭಾರತೀಯರ ವಸತಿ ಬೇಡಿಕೆಯಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವನ್ನು ಕಂಡಿದೆ.

ಅನಿವಾಸಿ ಭಾರತೀಯರು ಮತ್ತೆ ದೇಶಕ್ಕೆ ಮರಳಲು ಬಯಸುತ್ತಿರುವುದಕ್ಕೆ ಉಕ್ರೇನ್-ರಷ್ಯಾ ಯುದ್ಧ ಕೂಡ ಕಾರಣನ ಎನ್ನಲಾಗಿದೆ. ಇದರಿಂದಾಗಿ ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಅನೇಕ ಅನಿವಾಸಿ ಭಾರತೀಯರು ಈಗ ಭಾರತಕ್ಕೆ ಮರಳಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಜೊತೆಗೆ ಇವರುಗಳು ಹೆಚ್ಚಾಗಿ 90 ಲಕ್ಷ ರೂಪಾಯಿ ಮತ್ತು 1.5 ಕೋಟಿ ರೂಪಾಯಿ ಬೆಲೆಯ ಪ್ರೀಮಿಯಂ ಪ್ರಾಪರ್ಟಿಗಳನ್ನು ಬಯಸುತ್ತಾರೆ. 2BHK ಗಳಿಗಿಂತ 3BHK ಗಳ ಬೇಡಿಕೆಯು ಹೆಚ್ಚಾಗಿದೆ ಎಂಬುದನ್ನು ಬಹಿರಂಗಪಡಿಸಿದೆ.

English summary
Hyderabad, Delhi and Bengaluru are the top wishlist of Non-Resident Indians for buying homes says Survey. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X