ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ್ ಉಗ್ರರ ದಾಳಿಯಲ್ಲಿ ರಾಜಕೀಯ ಲಾಭನಷ್ಟದ ದುರ್ವಾಸನೆ

ಅಮರನಾಥ್ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಲಾಭನಷ್ಟದ ಲೆಕ್ಕಾಚಾರದಲ್ಲಿವೆ.

|
Google Oneindia Kannada News

ಸಾವಿನಲ್ಲೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕುವ ನಮ್ಮ ಮುಖಂಡರಿಗೆ ಬಂಟ್ವಾಳ ಆದರೆ ಏನು ಅಮರನಾಥ್ ಆದರೆ ಏನು? ಬಂಟ್ವಾಳದಲ್ಲಿ ಹೇಗೆ ರಾಜಕೀಯ ಮುಖಂಡರು ಕೆಸೆರೆರೆಚಾಟ ನಡೆಸುತ್ತಿದ್ದಾರೋ, ಅದೇ ರೀತಿ ಸೋಮವಾರ (ಜುಲೈ 10) ಅಮರನಾಥ್ ಯಾತ್ರಾರ್ಥಿಗಳ ಮೇಲೆ ಉಗ್ರ ದಾಳಿ ವಿಚಾರದಲ್ಲೂ ವಾಕ್ಸಮರ ನಡೆಯುತ್ತಿದೆ.

ನಮ್ಮ ಅವಧಿಯಲ್ಲಿ ಹೀಗಾಗಿರಲಿಲ್ಲ, ನಿಮ್ಮ ಅವಧಿಯಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ ಎಂದು ಇನ್ನೊಂದು ಪಕ್ಷವನ್ನು ಟೀಕಿಸಲು ಇಂತಹ ನಾಯಕರುಗಳಿಗೆ ಸಾವಿನ ಮನೆಯಾದರೂ ನಡೆಯುತ್ತೆ, ಮದುವೆ ಮನೆಯಾದರೂ ಓಕೆ!

ಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂ

ಅಮರನಾಥ್ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದರೆ, ದೇಶದ ಎಲ್ಲಾ ಕಾಲೇಜು ಕ್ಯಾಂಪಸುಗಳಲ್ಲಿ ಕಾಶ್ಮೀರದ ಯುವಕ/ಯುವತಿಯರಿಗೆ ರಕ್ಷಣೆ ಒದಗಿಸಬೇಕೆಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ನೀಡಿರುವ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿದೆ.

ಗುಪ್ತಚರ ಇಲಾಖೆಯ ಎಚ್ಚರಿಕೆಯ ನಡುವೆಯೂ ಉಗ್ರರ ದಾಳಿ ನಡೆದದ್ದು ಬಿಜೆಪಿ ಸರಕಾರದ ವೈಫಲ್ಯದ ಪರಮಾವಧಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಸಂಬಂಧ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಅಮರನಾಥ ಯಾತ್ರೆ ವೇಳೆ ಉಗ್ರರ ದಾಳಿ, ಇದೇ ಮೊದಲಲ್ಲǃಅಮರನಾಥ ಯಾತ್ರೆ ವೇಳೆ ಉಗ್ರರ ದಾಳಿ, ಇದೇ ಮೊದಲಲ್ಲǃ

ಅಮರನಾಥ್ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಮುಖಂಡರ ಹೇಳಿಕೆ ಮತ್ತು ಟ್ವಿಟ್ಟಿಗರ ರಿಪ್ಲೈ, ಕೆಲವೊಂದು ಸ್ಯಾಂಪಲ್ ಗಳು, ಮುಂದೆ ಓದಿ..

ಉಗ್ರದಾಳಿಯ ಜವಾಬ್ದಾರಿಯನ್ನು ಬಿಜೆಪಿ ಹೊರಲಿ

ಉಗ್ರದಾಳಿಯ ಜವಾಬ್ದಾರಿಯನ್ನು ಬಿಜೆಪಿ ಹೊರಲಿ

ಅಮರನಾಥ್ ಘಟನೆಯ ಜವಾಬ್ದಾರಿಯನ್ನು ಬಿಜೆಪಿ ಹೊರಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಕಾಶ್ಮೀರದ ಪರಿಸ್ಥಿತಿ ತೀರಾ ಹದೆಗೆಟ್ಟಿದೆ. ಯಾತ್ರಾರ್ಥಿಗಳ ಮೇಲೆ ಈ ಹಿಂದೆ ದಾಳಿ ನಡೆದದ್ದು 2000 ಇಸವಿಯಲ್ಲಿ. ಈಗ ಎನ್ಡಿಎ ಸರಕಾರದ ಅವಧಿಯಲ್ಲಿ ಮತ್ತೆ ದಾಳಿ ನಡೆದಿದೆ - ಕಮ್ಯೂನಿಸ್ಟ್ ಮುಖಂಡ ಸೀತಾರಾಂ ಯಚೂರಿ.

ಒಮರ್ ಅಬ್ದುಲ್ಲಾ ಟ್ವೀಟ್

ಒಮರ್ ಅಬ್ದುಲ್ಲಾ ಟ್ವೀಟ್

ಕಾಶ್ಮೀರದ ವಿದ್ಯಾರ್ಥಿಗಳಿರುವ ಎಲ್ಲಾ ರಾಜ್ಯದ ಕಾಲೇಜು/ಯುನಿವರ್ಸಿಟಿಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಜಮ್ಮು, ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ. ಜಮ್ಮು, ಕಾಶ್ಮೀರ ಸರಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆಯೆಂದು ಒಮರ್ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಸಾಲು ಸಾಲು ಟ್ವೀಟ್

ರಾಹುಲ್ ಗಾಂಧಿ ಸಾಲು ಸಾಲು ಟ್ವೀಟ್

ಉಗ್ರರ ದಾಳಿಯಲ್ಲಿ ಮೃತಪಟ್ಟ ಎಲ್ಲಾ ಕುಟುಂಬದವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ದೇಶ ಒಪ್ಪಿಕೊಳ್ಳಲಾಗದ ಭದ್ರತಾ ವೈಫಲ್ಯ ಇದಾಗಿದ್ದು ಪ್ರಧಾನಿ ಮೋದಿ ಇದನ್ನು ಒಪ್ಪಿಕೊಂಡು, ಮುಂದೆ ಈ ರೀತಿ ನಡೆಯದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು - ರಾಹುಲ್ ಗಾಂಧಿ ಟ್ವೀಟ್

ಬಿಜೆಪಿ ನಾಯಕಿಯ ವಿವಾದಾತ್ಮಕ ಟ್ವೀಟ್

ಬಿಜೆಪಿ ನಾಯಕಿಯ ವಿವಾದಾತ್ಮಕ ಟ್ವೀಟ್

ಭಯೋತ್ಪಾದನೆಗೆ ಜಾತಿಯಿಲ್ಲ ಎಂದು ಹೇಳಲಾಗುತ್ತದೆ, ಹಜ್ ಯಾತ್ರೆಯ ವೇಳೆ ಯಾವ ದಾಳಿಯೂ ನಡೆಯುವುದಿಲ್ಲ, ಆದರೆ ಅಮರನಾಥ್ ಯಾತ್ರೆಯ ವೇಳೆ ದಾಳಿ ನಡೆಯುತ್ತದೆ ಎನ್ನುವ ಬಿಜೆಪಿ ನಾಯಕಿ ಸೋನಂ ಮಹಾಜನ್ ವಿವಾದಾತ್ಮಕ ಟ್ವೀಟ್.

ಬಾಲಿವುಡ್ ನಟನ ಯುದ್ದಕ್ಕೆ ಆಹ್ವಾನ

ನೇರ ಯುದ್ದಕ್ಕೆ ಬನ್ನಿ, ಯಾರು ಜಯಗಳಿಸುತ್ತಾರೋ ನೋಡೋಣ.. ಅಮಾಯಕರನ್ನು ಕೊಂದರೆ ನಿಮಗಾಗುವ ಲಾಭವೇನು - ಬಾಲಿವುಡ್ ನಟ ರಿತೇಶ್ ದೇಶಮುಖ್.

ಸಾವಿನಲ್ಲಿ ಮಿಡಿಯಾ ರಾಜಕೀಯ

ಜುನೇದ್ ಸತ್ತಾಗ ಅವನ್ನೊಬ್ಬ ಮುಸ್ಲಿಂ ಹಾಗಾಗಿ ಸತ್ತ ಎಂದು ಹೇಳುವ ಕೆಲವು ಮಿಡಿಯಾಗಳು, ಅಮರನಾಥ್ ಯಾತ್ರೆಯಲ್ಲಿ ಸತ್ತವರು ಹಿಂದೂಗಳು ಎಂದು ಯಾಕೆ ಹೇಳುತ್ತಿಲ್ಲ - ಖ್ಯಾತ ಲೇಖಕ ಚೇತನ್ ಭಗತ್.

ಪರೇಶ್ ರಾವಲ್ ಟ್ವೀಟ್

ರಮ್ಜಾನ್ ವೇಳೆ ಸಾರ್ವಜನಿಕವಾಗಿ ಏನನ್ನೂ ತಿನ್ನಬೇಡಿ ಯಾಕೆಂದರೆ ಅದು ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ, ಹಾಗೇ ಅಮರನಾಥ್ ಯಾತ್ರೆಗೆ ಹೋಗಬೇಡಿ, ಯಾಕೆಂದರೆ ಕಾಶ್ಮೀರದಲ್ಲಿ ಸಮಸ್ಯೆಯಿದೆ ಎನ್ನುವ ಬಾಲಿವುಡ್ ನಟ ಮತ್ತು ಬಿಜೆಪಿ ಮುಖಂಡ ಪರೇಶ್ ರಾವಲ್ ಟ್ವೀಟ್.

English summary
Politicians, political parties never miss an opportunity to shine even when nation is mourning. Example - Terror Attack on Amarnath Yatra 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X