ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಕಿನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಸಿಟಿಬ್ಯಾಂಕ್!

By Prasad
|
Google Oneindia Kannada News

ವೈವಿಧ್ಯಮಯ ಆಚಾರ-ವಿಚಾರ, ಭಾಷೆ, ಸಂಸ್ಕೃತಿ, ಸಂಪ್ರದಾಯ ಇರುವಂಥ ನಮ್ಮ ಭಾರತ ದೇಶದಲ್ಲಿ ವಿಶಿಷ್ಟ ಹಬ್ಬಹರಿದಿನಗಳು ಜನರ ನಡುವೆ ಪ್ರೀತಿಯ ಬಂಧ ಬೆಸೆಯುವಲ್ಲಿ, ಆತ್ಮೀಯತೆಯ ಕಂಪನ್ನು ಹರಡುವಲ್ಲಿ, ಬಾಂಧವ್ಯದ ಬೆಸುಗೆ ಹಾಕುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ. ಹಬ್ಬಹರಿದಿನಗಳಿಲ್ಲದಿದ್ದರೆ ಭಾರತಕ್ಕೆ ಅಸ್ತಿತ್ವವೇ ಇಲ್ಲ!

ಎಲ್ಲ ಬಂಧುಗಳು ಒಂದೆಡೆ ಸೇರಿ, ಹೊಸಬಟ್ಟೆ ತೊಟ್ಟು, ಒಬ್ಬರಿಗೊಬ್ಬರು ಉಡುಗೊರೆ ಕೊಟ್ಟುಕೊಳ್ಳುತ್ತ, ಮೃಷ್ಟಾನ್ನ ಭೋಜನವನ್ನು ಸವಿಯುತ್ತ, ಎಲ್ಲ ಚಿಂತೆಗಳನ್ನು ಮರೆತು ಮನಸೋಇಚ್ಛೆ ಹರಟೆ ಹೊಡೆಯುತ್ತ ಕಾಲ ಕಳೆಯುವ ಪರಿಯಿದೆಯಲ್ಲ, ಅದಕ್ಕಿಂತ ಅವಿನಾಭಾವವಾದ ಸಂಗತಿ ಮತ್ತೊಂದಿಲ್ಲ.

ದೀಪಾವಳಿ ಕೂಡ ಇಂತಹುದೇ ಭಾವವನ್ನು ಬೆಳಗುವ ಹಬ್ಬಗಳಲ್ಲೊಂದು. ಪಟಾಕಿ ಹಾರಿಸಿ ಸಂಭ್ರಮಿಸುವುದರ ಜೊತೆಗೆ, ಉಡುಗೊರೆಗಳನ್ನು ಕೊಡುವ ಪದ್ಧತಿ ಅನನ್ಯವಾದುದು. ಉಡುಗೊರೆ ಪಡೆಯುವುದು ಎಷ್ಟು ಸಂತಸದಾಯಕವಾಗಿರುತ್ತದೋ, ವಿಶಿಷ್ಟ ವಿಭಿನ್ನ ಗಿಫ್ಟುಗಳನ್ನು ನೀಡುವುದು ಕೂಡ ಅಷ್ಟೇ ಆನಂದದಾಯಕವಾಗಿರುತ್ತದೆ. ಪರಸ್ಪರ ಗೌರವ ಭಾವ ಮೂಡಲು ಇನ್ನೇನು ಬೇಕು?

#WhatsNewThisDiwali: Citibank celebrated Diwali with a Twist!

ಈ ವರ್ಷ 'ಡಿಜಿಟಲ್ ದೀಪಾವಳಿ' ಎಂಬ ವಿಶಿಷ್ಟವಾದ ಅಭಿಯಾನವನ್ನು ಸಿಟಿಬ್ಯಾಂಕ್ ಆರಂಭಿಸಿತ್ತು. ನವೆಂಬರ್ 1ರಿಂದ ದೀಪಾವಳಿ ಮುಗಿಯುವವರೆಗೆ ಈ ಅಭಿಯಾನ ಜಾರಿಯಲ್ಲಿತ್ತು. ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವ ಸಿಟಿಬ್ಯಾಂಕ್, ಶಾಪಿಂಗ್, ಪ್ರವಾಸ, ಎಲೆಕ್ಟ್ರಾನಿಕ್ಸ್, ಗ್ರಾಸರಿ ಮತ್ತಿತರ ವಿಭಾಗಗಳಲ್ಲಿ ಭರ್ಜರಿ ಕೊಡುಗೆಗಳನ್ನು ನೀಡಿತ್ತು.

ತನ್ನ ಸೇವೆಗಾಗಿ ಮತ್ತು ನಂಬಿಕಾರ್ಹತೆಗಾಗಿ ಹೆಸರು ಗಳಿಸಿರುವ ಬ್ಯಾಂಕ್, ಮೊದಲಬಾರಿಗೆ ಆನ್ ಲೈನ್ ಸೇವೆಯನ್ನು ಗ್ರಾಹಕರಿಗಾಗಿ ನೀಡಿತ್ತು. ಫ್ಲಿಪ್ ಕಾರ್ಟ್, ಅಮೆಜಾನ್, ಮೇಕ್ ಮೈ ಟ್ರಿಪ್, ವಿಜಯ್ ಸೇಲ್ಸ್, ಆಪಲ್, ರಿಲಯನ್ಸ್ ಫ್ರೆಶ್, ಸೂಪರ್ ಮಾರ್ಟ್ ಮುಂತಾದವುಗಳ ಉತ್ಪನ್ನಗಳಿಗೆ ಕೊಡುಗೆ ನೀಡುವ ಮೂಲಕ ಹಬ್ಬದ ಸಂಭ್ರಮವನ್ನು ಸಿಟಿಬ್ಯಾಂಕ್ ಮತ್ತಷ್ಟು ಹೆಚ್ಚಿಸಿತ್ತು.

#WhatsNewThisDiwali ಅಭಿಯಾನದ ಮತ್ತಷ್ಟು ವಿಶೇಷಗಳು

ದೀಪಾವಳಿ ಎಂದರೆ ಪಟಾಕಿ ಸಿಡಿಸುವುದು ಇದ್ದದ್ದೇ. ಆದರೆ, ಇದರಿಂದ ಪರಿಸರವೂ ಹಾಳು. ಇದನ್ನು ಗಮನದಲ್ಲಿಟ್ಟುಕೊಂಡು, ಪರಿಸರ ಉಳಿಸುವ ಉದ್ದೇಶದಿಂದ ದೆಹಲಿಯ ಡಿಎಲ್ಎಫ್ ಸಾಕೇತ್ ಮಾಲ್ ನಲ್ಲಿ ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನ ಬಳಸಿ ವರ್ಚುವಲ್ ಪಟಾಕಿಗಳನ್ನು ಸಿಡಿಸುವ ಮುಖಾಂತರ ಜನರ ಗಮನವನ್ನು ಸೆಳೆಯಿತು.

ತಂತ್ರಜ್ಞಾನ ಬಳಸಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಿದ ಸಿಟಿಬ್ಯಾಂಕ್‌ನ ನವೀನ ಪರಿಕಲ್ಪನೆಯನ್ನು ಗ್ರಾಹಕರು ಬಹುವಾಗಿ ಶ್ಲಾಘಿಸಿದರು. ಜಿಡಿಟಲ್ ದೀಪಾವಳಿಯ ಕುತಿರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದರು, ತಮ್ಮ ಚಿತ್ರಗಳನ್ನು ಫೇಸ್ ಬುಕ್ ಮುಂತಾದ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸಿದರು.

ಈ ಅಭಿಯಾನದ ಮೂಲ ಉದ್ದೇಶವೂ ಇದೇ ಆಗಿತ್ತು. ಹಲವಾರು ಬ್ರಾಂಡ್ ಗಳ ಬಗ್ಗೆ ಗ್ರಾಹಕರ ಗಮನ ಸೆಳೆಯುವುದಲ್ಲದೆ, ಸೋಷಿಯಲ್ ಮೀಡಿಯಾದಂಥ ಪ್ರಭಾವಶಾಲಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿ ಒಬ್ಬರಿಂದ ಮತ್ತೊಬ್ಬರಿಗೆ ಇದನ್ನು ತಲುಪಿಸುವ ಉದ್ದೇಶವೂ ಯಶಸ್ವಿಯಾಯಿತು.


ಹಲವಾರು ಜನರು #WhatsNewThisDiwali ಹ್ಯಾಶ್ ಟ್ಯಾಗ್ ಬಳಸಿ ಎಆರ್ ಟೆಕ್ನಾಲಜಿಯ ಕುರಿತು ತಮ್ಮ ಅನುಭವವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡರು. ಹಲವಾರು ಜನರು ದೀಪಾವಳಿ ಸಂದರ್ಭದಲ್ಲಿ ಉಡುಗೊರೆ ನೀಡುವ ಸಂಪ್ರದಾಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಲ್ಯವನ್ನು ಮೆಲುಕುಹಾಕಿಕೊಂಡರು.

ಇದೆಲ್ಲಕ್ಕಿಂತ ಹೆಚ್ಚಾಗಿ, ಈ ದೀಪಾವಳಿ ಸಂದರ್ಭದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಹಲವಾರು ಜನರು ಹೊಸ ವರ್ಷದ ನಿರ್ಣಯಗಳನ್ನು ಹಂಚಿಕೊಂಡರು.

ಎಲ್ಲ ಕನಸುಗಳೂ ನನಸಾಗಲಿ


ಸಿಟಿಬ್ಯಾಂಕ್‌ನ ಈ ಅಭಿಯಾನಕ್ಕೆ ಅತ್ಯದ್ಭುತ ಪ್ರತಿಸ್ಪಂದನೆ ವ್ಯಕ್ತವಾಯಿತು. ದೀಪಾವಳಿ ಉಡುಗೊರೆ ನೀಡುವ ಮುಖಾಂತರ ಜನರು ತಮ್ಮ ಬಂಧುಗಳಿಗೆ ಹೇಗೆ ಅಚ್ಚರಿಯನ್ನು ಮೂಡಿಸಬಹುದು ಎಂಬ ಬಗ್ಗೆ ಒಂದು ವಿಡಿಯೋವನ್ನು ಕೂಡ ಬಿಡುಗಡೆಗೊಳಿಸಿತು. #WhatsNewThisDiwali ಸೂಪರ್ ಹಿಟ್ ಆಯಿತು. ಅದು ಅತೀಹೆಚ್ಚು ಟ್ರೆಂಡ್ ಆದ ಹ್ಯಾಶ್ ಟ್ಯಾಗ್ ಗಳಲ್ಲಿ ಒಂದಾಯಿತು.

ದೀಪಾವಳಿಯೊಂದಿಗೆ ಬಾಲ್ಯದ ಮೆಲುಕು


ಇದೆಲ್ಲದರ ಜೊತೆ ನವೆಂಬರ್ 7ರಂದು, ಜನರು ದೀಪಾವಳಿ ಹಬ್ಬವನ್ನು ತಮ್ಮ ಬಂಧುಮಿತ್ರರ ಜೊತೆ ಹೇಗೆ ಆಚರಿಸುತ್ತಾರೆ ಎಂಬ ಕುರಿತು ಮತ್ತು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಮಾತುಗಳಿರುವ ಎರಡನೇ ವಿಡಿಯೋ ಕೂಡ ಸಿಟಿಬ್ಯಾಂಕ್ ಬಿಡುಗಡೆಗೊಳಿಸಿತು. ಅದೇ ದಿನ #Citi ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದ್ದು ಈ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಯಿತು.

ಈ ಎಲ್ಲ ವಿಡಿಯೋಗಳನ್ನು ವಿಡಿಯೋ ಹಂಚಿಕೊಳ್ಳುವ ವೆಬ್ ಸೈಟುಗಳಾದ ಯುಟ್ಯೂಬ್, ವಿಡೋಪಿಯಾ, ವುಕ್ಲಿಪ್ ಮುಂತಾದವುಗಳಲ್ಲಿ ಅಪ್ಲೋಡ್ ಮಾಡಲಾಯಿತು. ಎಲ್ಲ ವಿಡಿಯೋಗಳು ಅತೀಹೆಚ್ಚು ವೀಕ್ಷಕರನ್ನು ತಲುಪಿದವು ಮತ್ತು 5 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಬಂದಿತು.

#WhatsNewThisDiwali ಮೊದಲ ಮೂರು ದಿನ ಟ್ರೆಂಡ್ ಆಗಿದ್ದರೆ #Citi ಹ್ಯಾಶ್ ಟ್ಯಾಗ್ ನಾಲ್ಕನೇ ದಿನ ಟ್ರೆಂಡ್ ಆಯಿತು. ಎಲ್ಲ ಪ್ರಮುಖ ಬ್ರಾಂಡ್ ಗಳ ಜೊತೆ ಸಿಟಿಬ್ಯಾಂಕ್ ತಳಕುಹಾಕಿಕೊಂಡಿದ್ದು ಒಂದು ರೀತಿಯದ್ದಾದರೆ, ಈ ಅಭಿಯಾನ 70 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದ್ದು ಮತ್ತೊಂದು ಮೈಲಿಗಲ್ಲು.

English summary
Diwali is a largely celebrated festival of India. Also known as the festival of lights, Diwali is associated with shopping for oneself, family and friends, decorating homes, and exchanging gifts and sweets to lighten up the festive spirit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X