WhatsApp Down: ಭಾರತದ ಹಲವು ನಗರಗಳಲ್ಲಿ ಬಳಕೆದಾರರ ಪರದಾಟ

ಬೆಂಗಳೂರು, ಅಕ್ಟೋಬರ್‌ 25: ಭಾರತದ ಹಲವು ನಗರಗಳಲ್ಲಿ ವಾಟ್ಸಾಪ್‌ ಡೌನ್‌ ಆಗಿದೆ. ಸಂದೇಶ ಕಳುಹಿಸಲು ಹಾಗೂ ಪಡೆಯಲು ಬಳಕೆದಾರರು ಪರದಾಡುತ್ತಿದ್ದಾರೆ.

12:30ರ ಸುಮಾರಿಗೆ ಕಾರ್ಯ ಸ್ಥಗಿತಗೊಳಿಸಿರುವ ವಾಟ್ಸಾಪ್‌ನಲ್ಲಿ ಸಂದೇಶ ರವಾನೆ, ಸ್ಟೇಟಸ್‌ ಅಪ್‌ಡೇಟ್‌ ಸೇರಿದಂತೆ ಯಾವುದೇ ಪಿಚರ್‌ಗಳು ಕೆಲಸ ಮಾಡುತ್ತಿಲ್ಲ.

ದೇಶದ ಮಹಾನಗರಿಗಳಾದ ಬೆಂಗಳೂರು, ದೆಹಲಿ, ಮುಂಬೈ ಹಾಗೂ ಚೆನ್ನೈಗಳಲ್ಲಿ ವಾಟ್ಸಾಪ್‌ ಡೌನ್‌ ಆಗಿದೆ.

WhatsApp Down Users Report Disruptions across cities in India

ವಾಟ್ಸಾಪ್‌ ತೆರೆಯಲು ಸಾಧ್ಯವಾಗುತ್ತಿದೆ. ಆದರೆ, ಸಂದೇಶ ರವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಬಳಕೆದಾರರು ದೂರಿದ್ದಾರೆ. ಶೇ 68 ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ 21 ಬಳಕೆದಾರರಿಗೆ ಸರ್ವರ್‌ ಸಂಪರ್ಕವೇ ಸಿಗುತ್ತಿಲ್ಲವೆಂದು 'ಡೌನ್‌ ಡಿಟೆಕ್ಟರ್‌' ತಿಳಿಸಿದೆ.

ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ರವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಇಟಲಿ ಹಾಗೂ ಟರ್ಕಿಯ ಸಾಮಾಜಿಕ ಮಾಧ್ಯಮ ಬಳಕೆದಾರರೂ ದೂರಿದ್ದಾರೆ.

ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ವಾಟ್ಸಾಪ್‌ ಒಡೆತನದ ಮೆಟಾ ಸಂಸ್ಥೆ ತಿಳಿಸಿದೆ.

ಯುಕೆ ಬಳಕೆದಾರರಿಗೂ WhatsApp ಡೌನ್

ಮೆಟಾ ಒಡೆತನದ ಪ್ಲಾಟ್‌ಫಾರ್ಮ್‌ನ ಬಳಕೆದಾರರು ಮಂಗಳವಾರ 08:00 BST ಗಿಂತ ಮೊದಲು ಸಮಸ್ಯೆಗಳನ್ನು ವರದಿ ಮಾಡಲು ಪ್ರಾರಂಭಿಸಿದರು. ಅರ್ಧ ಗಂಟೆಯೊಳಗೆ 12,000 ಕ್ಕೂ ಹೆಚ್ಚು ವರದಿಗಳನ್ನು ಪೋಸ್ಟ್ ಮಾಡಲಾಗಿದೆ. ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ. ವಾಟ್ಸಾಪ್‌ ಸುಮಾರು ಎರಡು ಬಿಲಿಯನ್ ಜಾಗತಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದು ಯುಕೆ ಯಲ್ಲಿ ಅತ್ಯಂತ ಜನಪ್ರಿಯ ಸಂದೇಶ ರವಾನೆ ವೇದಿಕೆಗಳಲ್ಲಿ ಒಂದಾಗಿದೆ. ಡೌನ್ ಡೆಟೆಕ್ಟರ್ ಮಾಹಿತಿಯಂತೆ ಈ ಸಮಯಕ್ಕೆ ವಾಟ್ಸಾಪ್ ಚಾಟ್ ಸಾಧ್ಯವಾಗುತ್ತಿಲ್ಲ ಎಂದು ಸರಿ ಸುಮಾರು 75,000 ಕ್ಕೂ ಅಧಿಕ ದೂರುಗಳು ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+