ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿ

By ಅನಿಲ್ ಆಚಾರ್
|
Google Oneindia Kannada News

ಮತ್ತೆ ಮಿರಾಜ್ ಯುದ್ಧ ವಿಮಾನದ ಬಗ್ಗೆ ಚರ್ಚೆ ಆಗುತ್ತಿದೆ. ಮಂಗಳವಾರ ನಸುಕಿನಲ್ಲಿ ಪಾಕ್ ನಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ಇದೇ ಯುದ್ಧ ವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿವೆ. ಇಷ್ಟು ಸ್ಥಳಗಳ ಮೇಲೆ ದಾಳಿ, ಇಷ್ಟು ಮಂದಿ ಗಾಯಗೊಂಡಿದ್ದಾರೆ ಇತ್ಯಾದಿ ಯಾವುದೇ ಮಾಹಿತಿಯನ್ನು ಭಾರತ ಸರಕಾರ ಆಗಲೀ, ಪಾಕಿಸ್ತಾನ ಆಗಲೀ ನೀಡಿಲ್ಲ.

ಮಿರಾಜ್ 2000 ಜೆಟ್ ಫೈಟರ್ (ಯುದ್ಧ ವಿಮಾನ) ನಿರ್ಮಿಸಿರುವುದು ಫ್ರಾನ್ಸ್ ನ ಡಸಾಲ್ಟ್ ಕಂಪನಿ. ಹ್ಞಾಂ, ಸದ್ಯಕ್ಕೆ ಬಹಳ ಚರ್ಚೆ ಹಾಗೂ ವಿವಾದ ಹುಟ್ಟು ಹಾಕಿರುವ ರಫೇಲ್ ಯುದ್ಧ ವಿಮಾನ ತಯಾರಿಸುತ್ತಿರುವ ಅದೇ ಡಸಾಲ್ಟ್ ಕಂಪನಿ.

ಪುಲ್ವಾಮಾ ಪ್ರತೀಕಾರ LIVE: ತುರ್ತು ಸಭೆ ಕರೆದ ಮೋದಿ, ಇಮ್ರಾನ್ ಖಾನ್ಪುಲ್ವಾಮಾ ಪ್ರತೀಕಾರ LIVE: ತುರ್ತು ಸಭೆ ಕರೆದ ಮೋದಿ, ಇಮ್ರಾನ್ ಖಾನ್

1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದು ಇದೇ ಮಿರಾಜ್ 2000 ವಿಮಾನ. ಭಾರತಕ್ಕೆ ಸರಬರಾಜು ಮಾಡಿದ ಮಿರಾಜ್ ಗಳಲ್ಲಿ ಸೀಮಿತವಾದ ವಾಯು ದಾಳಿ ಸಾಮರ್ಥ್ಯ ಇತ್ತು. ಆ ನಂತರ ಅದರಲ್ಲಿ ಭಾರೀ ಮಾರ್ಪಾಟು ಮಾಡಿ, ಲೇಸರ್-ಮಾರ್ಗದರ್ಶನದ ಬಾಂಬ್ ಗಳು ಹಾಗೂ ಸಾಂಪ್ರದಾಯಿಕವಾಗಿ ಬಳಕೆಯಾಗುವ ಬಾಂಬ್ ಗಳನ್ನು ಹಾಕಲು ಸಿದ್ಧಗೊಳಿಸಲಾಯಿತು.

What you should know Dassault Mirage 2000 deployed in air strike across LoC

ಪೂರ್ಣ ಪ್ರಮಾಣದಲ್ಲಿ ಸನ್ನದ್ಧವಾಗಿರುವ ಈ ಯುದ್ಧ ವಿಮಾನವು ಶತ್ರು ಪಾಳಯದ ಕಮ್ಯಾಂಡ್ ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. 1999ರ ಜೂನ್- ಜುಲೈನಲ್ಲಿ ನಡೆದ ಆಪರೇಷನ್ ಸೇಫ್ಡ್ ಸಾಗರ್ ನಲ್ಲಿ ಎರಡು ಮಿರಾಜ್ ಸ್ಕ್ವಾಡ್ರನ್ ಬಳಸಲಾಗಿತ್ತು. ಆಗ ಐವತ್ತೈದು ಸಾವಿರ ಕೇಜಿಯಷ್ಟು ಬಾಂಬ್ ಸುರಿದಿತ್ತು.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವುಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಮೇಲ್ದರ್ಜೆಗೆ ಏರಿದ ಮಿರಾಜ್ 2000

ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಎರಡು ಮೇಲ್ದರ್ಜೆಗೆ ಏರಿದ ಮಿರಾಜ್ 2000 ಯುದ್ಧ ವಿಮಾನ ಪಡೆದದ್ದು 10,000 ಕೋಟಿಗಿಂತ ಸ್ವಲ್ಪ ಕಡಿಮೆ ಮೊತ್ತಕ್ಕೆ. ಅದು 2018ರ ಜುಲೈ ತಿಂಗಳಲ್ಲಿ. ಭಾರತೀಯ ವಾಯು ಸೇನೆಯ ಪೈಲಟ್ ಗಳು ಫ್ರಾನ್ಸ್ ನಿಂದ ಇದೇ ವಿಮಾನದಲ್ಲಿ ವಾಪಸ್ ಬರುತ್ತಾ ಏಳು ದಿನಗಳಲ್ಲಿ ಗ್ರೀಸ್, ಈಜಿಪ್ಟ್, ಕತಾರ್ ಮೂಲಕ ಗ್ವಾಲಿಯರ್ ನ ವಾಯು ಸೇನೆ ಕೇಂದ್ರದಲ್ಲಿ ಇಳಿಸಿದ್ದರು.

ಭಾರತೀಯ ಏರ್‌ಸ್ಟ್ರೈಕ್‌ಗೆ ಪಾಕಿಸ್ತಾನ ಹೇಳಿದ್ದೇನು?ಭಾರತೀಯ ಏರ್‌ಸ್ಟ್ರೈಕ್‌ಗೆ ಪಾಕಿಸ್ತಾನ ಹೇಳಿದ್ದೇನು?

ಮೇಲ್ದರ್ಜೆಗೆ ಏರಿಸುವ ಒಪ್ಪಂದವನ್ನು ಥೇಲ್ಸ್ ಏರೋಪೋರ್ಟರ್ಸ್ ಸಿಸ್ಟಮ್ಸ್ ಹಾಗೂ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಜತೆಗೆ ಸಹಿ ಮಾಡಲಾಗಿತ್ತು.

English summary
In 1999, when the Kargil War broke out, the Mirage 2000 performed remarkably well during the whole conflict in the high Himalayas, even though the Mirages supplied to India had limited air interdiction capability and had to be heavily modified to drop laser-guided bombs as well as conventional unguided bombs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X