ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್‌ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು

ವಂದೇ ಭಾರತ್ ರೈಲುಗಳ ಅದ್ಭುತ ಯಶಸ್ಸಿನ ನಂತರ, ಭಾರತೀಯ ರೈಲ್ವೇ ಈಗ ವಂದೇ ಮೆಟ್ರೋಗಳಿಗಾಗಿ ಯೋಜನೆ ರೂಪಿಸುತ್ತಿದೆ. ಇವೆರಡರ ನಡುವಿನ ವ್ಯತ್ಯಾಸ, ವೈಶಿಷ್ಟ್ಯ-ವಿಶೇಷತೆಗಳು ಇಲ್ಲಿವೆ.

|
Google Oneindia Kannada News

ನವದೆಹಲಿ, ಫೆಬ್ರವರಿ 06: ವಂದೇ ಭಾರತ್ ರೈಲುಗಳ ಅದ್ಭುತ ಯಶಸ್ಸಿನ ನಂತರ, ಭಾರತೀಯ ರೈಲ್ವೇ ಈಗ ವಂದೇ ಮೆಟ್ರೋಗಳಿಗಾಗಿ ಯೋಜನೆ ರೂಪಿಸುತ್ತಿದೆ. ಇದು ಸೆಮಿ-ಹೈ-ಸ್ಪೀಡ್‌ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮಿನಿ ಆವೃತ್ತಿ ಎಂದು ಪರಿಗಣಿಸಲಾಗಿದೆ. ಈ ವರ್ಷದ ಡಿಸೆಂಬರ್‌ ವೇಳೆಗೆ ಈ ಹೊಸ ಮೆಟ್ರೋ ರೈಲಿನ ಉತ್ಪಾದನೆ ಮತ್ತು ವಿನ್ಯಾಸವನ್ನು ಪೂರ್ಣಗೊಳಿಸಲಾಗುವುದು ಎಂದು ಬಜೆಟ್ ನಂತರ ರೈಲ್ವೆ ಸಚಿವ ಅಶಿವಿನಿ ವೈಷ್ಣವ್ ಘೋಷಿಸಿದ್ದಾರೆ. 'ನಾವು ವಂದೇ ಮೆಟ್ರೋವನ್ನು ಸಹ ಅಭಿವೃದ್ಧಿಪಡಿಸುತ್ತಿದ್ದೇವೆ. ದೊಡ್ಡ ನಗರಗಳ ಸುತ್ತ ಹಾಗೂ ಹೊರ ವರ್ತುಲಗಳಲ್ಲಿ ಲಕ್ಷಾಂತರ ಜನರು ವಾಸಿಸುತ್ತಿರುವ ವಸತಿ ಸಮೂಹಗಳಿವೆ. ಅದಕ್ಕಾಗಿ ನಾವು ವಂದೇ ಮೆಟ್ರೋವನ್ನು ತರಲು ಯೋಜನೆ ರೂಪಿಸಿದ್ದೇವೆ' ಎಂದು ತಿಳಿಸಿದ್ದಾರೆ. ಅಲ್ಲದೆ, ಮುಂದಿನ ಹಣಕಾಸು ವರ್ಷದಲ್ಲಿ 2024-25ರಲ್ಲಿ ವಂದೇ ಮೆಟ್ರೋ ಉತ್ಪಾದನೆಯನ್ನು ಹೆಚ್ಚಿಸಲಾಗುವುದು. ಹಾಗಾದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಂದ ಪ್ರತ್ಯೇಕಿಸುವ ವಂದೇ ಮೆಟ್ರೋದ ಪ್ರಮುಖ ಲಕ್ಷಣಗಳು ಯಾವುವು? ಇದನ್ನು ಓದಿ.

ಕೆ. ಆರ್. ಪುರ-ವೈಟ್‌ಫೀಲ್ಡ್‌; 12 ನಿಮಿಷದಲ್ಲಿ ಸಾಗಿದ ಮೆಟ್ರೋ ರೈಲು ಕೆ. ಆರ್. ಪುರ-ವೈಟ್‌ಫೀಲ್ಡ್‌; 12 ನಿಮಿಷದಲ್ಲಿ ಸಾಗಿದ ಮೆಟ್ರೋ ರೈಲು

 ವಂದೇ ಮೆಟ್ರೋ: ಪ್ರಮುಖ ಲಕ್ಷಣಗಳು

ವಂದೇ ಮೆಟ್ರೋ: ಪ್ರಮುಖ ಲಕ್ಷಣಗಳು

ವಂದೇ ಮೆಟ್ರೋದ ಪರಿಕಲ್ಪನೆಯು ಯುರೋಪಿನ 'ಪ್ರಾದೇಶಿಕ ಟ್ರಾನ್ಸ್' ರೈಲುಗಳಂತೆಯೇ ಇರುತ್ತದೆ ಎಂದು ಹೇಳಲಾಗುತ್ತದೆ. ಅವು ಸ್ಥಳೀಯ ರೈಲುಗಳಂತೆಯೇ ಇರುತ್ತವೆ. ಆದರೆ ಹೆಚ್ಚು ವೇಗವಾಗಿ ಪ್ರಯಾಣಿಸುತ್ತವೆ. ಇದು ಕ್ಷಿಪ್ರ ರೈಲು ಆಗಲಿದ್ದು, ಪ್ರಯಾಣಿಕರಿಗೆ ವಿಶ್ವ ದರ್ಜೆಯ ಶಟಲ್ ತರಹದ ಅನುಭವ ನೀಡಲಿದೆ.

 ವಂದೇ ಮೆಟ್ರೋ: ಎಂಟು ಕೋಚ್‌

ವಂದೇ ಮೆಟ್ರೋ: ಎಂಟು ಕೋಚ್‌

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ 16 ಕೋಚ್‌ಗಳಿಗಿಂತ ಭಿನ್ನವಾಗಿ ವಂದೇ ಮೆಟ್ರೋ ರೈಲು ಎಂಟು ಕೋಚ್‌ಗಳೊಂದಿಗೆ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಇದು ದೊಡ್ಡ ನಗರಗಳಲ್ಲಿ ಸಣ್ಣ ಮಾರ್ಗಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸೇವಾ ಉದ್ಯಮದ ಜನರು ಕೆಲಸಕ್ಕೆ ಪ್ರಯಾಣಿಸಲು ಮತ್ತು ತಮ್ಮ ಊರುಗಳಿಗೆ ಹೆಚ್ಚು ಸುಲಭವಾಗಿ ಮತ್ತು ಸೌಕರ್ಯದೊಂದಿಗೆ ಹಿಂತಿರುಗಬಹುದು.

 ಸಾಧ್ಯವಾದಷ್ಟು ಬೇಗ ಹೊರತರಲು ನಿರ್ದೇಶನ

ಸಾಧ್ಯವಾದಷ್ಟು ಬೇಗ ಹೊರತರಲು ನಿರ್ದೇಶನ

ವರದಿಗಳ ಪ್ರಕಾರ, ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಮತ್ತು ಲಕ್ನೋದ ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ ಆರ್ಗನೈಸೇಶನ್‌ನ ಜನರಲ್ ಮ್ಯಾನೇಜರ್‌ಗಳು 8 ಬೋಗಿಗಳ ವಂದೇ ಮೆಟ್ರೋ ರೇಕ್‌ಗಳನ್ನು ಸಾಧ್ಯವಾದಷ್ಟು ಬೇಗ ಹೊರತರಲು ನಿರ್ದೇಶನಗಳನ್ನು ಪಡೆದಿದ್ದಾರೆ.

 100 ಕಿಲೋಮೀಟರ್‌ಗಿಂತ ಕಡಿಮೆ ಅಂತರ

100 ಕಿಲೋಮೀಟರ್‌ಗಿಂತ ಕಡಿಮೆ ಅಂತರ

ವಂದೇ ಮೆಟ್ರೋ ರೈಲುಗಳನ್ನು ಹೆಚ್ಚಿನ ಆವರ್ತನದಲ್ಲಿ ಓಡಿಸಲಾಗುವುದು. 100 ಕಿಲೋಮೀಟರ್‌ಗಿಂತ ಕಡಿಮೆ ಅಂತರದಲ್ಲಿರುವ ನಗರಗಳ ನಡುವೆ ಈ ರೈಲುಗಳನ್ನು ಓಡಿಸುವುದು ಭಾರತೀಯ ರೈಲ್ವೆಯ ಯೋಜನೆಯಾಗಿದೆ ಎಂದು ವೈಷ್ಣವ್ ಬಹಿರಂಗಪಡಿಸಿದ್ದರು.

 ಉತ್ತರ ಪ್ರದೇಶದಲ್ಲಿ ವಂದೇ ಮೆಟ್ರೋ

ಉತ್ತರ ಪ್ರದೇಶದಲ್ಲಿ ವಂದೇ ಮೆಟ್ರೋ

ಉತ್ತರ ಪ್ರದೇಶವು ವಂದೇ ಮೆಟ್ರೋವನ್ನು ಪಡೆದ ಮೊದಲ ರಾಜ್ಯಗಳಲ್ಲಿ ಒಂದಾಗಬಹುದು. ಇದರ ಎರಡು ದೊಡ್ಡ ನಗರಗಳು - ಲಕ್ನೋ ಮತ್ತು ಕಾನ್ಪುರ್ ಪರಸ್ಪರ ಸುಮಾರು 90 ಕಿ.ಮೀ ಅಂತರದಲ್ಲಿವೆ. ಬಿಹಾರದ ಎರಡು ದೊಡ್ಡ ನಗರಗಳಾದ ಪಾಟ್ನಾ ಮತ್ತು ದರ್ಭಾಂಗಗಳು ಸುಮಾರು 140 ಕಿಮೀ ದೂರದಲ್ಲಿವೆ. ಇದು ಭವಿಷ್ಯದಲ್ಲಿ ವಂದೇ ಮೆಟ್ರೋವನ್ನು ಓಡಿಸಲು ಸರಿಯಾದ ಯೋಜನೆಯಾಗಿದೆ ಎಂದು ವರದಿಗಳು ಹೇಳಿವೆ.

 ವಿವಿಧ ರಾಜ್ಯಗಳಲ್ಲಿ ತಯಾರಿಕೆ

ವಿವಿಧ ರಾಜ್ಯಗಳಲ್ಲಿ ತಯಾರಿಕೆ

ಐಸಿಎಫ್ ಚೆನ್ನೈ ಜೊತೆಗೆ ವಂದೇ ಭಾರತ್ ರೈಲುಗಳನ್ನು ಲಾತೂರ್ (ಮಹಾರಾಷ್ಟ್ರ), ಸೋನಿಪತ್ (ಹರಿಯಾಣ), ಮತ್ತು ರಾಯ್ಬರೇಲಿ (ಉತ್ತರ ಪ್ರದೇಶ) ಗಳಲ್ಲಿಯೂ ತಯಾರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಪ್ರತಿ ವಾರ ಎರಡು ಅಥವಾ ಮೂರು ಹೊಸ ವಂದೇ ಭಾರತ್ ರೈಲುಗಳನ್ನು ಹೊರತರಲು ರೈಲ್ವೆಗೆ ಸಾಧ್ಯವಾಗುತ್ತದೆ ಎಂದು ವೈಷ್ಣವ್ ಹೇಳಿದರು.

 40 ಲಕ್ಷ ಕೋಟಿ ರೂಪಾಯಿ ಬಜೆಟ್‌

40 ಲಕ್ಷ ಕೋಟಿ ರೂಪಾಯಿ ಬಜೆಟ್‌

ಈ ವರ್ಷದ ಕೇಂದ್ರ ಬಜೆಟ್ ಭಾರತೀಯ ರೈಲ್ವೇಯ ಬಂಡವಾಳದ ವೆಚ್ಚವನ್ನು 2.40 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ. ನಿಧಿ ಹಂಚಿಕೆಯ ಬಹುಪಾಲು ಭಾಗವನ್ನು ಟ್ರ್ಯಾಕ್‌ಗಳ ನವೀಕರಣ, ಗೇಜ್ ಪರಿವರ್ತನೆ ಇತ್ಯಾದಿಗಳಿಗೆ ಬಳಸಿದರೆ, ಹೆಚ್ಚಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲು ಸಾಕಷ್ಟು ಮೊತ್ತವನ್ನು ಬಳಸಲಾಗುತ್ತದೆ. ರೈಲ್ವೆಯು ಇನ್ನೂ 100 ವಿಸ್ಟಾಡೋಮ್ ಕೋಚ್‌ಗಳನ್ನು ಮಾಡಲು ಯೋಜಿಸುತ್ತಿದೆ. ಇದರ ಗುರಿ ಪ್ರವಾಸಿಗರನ್ನು ಆಕರ್ಷಿಸುವುದು.

English summary
After the phenomenal success of Vande Bharat trains, Indian Railways is now planning for Vande Metros,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X