ಅಮಿತ್ ಶಾ : ಚುನಾವಣಾ ಚಾಣಾಕ್ಯ, ಸರಳ ವ್ಯಕ್ತಿ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಅ. 19 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಧುನಿಕ ಕಾಲದ ಚಾಣಾಕ್ಯ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಚುನಾವಣೆಯನ್ನು ಗೆಲ್ಲಲು ಅವರು ರೂಪಿಸುವ ತಂತ್ರದಿಂದಾಗಿ ಈ ಹೆಸರು ಬಂದಿದೆ. ಅಮಿತ್ ಶಾ ಒಬ್ಬ ಟಾಸ್ಕ್ ಮಾಸ್ಟರ್, ಅಷ್ಟೇ ಸರಳವಾದ ವ್ಯಕ್ತಿ.

53 ವರ್ಷದ ಅಮಿತ್ ಶಾ ಮೂರು ಅಂಶಗಳ ಮೇಲೆ ಗಮನ ಹರಿಸುತ್ತಾರೆ. ಕಾರ್ಯಕರ್ತ, ವಿಚಾರಧಾರೆ ಮತ್ತು ಕಾರ್ಯಾಲಯ. ಕಾರ್ಯಕರ್ತರ ಶಕ್ತಿ, ವಿಚಾರಧಾರೆ ಮೇಲಿನ ಗಾಢವಾದ ನಂಬಿಕೆ. ಕೆಲಸ ಮಾಡುವ ಸ್ಥಳ ಚೆನ್ನಾಗಿದ್ದರೆ ಅರ್ಧ ಗೆದ್ದಂತೆಯೇ ಸರಿ.

ಚಿಕ್ಕವಯಸ್ಸಿನಲ್ಲಿಯೇ ಅಮಿತ್ ಶಾ ರಾಜಕಾರಣದತ್ತ ಆಕರ್ಷಿತರಾದವರು. ಒಂಭತ್ತು ವರ್ಷವಿರುವಾಗಲೇ ಅವರು ಕೌಟಿಲ್ಯನ ಅರ್ಥಶಾಸ್ತ್ರವನ್ನು ಓದಿದ್ದರು. ರಾಜಕಾರಣದಲ್ಲಿ ಚಾಣಕ್ಯನ ತಂತ್ರಗಳನ್ನು ಬಳಸಬೇಕು ಎಂದು ಅವರು ಕಾರ್ಯಕರ್ತರಿಗೆ ಹೇಳುತ್ತಾರೆ. ತಮ್ಮ ಗೆಲುವಿನ ಹಿಂದಿನ ಶಕ್ತಿಯೂ ಅದೇ ಎನ್ನುತ್ತಾರೆ.

What makes Amit Shah, Amit Shah : Lesser known facts

ಅಮಿತ್ ಶಾ ಚಿಕ್ಕವಯಸ್ಸಿನಲ್ಲಿಯೇ ಭಾಗವತ ಪುರಾಣದಿಂದ ಸ್ಫೂರ್ತಿ ಪಡೆದಿದ್ದರು. ಮಹಾತ್ಮ ಗಾಂಧಿ ಅವರ ರಾಜಕೀಯ ವಿಚಾರಧಾರೆಯತ್ತ ಆಕರ್ಷಿತರಾಗಿದ್ದರು. ಬಹುಬೇಗನೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದರು. ಅಹಮದಾಬಾದ್‌ನ ಶಿಕ್ಷಾ ವರ್ಗದಲ್ಲಿಯೇ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ಲೋಕಸಭೆ ಚುನಾವಣೆಗೆ ಬಿಜೆಪಿಯ 'ಮಿಷನ್ 350', ಅಮಿತ್ ಶಾ ಸೂಚನೆ ಏನು?

ಬೂತ್ ಮಟ್ಟದ ಕಾರ್ಯಕರ್ತರಾಗಿದ್ದಾಗ ಅಮಿತ್ ಶಾ ಬಿಜೆಪಿಗೆ ಕಾರ್ಯಕರ್ತರನ್ನು ಸೇರಿಸುವ ಕೆಲಸವನ್ನು ಮಾಡುತ್ತಿದ್ದರು. ಪಕ್ಷದ ಅಧ್ಯಕ್ಷರಾದ ಬಳಿಕ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿ ಬೆಳೆಸಿದರು.

ಅಮಿತ್ ಶಾ ಅವರ ಜೊತೆ ಕೆಲಸ ಮಾಡಿದ ಎಲ್ಲರೂ ಅವರೊಬ್ಬ ಟಾಸ್ಕ್ ಮಾಸ್ಟರ್ ಎಂದು ಹೇಳುತ್ತಾರೆ. ಅಷ್ಟು ಎತ್ತರದ ಹುದ್ದೆಯಲ್ಲಿದ್ದರೂ ಅವರು ಬಹಳ ಸರಳವಾದ ವ್ಯಕ್ತಿ. ರಾಜ್ಯಗಳಿಗೆ ಭೇಟಿ ನೀಡಿದಾಗ ಪಕ್ಷದ ಕಚೇರಿಯಲ್ಲಿ ಅವರು ವಾಸ್ತವ್ಯ ಹೂಡುತ್ತಾರೆ. ಪಂಚತಾರಾ ಹೋಟೆಲ್ ವಾಸ್ತವ್ಯ ಬಯಸುವುದಿಲ್ಲ.

ವಿಮಾನ ಹತ್ತುವ ಮುನ್ನ ಅಮಿತ್ ಶಾ ಹೇಳಿದ 6 ಸಂಗತಿ

ಪಕ್ಷದ ಕಚೇರಿಯಲ್ಲಿ ಸಾಧ್ಯವಿಲ್ಲದಿದ್ದರೆ ಸರ್ಕಾರಿ ವಸತಿ ಗೃಹಗಳಲ್ಲಿ ಉಳಿದುಕೊಳ್ಳುತ್ತಾರೆ. ಕಡಿಮೆ ದೂರದ ಪ್ರಯಾಣಕ್ಕೆ ಖಾಸಗಿ ಹೆಲಿಕಾಪ್ಟರ್ ಬದಲು ರಸ್ತೆಯ ಮಾರ್ಗವಾಗಿಯೇ ಸಾಗುತ್ತಾರೆ. ಮಾಂಸಹಾರವನ್ನು ಅವರು ಸೇವಿಸುವುದಿಲ್ಲ. ಸಿಗರೇಟ್, ಮದ್ಯಪಾನ ಮಾಡುವುದಿಲ್ಲ. ಎಲ್ಲಕಾರ್ಯಕರ್ತರನ್ನು ಒಟ್ಟಾಗಿ ಕರೆದುಕೊಂಡು ಹೋಗಬೇಕು ಎಂಬ ತತ್ವದಲ್ಲಿ ಅವರು ನಂಬಿಕೆ ಇಟ್ಟಿದ್ದಾರೆ.

ಬಾಲ್ಯದಿಂದಲೇ ಅಮಿತ್ ಶಾ ಸರಳತೆಯ ಸೂತ್ರವನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದರೂ ಅವರು ಸರಳತೆಯ ತತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಅವರ ಕುಟುಂಬ ಅಹಮದಾಬಾದ್‌ಗೆ ಸ್ಥಳಾಂತರಗೊಂಡಾಗ ಒಂದು ಬೆಡ್‌ ರೂಂ, ಮನೆಯಲ್ಲಿ ವಾಸಿಸುತ್ತಿದ್ದರು. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಅವರು, ತಾಮ್ರದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
He is tough, a task master and yet a simple person. He is termed as a modern day Chanakya and a man seen as capable of winning any election. This is the 53 year old Amit Shah, the national president of the BJP. Shah believes in three things- Karyakarta, vichardara and karyalaya.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ