ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಬಗ್ಗೆ ಸರ್ಕಾರ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್‌ 15: ವಿಶ್ವ ಪ್ರಸಿದ್ಧ ಕೊಹಿನೂರ್‌ ವಜ್ರವನ್ನು ಮರಳಿ ಭಾರತಕ್ಕೆ ತರಲು ಭಾರತ ಸರ್ಕಾರವು ಸಮರ್ಪಕ ಮಾರ್ಗಗಳನ್ನು ಹುಡುಕುವುದನ್ನು ಮುಂದುವರಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಬ್ರಿಟನ್‌ನ ದೀರ್ಘಾವಧಿಯ ​​ರಾಣಿ ಎಲಿಜಬೆತ್ IIರ ಮರಣದ ನಂತರ, ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾದ ಕೊಹಿನೂರ್‌ ವಜ್ರವನ್ನು ಮರಳಿ ತರುವ ಬಗ್ಗೆ ಆಗ್ರಹಗಳು ಮತ್ತೆ ಜೋರಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ಅವರು ನೀಡಿದ ಅರಿಂದಮ್ ಬಾಗ್ಚಿ ಅವರು ಕೆಲವು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಇದಕ್ಕೆ ಸರ್ಕಾರ ನೀಡಿದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದರು.

ಕೊಹಿನೂರ್ ವಜ್ರದ ಬಗ್ಗೆ ರಾಜಮನೆತನದ ನಿರ್ಧಾರ ಏನಾಗಬಹುದು?ಕೊಹಿನೂರ್ ವಜ್ರದ ಬಗ್ಗೆ ರಾಜಮನೆತನದ ನಿರ್ಧಾರ ಏನಾಗಬಹುದು?

ನನ್ನ ತಿಳುವಳಿಕೆ ಏನೆಂದರೆ, ಭಾರತ ಸರ್ಕಾರವು ಕೆಲವು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದೆ. ನಾವು ಯುಕೆ ಸರ್ಕಾರದೊಂದಿಗೆ ಕಾಲಕಾಲಕ್ಕೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ. ಕೊಹಿನೂರ್‌ ವಜ್ರವನ್ನು ಮರಳಿ ಭಾರತಕ್ಕೆ ತರಲು ಭಾರತ ಸರ್ಕಾರವು ಸಮರ್ಪಕ ಮಾರ್ಗಗಳನ್ನು ಹುಡುಕುವುದನ್ನು ಮುಂದುವರಿಸುತ್ತಿದೆ ಎಂದು ನಾವು ಹೇಳಿದ್ದೇವೆ ಅವರು ಹೇಳಿದರು.

ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾದ 108 ಕ್ಯಾರೆಟ್ ಕೊಹಿನೂರ್ ವಜ್ರವನ್ನು 1849ರಲ್ಲಿ ರಾಣಿ ವಿಕ್ಟೋರಿಯಾಗೆ ನೀಡಲಾಯಿತು. ಪ್ರಸ್ತುತ ಕೊಹಿನೂರ್ ವಜ್ರವನ್ನು ಮಾಲ್ಟೀಸ್ ಕ್ರಾಸ್‌ನಲ್ಲಿ ಬ್ರಿಟನ್‌ನ ದಿವಂಗತ ಎಲಿಜಬೆತ್ II ರಾಣಿಗಾಗಿ ಮಾಡಿದ ಕಿರೀಟದಲ್ಲಿ ಅಳವಡಿಸಲಾಗಿದೆ. 108 ಕ್ಯಾರೆಟ್ ಕೊಹಿನೂರ್ ವಜ್ರವನ್ನು ರಾಣಿ ವಿಕ್ಟೋರಿಯಾಗೆ 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ನೀಡಿದರು. ರಾಣಿ ತಾಯಿಯು 1937ರಲ್ಲಿ ತನ್ನ ಕಿರೀಟದ ಮೇಲೆ ಅದನ್ನು ಧರಿಸಿದ್ದಳು. ಇತ್ತೀಚೆಗೆ ಟ್ವಿಟರ್‌ನಲ್ಲಿ ಭಾರತಕ್ಕೆ ಕೊಹಿನೂರ್‌ ವಜ್ರವನ್ನು ಮರಳಿ ಭಾರತಕ್ಕೆ ತರುವ ಬೇಡಿಕೆಗಳು ಟ್ರೆಂಡ್ ಆಗಿವೆ.

ಕೊಹಿನೂರ್‌ ರೀತಿಯಲ್ಲೇ ಸ್ಟಾರ್ ಡೈಮಂಡ್‌ ಹಿಂದಿರುಗಿಸಲು ಆಗ್ರಹಿಸಿದ ದಕ್ಷಿಣ ಆಫ್ರಿಕಾಕೊಹಿನೂರ್‌ ರೀತಿಯಲ್ಲೇ ಸ್ಟಾರ್ ಡೈಮಂಡ್‌ ಹಿಂದಿರುಗಿಸಲು ಆಗ್ರಹಿಸಿದ ದಕ್ಷಿಣ ಆಫ್ರಿಕಾ

 2023 ಮೇನಲ್ಲಿ ರಾಜ III ನೇ ಚಾರ್ಲ್ಸ್ ಪಟ್ಟಾಭಿಷೇಕ

2023 ಮೇನಲ್ಲಿ ರಾಜ III ನೇ ಚಾರ್ಲ್ಸ್ ಪಟ್ಟಾಭಿಷೇಕ

ಮುಂದಿನ ವರ್ಷ 2023 ಮೇ ತಿಂಗಳಲ್ಲಿ ರಾಜ ಚಾರ್ಲ್ಸ್‌ನ ಪಟ್ಟಾಭಿಷೇಕ ನಡೆಯುವಾಗ ಬ್ರಿಟನ್‌ನ ಹೊಸ ರಾಜ III ನೇ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ ಅವರು ಕೊಹಿನೂರ್‌ ವಜ್ರವಿರುವ ಕಿರೀಟವನ್ನು ಅಲಂಕರಿಸುತ್ತಾರೆ ಎಂಬ ಊಹಾಪೋಹಗಳು ಮೊದಲು ಇದ್ದವು. ಆದಾಗ್ಯೂ ಟೆಲಿಗ್ರಾಫ್‌ನ ವರದಿಯು ವಜ್ರದ ಮಾಲೀಕತ್ವದ ಬಗ್ಗೆ ಈಗ ಇರುವ ಮಾತುಕತೆಗಳ ಹಿನ್ನೆಲೆಯಲ್ಲಿ ರಾಜಕೀಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಕ್ಯಾಮಿಲ್ಲಾ ಇನ್ನು ಮುಂದೆ ಅದನ್ನು ಧರಿಸುವುದಿಲ್ಲ ಎಂದು ಹೇಳಿದೆ.

 ರಾಣಿ ಎರಡನೇ ಎಲಿಜಬೆತ್‌ ನಿಧನ

ರಾಣಿ ಎರಡನೇ ಎಲಿಜಬೆತ್‌ ನಿಧನ

ರಾಣಿಯ ಪಟ್ಟಾಭಿಷೇಕವು ಕೊಹಿನೂರ್ ವಜ್ರವನ್ನು ಕಿರೀಟದಿಂದ ಬೇರ್ಪಡಿಸಬಹುದು ಅಥವಾ ಹೊಸ ರಾಜ ಮತ್ತು ರಾಣಿ ರಾಯಲ್ ಸಂಗ್ರಹದಿಂದ ಬೇರೆ ಕಿರೀಟವನ್ನು ಬಳಸಬಹುದು ಎಂದು ವರದಿಗಳು ತಿಳಿಸುತ್ತಿವೆ. ಬ್ರಿಟನ್ ರಾಣಿ ಎರಡನೇ ಎಲಿಜಬೆತ್‌ ನಿಧನರಾದಾಗ ಭಾರತವು ಲಂಡನ್‌ನಿಂದ ಕೊಹಿನೂರ್‌ ವಜ್ರವನ್ನು ತರಲು ಆಗ್ರಹಗಳು ಕೇಳಿ ಬಂದವು.

 ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ

ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ

105.6 ಕ್ಯಾರೆಟ್‌ನ ಅದ್ಭುತವಾದ ನೀಲಿ ಬೆಳಕಿನ ಕೊಹಿನೂರ್‌ ವಜ್ರವು ಈಗ ಕಿರೀಟದಲ್ಲಿರುವ ವಜ್ರಗಳಲ್ಲಿ ಒಂದಾಗಿದೆ. ವಜ್ರವನ್ನು 14 ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ ಹಚ್ಚಲಾಗಿತ್ತು. ಶತಮಾನಗಳ ಅವಧಿಯಲ್ಲಿ ವಿವಿಧ ಕೈಗಳ ಮೂಲಕ ಅದು ಸರಿದು ಹೋಯಿತು. ಭಾರತ ಸರ್ಕಾರವು 1947ರಲ್ಲಿ ಒಮ್ಮೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕೊಹಿನೂರ್‌ನ ವಾಪಸಾತಿಗೆ ಒತ್ತಾಯಿಸಿದೆ. ಆದಾಗ್ಯೂ, ಬ್ರಿಟಿಷ್ ಸರ್ಕಾರವು ವಜ್ರವನ್ನು ಕೊಡಲು ನಿರಾಕರಿಸಿತ್ತು.

 ಪುರಿಯ ಜಗನ್ನಾಥ ಸೇನೆಯಿಂದ ಒತ್ತಾಯ

ಪುರಿಯ ಜಗನ್ನಾಥ ಸೇನೆಯಿಂದ ಒತ್ತಾಯ

ಇದಲ್ಲದೆ ಒರಿಸ್ಸಾದ ಪುರಿಯ ಜಗನ್ನಾಥ ಸೇನೆ ಹಾಗೂ ವಾರಂಗಲ್‌ ಭದ್ರಕಾಳಿ ದೇಗುಲದಿಂದಲೂ ಕೊಹಿನೂರ್ ವಜ್ರದ ಉತ್ತರದಾಯಿತ್ವಕ್ಕಾಗಿ ಆಗಹ್ರಗಳು ಕೇಳಿಬಂದಿದ್ದವು. ಆದರೆ ಅದನ್ನು ತರುವ ಬಗ್ಗೆ ಭಾರತ ಸರ್ಕಾರದಿಂದ ಎಲ್ಲಿಯೂ ಮಾತುಗಳು ಕೇಳಿ ಬಂದಿರಲಿಲ್ಲ. ಒರಿಸ್ಸಾದ ಪುರಿಯ ಜಗನ್ನಾಥ ಸೇನೆಯು ಕೊಹಿನೂರ್‌ ವಜ್ರವನ್ನು ದೇವಸ್ಥಾನಕ್ಕೆ ತರಬೇಕು ಎಂದು ಇದಕ್ಕೆ ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹ ಮಾಡಿತ್ತು.

English summary
External Affairs Ministry Spokesperson Arindam Bagchi said the Government of India continues to find appropriate ways to bring the world famous Kohinoor diamond back to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X