Home Loan Tax Exemption: ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಮನೆ ಖರೀದಿದಾರರ ನಿರೀಕ್ಷೆಗಳೇನು?
Home Loan Tax Exemption: ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲ ಸೀತಾರಾನ್ ಅವರು ಮಂಡಿಸಲಿದ್ದಾರೆ. ತುಂಬಾ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾದರೆ ಈ ಬಜೆಟ್‌ನಲ್ಲಿ ಮನೆ ಖರೀದಿದಾರರು ಯಾವೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಇದೀಗ ಗೃಹ ಸಾಲದ ಬಡ್ಡಿಯಲ್ಲಿ ಗರಿಷ್ಠ ಎರಡು ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಇದೆ. ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವಂತೆ ರಿಯಲ್ ಎಸ್ಟೇಟ್ ವಲಯ ಒತ್ತಾಯ ಮಾಡಿದೆ. ಇದರಿಂದ ಮನೆ ಖರೀದಿದಾರರಿಗೆ ಹೆಚ್ಚಿನ ಲಾಭ ಸಿಕ್ಕಂತಾಗಲಿದೆ.

ಸೆಕ್ಷನ್ 80ಸಿ ಅಡಿಯಲ್ಲಿ, ಒಂದೂವರೆ ಲಕ್ಷ ರೂಪಾಯಿಗಳವರೆಗೆ ವಿನಾಯಿತಿ ಲಭ್ಯವಿದೆ. ಇದು ಗೃಹ ಸಾಲದ ಅಸಲು ಮತ್ತು ಇತರ ಹೂಡಿಕೆಗಳನ್ನು ಒಳಗೊಂಡಿರಲಿದೆ. ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಲಾಗಿದ್ದು, ಇದರಿಂದ ತೆರಿಗೆದಾರರಿಗೆ ಹೆಚ್ಚಿನ ಲಾಭ ಸಿಕ್ಕಂತಾಗಲಿದೆ.
ಬೃಹತ್ ನಗರಗಳಲ್ಲಿ, ಅದರಲ್ಲೂ ಮೆಟ್ರೋ ನಗರಗಳಲ್ಲಿ ಆಸ್ತಿ, ಮನೆಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೈಗೆಟಕುವ ದರದ ಮನೆಗಳು ಸಿಗುವಂತೆ ಒತ್ತಾಯಿಸಲಾಗಿದೆ. ಇದರಿಂದ ಹೆಚ್ಚಿನ ಜನ ಈ ಯೋಜನೆಯ ಲಾಭ ಪಡೆಯಲು ಸಾಧ್ಯ ಆದಂತಾಗಲಿದೆ. ಜೊತೆಗೆ ರಿಯಲ್ ಎಸ್ಟೇಟ್ ವಲಯವು ತರ್ಕಬದ್ಧಗೊಳಿಸುವಿಕೆ ಮತ್ತು ಮುದ್ರಾಂಕ ಶುಲ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿದೆ. ಇದರಿಂದ ಮನೆ ಖರೀದಿದಾರರ ಮೇಲಿನ ಹೊರೆ ಕಡಿಮೆ ಆದಂತಾಗಲಿದೆ.
ಇದೀಗ ಗೃಹ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯ ಇರುವುದರಿಂದ ಭಾರತದಲ್ಲಿ ಮನೆ ಖರೀದಿದಾರರು ಹಣಕಾಸಿನ ಸಹಾಯವನ್ನು ಪಡೆಯುತ್ತಾರೆ. ಆದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸರ್ಕಾರವು ಗೃಹ ಸಾಲಗಳ ಮೇಲೆ ವಿನಾಯಿತಿಗಳನ್ನ ಒದಗಿಸಿದೆ. ಆದರೆ, ಈ ಎಲ್ಲಾ ನಿರೀಕ್ಷೆಗಳು ಬಜೆಟ್ ಮಂಡನೆ ವೇಳೆ ಈಡೇರುತ್ತವೆಯೋ ಇಲ್ಲವೋ ಎಂದು ಕಾದುನೋಡಬೇಕಿದೆ.
ಸೆಕ್ಷನ್ 80C: ಗೃಹ ಸಾಲದ ಅಸಲು ಮರುಪಾವತಿಯ ಮೇಲೆ 1.5 ಲಕ್ಷ ರೂಪಾಯಿಗಳವರೆಗೆ ಕಡಿತವನ್ನು ಪಡೆಯಬಹುದು. ಮನೆ ನಿರ್ಮಾಣ ಪೂರ್ಣಗೊಂಡ ನಂತರ ಈ ರಿಯಾಯಿತಿಯನ್ನು ಪಡೆಯಬಹುದು. 5 ವರ್ಷಗಳೊಳಗೆ ಮನೆ ಮಾರಾಟ ಮಾಡಿದರೆ, ಈ ವಿನಾಯಿತಿಯನ್ನು ರದ್ದುಪಡಿಸಲಾಗುತ್ತದೆ.
ವಿಭಾಗ 24 (B): ಗೃಹ ಸಾಲದ ಮೇಲೆ ಪಾವತಿಸುವ ಬಡ್ಡಿಯ ಮೇಲೆ ವಾರ್ಷಿಕ 2 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ವಿನಾಯಿತಿಯು ಸ್ವಯಂ ಆಕ್ರಮಿತ ಆಸ್ತಿಗೆ ಆಗಿದೆ. ಮನೆಯನ್ನು ಬೇರೊಬ್ಬರಿಗೆ ಗುತ್ತಿಗೆ ನೀಡಿದರೆ, ಬಡ್ಡಿಯ ಮೇಲಿನ ಮಿತಿ ಇಲ್ಲ. ಇದರ ನಿರ್ಮಾಣವನ್ನ 5 ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ವಿಳಂಬ ಆದರೆ, ರಿಯಾಯಿತಿ ಮಿತಿಯು 30,000 ವರೆಗೆ ಉಳಿಯುತ್ತದೆ.
ವಿಭಾಗ 80EE: ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ವಿನಾಯಿತಿ ಇರುತ್ತದೆ. ಈ ಹೆಚ್ಚುವರಿ ವಿನಾಯಿತಿಯು ವಾರ್ಷಿಕ 50,000 ವರೆಗೆ ಇರುತ್ತದೆ. ಈ ರಿಯಾಯಿತಿಯನ್ನ ಮೊದಲ ಬಾರಿ ಮನೆ ಖರೀದಿಸುವವರಿಗೆ ಮಾತ್ರ ನೀಡಲಾಗುತ್ತದೆ. ಅದಕ್ಕಾಗಿ ಸಾಲದ ಮೊತ್ತ 35 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು. ಆಸ್ತಿಯ ಮೌಲ್ಯ 50 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು. ಈ ರಿಯಾಯಿತಿಯು 1ನೇ ಏಪ್ರಿಲ್ 2016ರಿಂದ 31ನೇ ಮಾರ್ಚ್ 2017ರಮವರೆಗೆ ಸಾಲವನ್ನು ಪಡೆದವರಿಗೆ ಮಾತ್ರ ಲಭ್ಯ ಇರುತ್ತದೆ.
ವಿಭಾಗ 80 EEA: ಕೈಗೆಟಕುವ ಬೆಲೆಯ ಮನೆ ಖರೀದಿದಾರರಿಗೆ ಹೆಚ್ಚುವರಿ ವಿನಾಯಿತಿ. 1.5 ಲಕ್ಷದವರೆಗಿನ ಬಡ್ಡಿಯ ಮೇಲೆ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತತ್ತದೆ. ಆದ್ದರಿಂದ ಮನೆಯ ಮುದ್ರಾಂಕ ಶುಲ್ಕ 45 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು. ಸಾಲವನ್ನ 1ನೇ ಏಪ್ರಿಲ್ 2019ರಿಂದ 31ನೇ ಮಾರ್ಚ್ 2023ರ ವರೆಗೆ ತೆಗೆದುಕೊಳ್ಳಬೇಕು. ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಈ ರಿಯಾಯಿತಿ ಕೂಡ ಸಿಗುತ್ತದೆ. ಸೆಕ್ಷನ್ 24 (ಬಿ) ಅಡಿಯಲ್ಲಿ ತೆಗೆದುಕೊಳ್ಳಲಾದ 2 ಲಕ್ಷ ರೂಪಾಯಿದೆ ಹೆಚ್ಚುವರಿಯಾಗಿ ಈ ವಿನಾಯಿತಿ ಲಭ್ಯವಿದೆ.












Click it and Unblock the Notifications