ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ವಿಡಿಯೋ ಕಾನ್ಫರೆನ್ಸ್‌ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

|
Google Oneindia Kannada News

ಕೋಲ್ಕತ್ತಾ, ಡಿಸೆಂಬರ್‌ 30: ಪಶ್ಚಿಮ ಬಂಗಾಳದ ಮೊದಲ ಹಾಗೂ ದೇಶದ 7ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಿಂದ ವಿಡಿಯೋ ಕಾನ್ಫರೇನ್ಸ್‌ ಮೂಲಕ ಚಾಲನೆ ನೀಡಿದ್ದಾರೆ.

ಹೌರಾದಿಂದ ನ್ಯೂ ಜಲ್ಪೈಗುರಿಗೆ ನಡುವೆ ಓಡಾಡಲಿರುವ ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಗುಜರಾತ್‌ನ ಗಾಂಧಿ ನಗರದಲ್ಲಿ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾದ ತಮ್ಮ ತಾಯಿ ಹೀರಾಬೆನ್‌ ಮೋದಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಅವರು ಬೆಳಗ್ಗೆ ಸುಮಾರು 11.40 ಗಂಟೆಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದಾರೆ.

ಅಮೃತ್ ಭಾರತ್ ನಿಲ್ದಾಣ ಯೋಜನೆ: 1,000 ಸಣ್ಣ ನಿಲ್ದಾಣಗಳನ್ನು ನವೀಕರಿಸಲು ರೈಲ್ವೆ ಸಚಿವಾಲಯ ನಿರ್ಧಾರ ಅಮೃತ್ ಭಾರತ್ ನಿಲ್ದಾಣ ಯೋಜನೆ: 1,000 ಸಣ್ಣ ನಿಲ್ದಾಣಗಳನ್ನು ನವೀಕರಿಸಲು ರೈಲ್ವೆ ಸಚಿವಾಲಯ ನಿರ್ಧಾರ

ಶುಕ್ರವಾರ ನಸುಕಿನಲ್ಲಿ ತಮ್ಮ ತಾಯಿ ಹೀರಾಬಾ ಅವರ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಅಂತಿಮ ವಿಧಿವಿಧಾನದ ನಂತರ ವೀಡಿಯೊ ಕಾನ್ಫರೆನ್ಸ್ ಮೂಲಕ ಯೋಜಿಸಿದಂತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಕಾರ್ಯಾಲಯದ ಟ್ವಿಟ್ಟರ್‌ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಶ್ಚಿಮ ಬಂಗಾಳದಲ್ಲಿ ಇಂದಿನ ನಿಗದಿತ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಸೇರಲಿದ್ದಾರೆ ಎಂದು ಖಚಿತಪಡಿಸಿದ್ದರು. ಕೋಲ್ಕತ್ತಾದ ಹೌರಾದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡುವುದು ಮತ್ತು ನಮಾಮಿ ಗಂಗೆ ಅಡಿಯಲ್ಲಿ ರೈಲ್ವೆಯ ಇತರ ಅಭಿವೃದ್ಧಿ ಕಾಮಗಾರಿಗಳು ಮತ್ತು ರಾಷ್ಟ್ರೀಯ ಗಂಗಾ ಮಂಡಳಿಯ ಸಭೆಯು ಯೋಜನೆಯ ಪ್ರಕಾರ ನಡೆಯಲಿದೆ ಎಂದು ಮೂಲಗಳು ತಿಳಿದ್ದವು.

ಏತನ್ಮಧ್ಯೆ, ಪ್ರಧಾನಿ ಮೋದಿ ಅವರ ಸಹೋದರ ಸೋಮಾಭಾಯಿ ಮೋದಿ ಮತ್ತು ಇತರ ಕುಟುಂಬ ಸದಸ್ಯರು ಗಾಂಧಿನಗರದಲ್ಲಿರುವ ಪ್ರಧಾನಿ ಮೋದಿ ಅವರ ತಾಯಿ ಹೀರಾಬಾ ಮೋದಿ ಅವರ ನಿವಾಸಕ್ಕೆ ಆಗಮಿಸಿದ್ದರು. ಆಸ್ಪತ್ರೆಗೆ ದಾಖಲಾದ ಕೆಲವು ದಿನಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬಾನ್‌ ಮೋದಿ ಅವರು 100ನೇ ವಯಸ್ಸಿನಲ್ಲಿ ಶುಕ್ರವಾರ ಮುಂಜಾನೆ ನಿಧನರಾದರು. ತಮ್ಮ ಮೃತ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಮೌಲ್ಯಗಳಿಗೆ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಕರ್ಮಯೋಗಿ ಎಂದು ಬಣ್ಣಿಸಿದರು.

ವಿಡಿಯೋ ಕಾನ್ಫರೇನ್ಸ್‌ ಮೂಲಕ ಚಾಲನೆ

ವಿಡಿಯೋ ಕಾನ್ಫರೇನ್ಸ್‌ ಮೂಲಕ ಚಾಲನೆ

ಈಶಾನ್ಯ ಗಡಿ ರೈಲ್ವೆಯು (ಎನ್‌ಎಫ್‌ಆರ್) ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿ ನಡುವೆ ತನ್ನ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರವನ್ನು ಸೋಮವಾರ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ನಿಗದಿಯಂತೆ ಈಶಾನ್ಯ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು ಉದ್ಘಾಟಿಸಿದರು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶತಾಬ್ದಿ ಎಕ್ಸ್‌ಪ್ರೆಸ್ ನಂತರ ನ್ಯೂ ಜಲ್ಪೈಗುರಿ (ಎನ್‌ಜೆಪಿ) ಸಿಲಿಗುರಿಯಿಂದ ಕೋಲ್ಕತ್ತಾ ನಡುವಿನ ಮೊದಲ ಎಕ್ಸ್‌ಪ್ರೆಸ್ ರೈಲಾಗಿದೆ.

560 ಕಿಮೀ ಪೂರ್ಣಗೊಳಿಸಲು 8.30 ಗಂಟೆ ಸಮಯ

560 ಕಿಮೀ ಪೂರ್ಣಗೊಳಿಸಲು 8.30 ಗಂಟೆ ಸಮಯ

ವಂದೇ ಭಾರತ್ ಸ್ವಯಂಚಾಲಿತ ಬಾಗಿಲುಗಳು ಮತ್ತು ವೈಫೈ ಆಕ್ಸೆಸ್‌ನಂತಹ ಪ್ರಯಾಣಿಕರ ಸ್ನೇಹಿ ಸೌಲಭ್ಯಗಳನ್ನು ಹೊಂದಿರುತ್ತದೆ. ದೇಶದ ಏಳನೇ ವಂದೇ ಭಾರತ್ ರೈಲು ಸೋಮವಾರ ಮೊದಲ ಪ್ರಾಯೋಗಿಕ ಚಾಲನೆಯಲ್ಲಿ ನ್ಯೂ ಜಲ್ಪೈಗುರಿ - ಹೌರಾ ನಡುವೆ ಸುಮಾರು 560 ಕಿಮೀ ಪೂರ್ಣಗೊಳಿಸಲು ಸುಮಾರು 8.30 ಗಂಟೆಗಳನ್ನು ತೆಗೆದುಕೊಂಡಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

7ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್

7ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್

7ನೇ ವಂದೇ ಭಾರತ್‌ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿ ನಡುವೆ ಸಂಪರ್ಕ ಕಲ್ಪಿಸುತ್ತದೆ. ಹೌರಾದಿಂದ ನ್ಯೂ ಜಲ್ಪೈಗುರಿಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಲಿದ್ದು, ರಾಜ್ಯ ರಾಜಧಾನಿ ಕೋಲ್ಕತ್ತಾ ಮತ್ತು ಉತ್ತರ ಬಂಗಾಳದ ನಡುವಿನ ವೇಗದ ಸಂಪರ್ಕ ಸಾಧ್ಯವಾಗಲಿದೆ. ರೈಲು ಈ ಎರಡು ನಿಲ್ದಾಣಗಳ ನಡುವೆ ಪ್ರಸ್ತುತ ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ ಇದು ವೇಗವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು 550 ಕಿಮೀ ದೂರದ ಪ್ರಯಾಣಕ್ಕೆ ಕೇವಲ 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಿಖರವಾದ ವೇಳಾಪಟ್ಟಿ ಇನ್ನಷ್ಟೇ ಬರಬೇಕಿದೆ. 2019ರಲ್ಲಿ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪ್ರಾರಂಭವಾದ ನಂತರ ಇದು ಒಟ್ಟಾರೆ ಏಳನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದು ಮೊದಲನೆಯ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಆಗಿದೆ.

ನಿರ್ವಹಣೆಗೆ ಸೌಲಭ್ಯಗಳನ್ನು ಅಂತಿಮ ಸ್ಪರ್ಶ

ನಿರ್ವಹಣೆಗೆ ಸೌಲಭ್ಯಗಳನ್ನು ಅಂತಿಮ ಸ್ಪರ್ಶ

ವಂದೇ ಭಾರತ್‌ ಆಗಮನದ ಹಿನ್ನೆಲೆಯಲ್ಲಿ ಭಾರತದಲ್ಲಿ ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲ್ವೇ ನಿಲ್ದಾಣವಾದ ಹೌರಾದಲ್ಲಿ ಪಾರ್ಕಿಂಗ್ ಮತ್ತು ನಿರ್ವಹಣೆಗೆ ಸೌಲಭ್ಯಗಳನ್ನು ಅಂತಿಮ ಸ್ಪರ್ಶ ನೀಡಲಾಗಿದೆ. ಇತರ ರೀತಿಯ ರೈಲುಗಳಿಗಿಂತ ಈ ರೈಲು ಉತ್ತಮ ಸೌಕರ್ಯಗಳನ್ನು ಮತ್ತು ಉತ್ತಮ ಸೌಕರ್ಯವನ್ನು ಹೊಂದಿದೆ. ಕೆಲವು ಮಾರ್ಗಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪ್ರಯಾಣದ ಸಮಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬಹುದು. ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಇಂಧನ ದಕ್ಷತೆಯೊಂದಿಗೆ 400 ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ತಯಾರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈಗಾಗಲೇ ಘೋಷಿಸಿದ್ದಾರೆ.

English summary
Prime Minister Narendra Modi launched West Bengal's first and country's 7th Vande Bharat Express through video conference from Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X