ಊಟಕ್ಕೆ ಗೋ ಮಾಂಸ ಮಾಡಿಲ್ಲವೆಂದು ಮದುವೆಯೇ ರದ್ದಾಯಿತು!
ಉತ್ತರ ಪ್ರದೇಶ, ಜೂನ್ 18 : ಮದುವೆ ಊಟಕ್ಕೆ ಗೋ ಮಾಂಸ ಮಾಡಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರ್ ನಲ್ಲಿ ನಡೆದಿದೆ.
ವರನ ಕಡೆಯವರು ಮದುವೆ ಊಟೋಪಚಾರದಲ್ಲಿ ಗೋ ಮಾಂಸ ಬಡಿಸಬೇಕು ಹಾಗೂ ವರದಕ್ಷಿಣೆಯಾಗಿ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ನಾವು ಇದಕ್ಕೆ ಒಪ್ಪದಿದ್ದರಿಂದ ವರನ ಕುಟುಂಬದವರು ಮದುವೆಯನ್ನು ರದ್ದು ಮಾಡಿದ್ದಾರೆ ಎಂದು ವಧುವಿನ ತಾಯಿ ಹೇಳಿದ್ದಾರೆ.

ಗೋ ಮಾಂಸದ ವಿಚಾರ ಮುಂದಿಟ್ಟು ಮದುವೆ ಮುರಿದ ವರನ ಸಂಬಂಧಿಕರ ವಿರುದ್ಧ ಪಟ್ವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications