ಮಳೆಯೆಂದು ಸುಮ್ಮನೆ ಕುಳಿತರೆ ಹೊಟ್ಟೆ ತುಂಬೋದು ಹೇಗೆ
ಬೆಂಗಳೂರು, ಜು.20: ಮಳೆ ಪ್ರತಿ ವರ್ಷನೂ ಬರುತ್ತೆ ಆದರೆ ನಾವು ಪ್ರತಿ ದಿನ ಊಟ ಮಾಡಬೇಕಲ್ಲ ಹಾಗಾಗಿ ಮಳೆ ಬಂದರೂ, ಹೊಳೆ ತುಂಬಿದರೂ ತಪ್ಪದೇ ನಮ್ಮ ಕೆಲಸ ಮಾಡಲೇಬೇಕು ಅದು ಅನಿವಾರ್ಯ ಅಂತಾರೆ ಸರ್ಕಸ್ ಮಾಡುವ ಪುಟ್ಟ ಮಕ್ಕಳು.
ಎಲ್ಲರದ್ದೂ ಒಂದು ಬದುಕು ಮಲಗಲು ಸೂರಿಲ್ಲ, ತಿನ್ನಲು ಮೂರು ಹೊತ್ತು ಊಟವಿಲ್ಲ, ಆದರೆ ಕೆಲಸ ಮಾತ್ರ ತುಂಬಾ ಇದೆ, ಈ ಚಿತ್ರದಲ್ಲಿ ನೀವು ನೀಡಿದ ಹಾಗೆ ಮಳೆ ಇನ್ನೇನು ಬರುವ ಹಾಗಿದೆ, ಜನರೆಲ್ಲ ಸೇರಿದ್ದಾರೆ, ಆ ಹಗಲು, ಕತ್ತಲಿನಾಟದಲ್ಲಿ ಮಗುವು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಸಾಗುತ್ತಿದೆ.
ಇನ್ನು ಮನೀಲಾನದಲ್ಲಿ ಭಾರಿ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ರಸ್ತೆ ತುಂಬ ನೀರು ನಿಂತಿದ್ದು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕೆಲವೊಬ್ಬರು ಬೈಕ್‌ಗಳನ್ನು ಅಲ್ಲಿಯೇ ಬಿಟ್ಟು, ಪೆಡಿಕ್ಯಾಬ್‌ನ ಮೊರೆ ಹೋದರೆ ಇನ್ನು ಕೆಲವರು ಬಸ್, ಕಾರುಗಳನ್ನು ಏರಿದರು.
ಕೇರಳದ ಕೋಯಿಕ್ಕೋಡ್‌ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಂದರಲ್ಲಿ ಮರಗಳು ಧರಗುರುಳಿವೆ, ದಿನನಿತ್ಯ ನೂರಾಋಉ ಮರಗಳು ಬೀಳುತ್ತಿದ್ದು, ಅದನ್ನು ತೆರವುಗೊಳಿಸಲು ಸಾರ್ವಜನಿಕರು ಹಾಗೂ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಊನಾದಲ್ಲಿ ಮಳೆಯಿಂದಾಗಿ ಮನೆ, ದೆವಾಲಯಗಳು, ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ರಸ್ತೆಯಲ್ಲೇ ದೋಣಿಯ ಮೇಲೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ಚಿಕ್ಕಮಗಳೂರಿನಲ್ಲಿ ದತ್ತಪೀಠದ ಬಳಿ ಮರಗಳು ಧರೆಗುರುಳಿದ್ದು, ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅನಿವಾರ್ಯ ಇದೆಲ್ಲವೂ ಹೊಟ್ಟೆಪಾಡಿಗಾಗಿ
ದಟ್ಟ ಮೋಡ ಕವಿದಿದೆ, ಸಣ್ಣ ಮಳೆ ಆರಂಭಗೊಂಡಿದೆ ಆದರೂ ಅದನ್ನು ಲೆಕ್ಕಿಸದೆ ಬಾಲಕಿಯೊಬ್ಬಳು ಹಗ್ಗದ ಮೇಲೆ ನಡೆಯುತ್ತಾ ಅಲ್ಲಿ ಸೇರಿದ್ದ ಜನರನ್ನು ಖುಷಿಪಡಿಸುತ್ತಿದ್ದ ಬಾಲಕಿ, ಆಕೆಗೆ ಮಳೆ ಬಂದರೇನು, ಹೊಳೆ ತುಂಬಿದರೇನು ಆಕೆ ಎಲ್ಲಿ ಇರುತ್ತಾಳೋ ಅದೇ ಅವಳ ಮನೆ, ಸುತ್ತಮ ಮುತ್ತಲಿನ ಜನರೇ ಸ್ನೇಹಿತರು ಬಂಧುಗಳು.

ನಾನಾ, ನೀನಾ ಒಂದು ಕೈ ನೋಡಿಯೇ ಬಿಡೋಣ
ಜಮ್‌ಶೇದ್‌ಪುರದ ಟಾಟಾ ಸ್ಟೀಲ್ ಜೈವಿಕ ಉದ್ಯಾನದಲ್ಲಿ ರಾಯಲ್ ಬೆಂಗಾಲ್ ಟೈಗರ್ ನೀನಾ ಅಥವಾ ನಾನಾ ನೋಡಿಯೇ ಬಿಡೋಣ ಎಂದು ಯುದ್ಧಕ್ಕೆ ತಯಾರಾಗಿ ನಿಂತಂತಿದೆ.

ಅಯ್ಯೋ ಅದೆಷ್ಟು ಮಳೆ, ಈ ಸೈಕಲ್ಲೇ ಗತಿ
ಮನೀಲಾದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಡೀ ನಗರ ಜಲಾವೃತವಾಗಿದೆ ಇದರ ಮಧ್ಯೆ ವಾಹನ ದಟ್ಟಣೆ ಏರ್ಪಟ್ಟಿದೆ, ಹಲವರು ಕಚೇರಿಗೆ ತೆರಳಿದ್ದು ಈ ಸೈಕಲ್ ಮೂಲಕ.

ಮರಗಳು ಬಿದ್ದು ದತ್ತಪೀಠ-ಚಿಕ್ಕಮಗಳೂರು ರಸ್ತೆ ಬಂದ್
ಕರಾವಳಿ, ದಕ್ಷಿಣ ಒಳನಾಡು, ಹಾಸನ, ಚಿಕ್ಕಮಗಳೂರು, ಉಡುಪಿಯಲ್ಲಿ ಕಳೆದ ಎರಡು ವಾರಗಳಿಂದ ಭಾರಿ ಮಳೆಯಾಗುತ್ತಿದೆ, ಇದೀಗ ಎರಡು ದಿನಗಳ ಹಿಂದೆ ಅಲ್ಲಿ ಮಳೆಯ ಪ್ರಮಾಣ ಸ್ವಲ್ಪ ತಗ್ಗಿದೆ, ಆದರೆ ಮರಗಳು ಬಿದ್ದು ದತ್ತಪೀಠ ಹಾಗೂ ಚಿಕ್ಕಮಗಳೂರು ನಡುವೆ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ.











Click it and Unblock the Notifications