ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ಮುಸ್ಲಿಮರ ಬಗ್ಗೆ ಯಾವುದೇ ದ್ವೇಷವಿಲ್ಲ: ಸಚಿವ ಗಿರಿರಾಜ್ ಸಿಂಗ್

|
Google Oneindia Kannada News

ನವದೆಹಲಿ, ನವೆಂಬರ್‌ 29: ಕೇಂದ್ರ ಸರ್ಕಾರಕ್ಕೆ ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ಮೂಲಭೂತವಾದಿಗಳು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಾಶಪಡಿಸಲು ಪ್ರಧಾನಿ ನರೇಂದ್ರ ಮೋದಿ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ ಎಂಬ ಆರೋಪದ ವಿರುದ್ಧ ಸ್ವಂತ ಪಕ್ಷವನ್ನೇ ಹಾಳು ಮಾಡುವ ವ್ಯಕ್ತಿ, ನಾಶ ಮಾಡುವ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು: ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದ ಪ್ರೊಫೆಸರ್ ಅಮಾನತುಮಂಗಳೂರು: ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದ ಪ್ರೊಫೆಸರ್ ಅಮಾನತು

ಪಸ್ಮಾಂಡ ಮುಸ್ಲಿಮರು ಛತ್ ಪೂಜೆ ಮಾಡುವ ಗ್ರಾಮಗಳಿಗೆ ನಾನು ಭೇಟಿ ನೀಡಿದ್ದೇನೆ. ಮುಸ್ಲಿಮರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ ಎಂದು ನಾನು ಮತ್ತೆ ಮತ್ತೆ ಹೇಳಿದ್ದೇನೆ. ನಿಷ್ಠುರವಾದಿಗಳೇ ಸಮಾಜದಲ್ಲಿ ವಿಷವನ್ನು ಹರಡುತ್ತಾರೆ. ಓವೈಸಿಯಂತಹ ವ್ಯಕ್ತಿಗಳು ದೇಶಕ್ಕೆ ಅಪಾಯಕಾರಿ. ಬಿಹಾರದಲ್ಲಿ 'ಮಹಾಘಟಬಂಧನ್' ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತದೆ. ಇಂದು ಬಿಹಾರದಲ್ಲಿ ಮಹಾಘಟಬಂಧನ್‌ ಮಾಡಿಕೊಂಡಿರುವ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತವೆ. ಕೇವಲ ಮುಸ್ಲಿಂ ಮತಗಳ ಬಗ್ಗೆ ಕಾಳಜಿ ವಹಿಸುತ್ತವೆ ಎಂದು ಅವರು ಹೇಳಿದರು.

We have no hatred towards Muslims: Union Minister Giriraj Singh

ತಮ್ಮ ಧರ್ಮ ಅಥವಾ ಸಮಾಜದ ವರ್ಗವನ್ನು ಲೆಕ್ಕಿಸದೆ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಜನಸಂಖ್ಯಾ ನಿಯಂತ್ರಣ ಮಸೂದೆಯು ನಿರ್ಣಾಯಕವಾಗಿದೆ. ಏಕೆಂದರೆ ನಾವು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಚೀನಾ ಜನಸಂಖ್ಯೆಯನ್ನು ನಿಯಂತ್ರಿಸಲು ಒಂದು ಮಗು ನೀತಿಯನ್ನು ಜಾರಿಗೆ ತಂದಿತು. ಆ ಮೂಲಕ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಹೇಳಿದರು.

ಮುಸ್ಲಿಮರನ್ನು ಭಯೋತ್ಪಾದಕರು ಎಂದ ಶಿಕ್ಷಕ: ವಿಡಿಯೋ ಹಂಚಿಕೊಂಡ ಯುನೆಸ್ಕೊ ಅಧ್ಯಕ್ಷಮುಸ್ಲಿಮರನ್ನು ಭಯೋತ್ಪಾದಕರು ಎಂದ ಶಿಕ್ಷಕ: ವಿಡಿಯೋ ಹಂಚಿಕೊಂಡ ಯುನೆಸ್ಕೊ ಅಧ್ಯಕ್ಷ

"ಚೀನಾದಲ್ಲಿ ನಿಮಿಷಕ್ಕೆ 10 ಮಕ್ಕಳು ಜನಿಸಿದರೆ, ಭಾರತದಲ್ಲಿ ನಿಮಿಷಕ್ಕೆ 30 ಮಕ್ಕಳು ಜನಿಸುತ್ತಾರೆ, ನಾವು ಚೀನಾದೊಂದಿಗೆ ಹೇಗೆ ಸ್ಪರ್ಧಿಸುತ್ತೇವೆ ಗೊತ್ತಾಯಿತಾ?. ಜನಸಂಖ್ಯೆ ನಿಯಂತ್ರಣ ಮಸೂದೆ ಇಂದಿನ ಅಗತ್ಯವಾಗಿದೆ. ವರದಿಗಳು ಹೇಳುವಂತೆ ಚೀನಾ 1978ರಲ್ಲಿ ಭಾರತಕ್ಕಿಂತ ಜಿಡಿಪಿ ಕಡಿಮೆ ಇತ್ತು. ಚೀನಾ ಒಂದು ಮಗು ನೀತಿಯನ್ನು ಅಳವಡಿಸಿಕೊಂಡಿದೆ. ಸುಮಾರು 60 ಕೋಟಿ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಅಭಿವೃದ್ಧಿಯನ್ನು ಸಾಧಿಸಿದೆ ಎಂದರು.

ಯಾರ ನಂಬಿಕೆ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಮಸೂದೆಯನ್ನು ಜಾರಿಗೊಳಿಸಬೇಕು. ಈ ಕಾನೂನನ್ನು ಅನುಸರಿಸದವರಿಗೆ ಯಾವುದೇ ಸರ್ಕಾರಿ ಸವಲತ್ತುಗಳನ್ನು ನೀಡಬಾರದು. ಅವರ ಮತದಾನದ ಹಕ್ಕನ್ನು ಸಹ ಹಿಂಪಡೆಯಬೇಕು ಎಂದು ಅವರು ಹೇಳಿದರು.

English summary
The central government has no animosity towards the Muslim community. But the fundamentalists are spreading hatred in the society, Union Minister Giriraj Singh said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X