ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಲಹ: 2 ಕಾರ್ಯಕರ್ತರು ಬಲಿ
ಬಸಂತಿ, ಜನವರಿ 19: ತೃಣಮೂಲಕ ಕಾಂಗ್ರೆಸ್ಸಿನ(ಟಿಎಂಸಿ) ಎರಡು ಬಣಗಳ ನಡುವೆ ನಡೆದ ಕಾದಾಟದಲ್ಲಿ ಇಬ್ಬರು ಟಿಎಂಸಿ ಕಾರ್ಯಕರ್ತರು ಮೃತರಾದ ಘಟನೆ ಪಶ್ಚಿಮ ಬಂಗಾಳದ ಬಸಂತಿ ಎಂಬ ಹಳ್ಳಿಯಲ್ಲಿ ನಡೆದಿದೆ.
ಮೃತರಲ್ಲಿ ಓರ್ವ 10 ವರ್ಷದ ಬಾಲಕನಾಗಿದ್ದು. ಇನ್ನೋರ್ವ 27 ವರ್ಷದ ಯುವಕ ಎಂಬ ಮಾಹಿತಿ ದೊರಕಿದೆ. ಗಲಭೆಯಲ್ಲಿ ಹಲವರಿಗೆ ಗಾಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಗಲಭೆ ನಡೆಯುತ್ತಿರುವ ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರ್ಣಕ್ಕೆ ತರುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಾಗಿದ್ದು, ಈ ಬಣಗಳ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ವಿಕೋಫಕ್ಕೆ ತಲುಪಿದ ಪರಿಣಾಮ ಈ ಘಟನೆ ನಡೆದಿದೆ.












Click it and Unblock the Notifications