ಮೊಹರಂ ನಂತರ ದುರ್ಗಾಪೂಜೆ: ಇದು ಮಮತಾ ಬ್ಯಾನರ್ಜಿ ಕೋಮುವಾದ
ಕಳೆದ ವರ್ಷದಂತೇ ಈ ಬಾರಿಯೂ ದುರ್ಗಾಪೂಜೆ ಮತ್ತು ವಿಸರ್ಜನೆಗೆ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರಕಾರದ ಹಲವು ನಿರ್ಬಂಧನೆ. ಮೊಹರಂ ಮುಗಿದ ನಂತರ ದುರ್ಗಾ ವಿಸರ್ಜನೆಗೆ ಅನುಮತಿ.
Recommended Video

ಅಕ್ಟೋಬರ್ ಒಂದರಂದು ಆಚರಿಸಲಾಗುವ ಮೊಹರಂ ಹಬ್ಬಕ್ಕಾಗಿ, ಇದೇ ಮಾಸಾಂತ್ಯದಲ್ಲಿ ಬರುವ ನವರಾತ್ರಿ ದುರ್ಗಾ ವಿಸರ್ಜನೆಗೆ ನಿರ್ಬಂಧ ಹೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು, ಯಾವರೀತಿಯ ಕೋಮು ಸೌಹಾರ್ದತೆ ಎಂದು ಪ್ರಶ್ನಿಸುವಂತಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಪಕ್ಷ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಧ್ಯಕ್ಷರಿಗೆ ಕೊಲ್ಕತ್ತಾದಲ್ಲಿನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಅನುಮತಿ ನಿರಾಕರಿಸಿ, ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ.
ಇದಕ್ಕೂ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೂ ಮಮತಾ ಸರಕಾರ ಅನುಮತಿ ನಿರಾಕರಿಸಿತ್ತು. ಮೋಹನ್ ಭಾಗವತ್, ಅಕ್ಟೋಬರ್ ಮೂರರಂದು ಕೊಲ್ಕತ್ತಾದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಾಗಿತ್ತು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ದಿನದಿಂದ ದಿನಕ್ಕೆ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯತೆಗೊಳ್ಳುತ್ತಿರುವುದನ್ನು ಸಹಿಸಿಕೊಳ್ಳಲಾಗದೇ, ಮಮತಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ಬಿಜೆಪಿ ನಾಯಕರ ಹೇಳಿಕೆ.
ಕಳೆದ ವರ್ಷದಂತೇ ಈ ಬಾರಿಯೂ ದುರ್ಗಾಪೂಜೆ ಮತ್ತು ವಿಸರ್ಜನೆಗೆ ಮಮತಾ ಬ್ಯಾನರ್ಜಿ ಹಲವು ನಿರ್ಬಂಧನೆಗಳನ್ನು ವಿಧಿಸಿದ್ದಾರೆ. ಮೊಹರಂ ಮುಗಿದ ನಂತರ ದುರ್ಗಾ ವಿಸರ್ಜನೆಗೆ ಅವಕಾಶ ನೀಡುವ ಮೂಲಕ, ಮತ್ತೆ ಮಮತಾ ಒಂದು ವರ್ಗದ ಓಲೈಕೆಗೆ ಮುಂದಾಗಿದ್ದಾರೆ. ಮುಂದೆ ಓದಿ..

ಸೆ 30, ಅ1ರಂದು ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಸರ್ಜನೆ
ಸೆ 30 ಮತ್ತು ಅಕ್ಟೋಬರ್ 1ರಂದು ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಸರ್ಜನೆ ನಡೆಯುತ್ತದೆ. ಆದರೆ ಅಕ್ಟೋಬರ್ ಒಂದರಂದು ಮೊಹರಂ ಹಬ್ಬ ಇರುವುದರಿಂದ ಆ ದಿನ ವಿಸರ್ಜಜನೆಗೆ ಅನುಮತಿ ಇಲ್ಲ, ಅಕ್ಟೋಬರ್ ಎರಡರ ನಂತರ ದುರ್ಗಾ ವಿಸರ್ಜನೆ ಮಾಡಬಹುದು ಎಂದು ಮಮತಾ ಸರಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಮಮತಾ ಮತ್ತು ಕೊಲ್ಕತ್ತಾ ಪೊಲೀಸರ ಟ್ವೀಟ್
ಈ ಸಂಬಂಧ ಮುಖ್ಯಮಂತ್ರಿ ಮಮತಾ ಮತ್ತು ಕೊಲ್ಕತ್ತಾ ಪೊಲೀಸರು ಟ್ವೀಟ್ ಮಾಡಿದ್ದು, ವಿಸರ್ಜನೆ ವೇಳಾಪಟ್ಟಿ ಸಂಬಂಧ ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಇಟ್ಟುಕೊಳ್ಳಬೇಡಿ ಎಂದು ಕೊಲ್ಕತ್ತಾ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮೋಹನ್ ಭಾಗವತ್ ಭಾಷಣ ಮಾಡುವುವರಿದ್ದರು
ಕೊಲ್ಕತ್ತಾದಲ್ಲಿರುವ ಸರಕಾರೀ ಒಡೆತನದ ಮಹಾಜಾತಿ ಸದನದಲ್ಲಿ ಸಿಸ್ಟರ್ ನಿವೇದಿತಾ ಮಿಷನ್ ಟ್ರಸ್ಟ್ ಅಕ್ಟೋಬರ್ ಮೂರರಂದು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಅದರಲ್ಲಿ ಮೋಹನ್ ಭಾಗವತ್ ಭಾಷಣ ಮಾಡುವುವರಿದ್ದರು. ಆದರೆ, ಆ ಕಾರ್ಯಕ್ರಮದ ಬುಕ್ಕಿಂಗ್ ಅನ್ನು ಸಂಘಟನೆ ನಿಲ್ಲಿಸಿತ್ತು, ಕಾರಣ ಸರಕಾರ ಅನುಮತಿ ನಿರಾಕರಿಸಿದ್ದು.

ಸೆಪ್ಟಂಬರ್ ಹತ್ತರಿಂದ ಹನ್ನೆರಡರವರೆಗೆ ಕಾರ್ಯಕ್ರಮ
ಸೆಪ್ಟಂಬರ್ ಹತ್ತರಿಂದ ಹನ್ನೆರಡರವರೆಗೆ ಸರಕಾರಿ ಸ್ವಾಮ್ಯದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ (ಕೊಲ್ಕತ್ತಾ) ಕಾರ್ಯಕ್ರಮ ನಡೆಸಲು ರಾಜ್ಯ ಬಿಜೆಪಿ ಘಟಕ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನ ಭಾಷಣಕಾರರಾಗಿದ್ದರು. ದುರ್ಗಾ ಪೂಜೆ ಮುಗಿಯುವ ತನಕ ಅನುಮತಿ ನೀಡಲಾಗುವುದಿಲ್ಲ ಎಂದು ಬಿಜೆಪಿಯ ಅರ್ಜಿಯನ್ನು ಮಮತಾ ತಿರಸ್ಕರಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತ್ಯಾಂತನ ಬಸು ಹೇಳಿದ್ದಾರೆ.
|
ಮಮತಾ ಬ್ಯಾನರ್ಜಿ ಸರಕಾರದ ನಿರ್ಧಾರ ವ್ಯಾಪಕ ಆಕ್ರೋಶ
ಮಮತಾ ಬ್ಯಾನರ್ಜಿ ಸರಕಾರದ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಮಮತಾ ಸರಕಾರ ಈ ಮಟ್ಟಕ್ಕೆ ಇಳಿದಿದ್ದು ವಿಷಾದನೀಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.












Click it and Unblock the Notifications