ಲಕ್ನೋದಲ್ಲಿ ಲಕ್ಷಾಂತರ ಜನಕ್ಕೆ ಮೋಡಿ ಮಾಡಿದ ಮೋದಿ

Posted By:
Subscribe to Oneindia Kannada

ಲಕ್ನೋ, ಜನವರಿ 02: 'ಉತ್ತರಪ್ರದೇಶದಲ್ಲಿನ 14 ವರ್ಷಗಳ ವನವಾಸ ಅಂತ್ಯವಾಗಲಿದೆ. ಉತ್ತರ ಪ್ರದೇಶ ಬದಲಾದರೆ, ಭಾರತ ಬೆಳಗುತ್ತದೆ' ಎಂದು ಪ್ರಧಾನಿ ಮೋದಿ ಅವರು ಸೋಮವಾರ(ಜನವರಿ 02) ದಂದು ಬೃಹತ್ ಸಮಾವೇಶದಲ್ಲಿ ಘೋಷಿಸಿದರು. ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಸರಿ ಸುಮಾರು 10 ಲಕ್ಷಕ್ಕೂ ಆಧಿಕ ಮಂದಿ ಪಾಲ್ಗೊಂಡಿದ್ದಾರೆ.

ಇದು ನನ್ನ ರಾಜಕೀಯ ಜೀವನದ ಅತಿ ದೊಡ್ಡ ಸಮಾವೇಶವಾಗಿದೆ. ಕಳೆದ 14 ವರ್ಷಗಳಿಂದ ಉತ್ತರಪ್ರದೇಶ ಅಭಿವೃದ್ಧಿ ಕಾಣದೆ ಬಳಲಿದೆ, ಅಭಿವೃದ್ಧಿಗೆ ರಾಜಕೀಯ ಅಡ್ಡಿ ಬರಬಾರದು, ಪ್ರತಿವರ್ಷ ಕೇಂದ್ರ ಸರ್ಕಾರದಿಂದ 1 ಲಕ್ಷ ಕೋಟಿ ರು ಅನುದಾನವನ್ನು ಉತ್ತರಪ್ರದೇಶಕ್ಕೆ ನೀಡಲಾಗುತ್ತಿದೆ. ಆದರೆ, ಅನುದಾನ ಬಳಕೆ ಮಾಡಿಕೊಳ್ಳದೆ ಬಡವರು, ರೈತರನ್ನು ಇಲ್ಲಿನ ಸರ್ಕಾರ ಪ್ರಚೋದಿಸುತ್ತಿದೆ ಎಂದು ಮೋದಿ ಆರೋಪಿಸಿದರು.

Watch : PM Narendra Modi's Mega Rally In Lucknow

ಮೋದಿ ಭಾಷಣದ ಮುಖ್ಯಾಂಶಗಳು:
* ಇದು ಅಟಲ್ ಬಿಹಾರಿ ವಾಜಪೇಯಿ ಅವರ ಕರ್ಮಭೂಮಿ, ಇಂದು ಈ ಬೃಹತ್ ಸಮಾವೇಶ ನೋಡಿ ಅವರಿಗೆ ನಿಜಕ್ಕೂ ಸಂತಸವಾಗಿರುತ್ತದೆ.
* ಉತ್ತರ ಪ್ರದೇಶದ ಜನತೆಯ ನಂಬಿಕೆ ಬದಲಾದರೆ, ದೇಶದ ಅಭಿವೃದ್ಧಿ ಸಾಧ್ಯ.
* ಜಾತಿ, ಮತ, ಪಂಥ ನೋಡಿ ಮತ ಹಾಕಬೇಡಿ, ಅಭಿವೃದ್ಧಿಯೊಂದೆ ಮಂತ್ರ, ಬದಲಾವಣೆಗಾಗಿ ಮತ ಹಾಕಿ.
* ಉತ್ತರ ಪ್ರದೇಶ ಬದಲಾದರೆ, ಭಾರತದಲ್ಲಿ ಬದಲಾವಣೆ ಸಾಧ್ಯ.
* ಉತ್ತರ ಪ್ರದೇಶದ ಸರ್ಕಾರವು ಜನ ಸಾಮಾನ್ಯರ ಹಕ್ಕುಗಳನ್ನು ದಮನ ಮಾಡಿಡೆ.
* ಇಂದಿನ ಈ ಜನ ಸಮೂಹವೇ ಮುಂದಿನ ಭವಿಷ್ಯಕ್ಕೆ ನಾಂದಿ ಹಾಡಲಿ.

* ಯುಪಿಯಲ್ಲಿನ ಗೂಂಡಾರಾಜ್ಯ ಕೊನೆಗೊಳ್ಳಲಿ, ಬಿಜೆಪಿ ಮೇಲೆ ನಂಬಿಕ್ ಇಡಿ, ಅಭಿವೃದ್ಧಿಯ ಕನಸು ಕಾಣಿ.
* ಭ್ರಷ್ಟಾಚಾರ ತೊಗಲಿಸಲು ಅಪನಗದೀಕರಣ ಯೋಜನೆ ಜಾರಿಗೊಳಿಸಲಾಗಿದೆ. ಜನಸಾಮಾನ್ಯರಿಗೆ ಇದರ ಉಪಯೋಗ ಮುಂದೆ ಸಿಗಲಿದೆ.
* BHIM ಅಪ್ಲಿಕೇಷನ್ ಮೂಲಕ ಜನತೆ ಸುಲಭವಾಗಿ ಇ ವ್ಯವಹಾರ ಆರಂಭಿಸಬಹುದು.
* ಭ್ರಷ್ಟಾಚಾರ ರಹಿತ ರಾಜ್ಯ ಬೇಕು ಎಂದಾದರೆ ನಮ್ಮೊಂದಿಗೆ ಕೈ ಜೋಡಿಸಿ..

2017ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಪರಿವರ್ತನಾ ಸಮಾವೇಶವು ಚುನಾವಣಾ ಪೂರ್ವ ಸಮಾವೇಶವಾಗಿ ಮಾರ್ಪಾಟ್ಟಿತ್ತು.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi addresses a mega rally today in Uttar Pradesh capital Lucknow.
Please Wait while comments are loading...