ವಕ್ಫ್ ತಿದ್ದುಪಡಿ ಮಸೂದೆ ವಿವರಣೆ: ಸರ್ಕಾರಕ್ಕೆ ಲಕ್ಷಾಂತರ ಇ-ಮೇಲ್‌, ಕೂಲಂಕುಷ ಪರಿಶೀಲನೆ ಸಮಯ

ಭಾರತದಲ್ಲಿ ವಕ್ಫ್ ಎಂಬ ಪರಿಕಲ್ಪನೆ ಬಹಳ ಸಂಕೀರ್ಣವಾದ ವಿಷಯ, ಇದು ಆಗಾಗ ವೆಬ್‌ ಮತ್ತು ಕಾನೂನು ಹೋರಾಟದಲ್ಲಿ ಗೊಂದಲ ಮತ್ತು ವಿವಾದಕ್ಕೆ ಕಾರಣವಾಗುತ್ತದೆ. ಮೋದಿ ಸರ್ಕಾರ ಸುಧಾರಣೆಗೆ ಪ್ರಯತ್ನ ಮಾಡುತ್ತಿದ್ದಂತೆಯೇ, ವಕ್ಫ್ ಸುತ್ತಮುತ್ತಲಿನ ಚರ್ಚೆಗಳು ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡಿವೆ. ವಕ್ಫ್ ಸಂಸ್ಥೆ ಭಾರತದಲ್ಲಿ ಇಸ್ಲಾಂ ಕಾನೂನುಗಳ ಜೊತೆ ಆಳವಾಗಿ ಬೇರೂರಿದೆ, ಇವು ಕೇವಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿಗಳ ಮೇಲೆ ಮಾತ್ರ ಪ್ರಭಾವ ಬೀರಿಲ್ಲ, ಭಾರತದಲ್ಲಿ ಇದು ಭೂ ಮಾಲೀಕತ್ವದ ವಿಚಾರದಲ್ಲಿ ಸರ್ಕಾರದ ಜೊತೆ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ.

ದೇಶ ಮೋದಿ 3.0 ನೇತೃತ್ವದಲ್ಲಿ ಮುನ್ನಡೆಯುತ್ತಿದೆ, ಬಿಜೆಪಿ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾಪ ಮಾಡಿತು, ಇದು ಚರ್ಚೆಗೆ ಕಾರಣವಾಯಿತು, ವಕ್ಫ್ ಆಸ್ತಿಯ ದುರ್ಬಳಕೆ ಕುರಿತು ಪ್ರಶ್ನೆಗಳನ್ನು ಸಹ ಎತ್ತಿತು. ವಕ್ಫ್ ಎಂದರೇನು, ಹೇಗೆ ಇದನ್ನು ದುರುಪಯೋಗ ಮಾಡಲಾಗುತ್ತಿದೆ, ಬಿಜೆಪಿ ತರುವ ಸುಧಾರಣೆಗಳು ವಕ್ಫ್ ಪರಿಕಲ್ಪನೆಯನ್ನು ಹೇಗೆ ಪುನರ್ ರೂಪಿಸಲಿದೆ ಎಂದು ಎಂಬುದನ್ನು ಪರಿಶೀಲಿಸೋಣ.

Waqf Amendment Bill Explained Why Lakhs Are Writing Mails To The Govt Time Nigh For An Overhaul

ವಕ್ಫ್ ಎಂದರೇನು?

ವಕ್ಫ್ ಎಂದರೆ ಇಸ್ಲಾಂ ಧಾರ್ಮಿಕ ದತ್ತಿ ಉದ್ದೇಶಗಳಿಗಾಗಿ ಆಸ್ತಿ ದಾನ ಮಾಡುವ ನಿಧಿ. ಒಮ್ಮೆ ಆಸ್ತಿ ವಕ್ಫ್‌ಗೆ ಸೇರಿದ್ದು ಎಂದು ಗೊತ್ತುಪಡಿಸಿದ ಬಳಿಕ ಅದನ್ನು ವರ್ಗಾವಣೆ, ಮಾರಾಟ ಮಾಡುವಂತಿಲ್ಲ, ಅದು ಶಾಶ್ವತವಾಗಿ ದತ್ತಿಯಾಗಿಯೇ ಉಳಿಯಲಿದೆ. ಈ ಉದತ್ತಾವಾದ ಸಿದ್ಧಾಂತ ಮತ್ತು ಅಭ್ಯಾಸಗಳು ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ, ವಿಸ್ತಾರವಾದ ಭೂಮಿಯ ಕಾನೂನು ಹಿಡಿತ, ದುರ್ಬಳಕೆ ಕಾರಣಕ್ಕೆ ವ್ಯಾಪಕ ಆರೋಪಗಳಿಗೆ ಕಾರಣವಾಗಿದೆ.

Waqf Amendment Bill Explained Why Lakhs Are Writing Mails To The Govt Time Nigh For An Overhaul

ಸಾವಿರಾರು ಆಸ್ತಿಯ ಹಕ್ಕನ್ನು ವಕ್ಫ್ ಹೇಗೆ ಪಡೆಯುತ್ತದೆ?

ವಕ್ಫ್ ವಿರುದ್ಧದ ಮೊದಲ ವಿವಾದ ಎಂದರೆ ವಿಸ್ತಾರವಾದ ಆಸ್ತಿ ತನ್ನ ಹಕ್ಕು ಎಂದು ಅದು ಪ್ರತಿಪಾದಿಸುತ್ತದೆ ಎಂಬುದು. ಭಾರತದಾದ್ಯಂತ ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿಯಿಂದ ನಗರದ ರಿಯಲ್ ಎಸ್ಟೇಟ್‌ ತನಕ ಹಲವು ಆಸ್ತಿಗಳು ಸರಿಯಾದ ದಾಖಲೆ ಮತ್ತು ಪರಿಶೀಲನೆ ಇಲ್ಲದೆಯೇ ವಕ್ಫ್ ಎಂದು ನೋಂದಣಿಯಾಗಿವೆ. ಕೆಲವು ಆಸ್ತಿಗಳ ಮಾಲೀಕರಿಗೆ ಈ ಕುರಿತು ಮಾಹಿತಿಯಾಗಲಿ, ಜ್ಞಾನವಾಗಲಿ ಇಲ್ಲ, ಇವು ಆಸ್ತಿ ಮಾಲೀಕತ್ವದ ಕುರಿತು ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ಈ ವ್ಯಾಪ್ತಿ ವಿಸ್ತರವಾಗುತ್ತವೇ ಇದೆ, ಇದು ಇಸ್ಲಾಮಿಕ್ ಸಂಸ್ಥೆಗಳು ಭೂ ಕಬಳಿಕೆ ಮಾಡುವ ಕಾಳಜಿಯ ಪ್ರಶ್ನೆಯನ್ನು ಸಹ ಎತ್ತಿವೆ.

ವಾಣಿಜ್ಯ ಉದ್ದೇಶಕ್ಕೆ ವಕ್ಫ್ ಭೂಮಿಯ ಬಳಕೆ ಹೇಗೆ?

ಮುಖ್ಯವಾದ ಅಂಶ ಅಡಗಿರುವುದು ವಾಣಿಜ್ಯ ಉದ್ದೇಶಕ್ಕೆ ವಕ್ಫ್ ಭೂಮಿಯನ್ನು ಬಳಕೆ ಮಾಡುತ್ತಿರುವ ವಿಚಾರದಲ್ಲಿ. ದತ್ತಿ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕಾದ ವಕ್ಫ್ ಆಸ್ತಿಗಳನ್ನು ಲಾಭದ ಉದ್ದೇಶದ ಚಟುವಟಿಕೆಗಳಿಗೆ ಬಳಕೆ ಮಾಡುವಂತೆ ಮರು ಉದ್ದೇಶಿಸಲಾಗಿದೆ. ಹಲವು ಪ್ರಕರಣಗಳಲ್ಲಿ ವಕ್ಫ್ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ಗುತ್ತಿಗೆ ನೀಡಲಾಗಿದೆ, ಇದು ಧಾರ್ಮಿಕ ಉದ್ದೇಶ ಹೊರತುಪಡಿಸಿ ಆದಾಯ ವೃದ್ಧಿಗೆ ಕಾರಣವಾಗಿದೆ. ವಕ್ಫ್ ಭೂಮಿಯ ವಾಣಿಜ್ಯ ಬಳಕೆ ಆಕ್ರೋಶಕ್ಕೆ ಕಾರಣವಾಗಿದೆ, ಅದರಲ್ಲೂ ಹಿಂದೂ ಸಂಘಟನೆಗಳು ಇಂತಹ ಅಭ್ಯಾಸಗಳು ದಾನಕಾರ್ಯದ ಮೂಲಭೂತ ತತ್ವವನ್ನು ಹಾಳು ಮಾಡುತ್ತಿವೆ. ಧಾರ್ಮಿಕತೆಯ ನೆಪದಲ್ಲಿ ಸಂಪತ್ತಿನ ಸಂಗ್ರಹ ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದ್ದಾರೆ.

Waqf Amendment Bill Explained Why Lakhs Are Writing Mails To The Govt Time Nigh For An Overhaul

ವಕ್ಫ್ ತಿದ್ದುಪಡಿ ಮಸೂದೆ: ಸುಧಾರಣೆಗೆ ಮುಂದಾದ ಬಿಜೆಪಿಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯ ಪ್ರಸ್ತಾವನೆ ಮಾಡಿ ಎದ್ದಿರುವ ಆರೋಪಗಳನ್ನು ಬಗೆಹರಿಸಲು ಮುಂದಾಗಿದೆ. ವಕ್ಫ್ ತಿದ್ದುಪಡಿ ಮಸೂದೆ ಕಠಿಣ ನಿಯಮಗಳು, ಪಾರದರ್ಶಕತೆ ವೃದ್ಧಿ ಮತ್ತು ವಕ್ಫ್ ಆಸ್ತಿಗಳ ದುರುಪಯೋಗವನ್ನು ರಕ್ಷಿಸುತ್ತದೆ. ಇದು ವಕ್ಫ್ ಭೂಮಿಗಳ ರಕ್ಷಣೆ ವಿಚಾರದಲ್ಲಿ ದೃಢವಾದ ಚೌಕಟ್ಟು ನಿರ್ಮಾಣ ಮಾಡುವ ಗುರಿಯನ್ನು, ಮೂಲ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುವುದನ್ನು ಖಚಿತಪಡಿಸುತ್ತದೆ. ಸುಧಾರಣೆಯ ಪ್ರಸ್ತಾವನೆ ಹಲವು ಇಸ್ಲಾಮಿಕ್ ಸಂಘಟನೆಗಳಿಂದ ವಿರೋಧಕ್ಕೆ ಕಾರಣವಾಗಿದೆ, ಅವರು ಇದು ನಮ್ಮ ಧಾರ್ಮಿಕ ಹಕ್ಕಿನ ಮೇಲಿನ ದಾಳಿ ಎಂದು ವಾದಿಸುತ್ತಿದ್ದಾರೆ. ಆದರೆ ಮಸೂದೆ ಬೆಂಬಲಿಸುವವರು ವಕ್ಫ್ ಅನ್ನು ವೈಯಕ್ತಿಕ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವ ಅಧಿಕಾರ ಮೊಟಕುಗೊಳ್ಳಲು ಇದು ಅಗತ್ಯ ಎಂದು ಹೇಳಿದ್ದಾರೆ.

2024ರ ತಿದ್ದುಪಡಿ ಬಳಿ ಏನು ಬದಲಾವಣೆಯಾಗಲಿದೆ?

ಪ್ರಸ್ತಾವಿತ ಮಸೂದೆ ಅಂಗೀಕಾರಗೊಂಡರೆ ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆ ವಿಚಾರದಲ್ಲಿ ಗಮನಾರ್ಹವಾದ ಬದಲಾವಣೆಯಾಗಲಿದೆ. ಇದರಲ್ಲಿ ಪ್ರಮುಖ ಬದಲಾವಣೆ ವಕ್ಫ್ ಹಕ್ಕುಗಳ ಘೋಷಣೆಗೂ ಮೊದಲು ಪರಿಶೀಲನೆ ನಡೆಯಬೇಕಿದೆ, ನ್ಯಾಯಸಮ್ಮತವಾದ ಆಸ್ತಿ ಮಾತ್ರ ವಕ್ಫ್ ಅಡಿ ನೋಂದಣಿಯಾಗುವುದನ್ನು ಖಚಿತಪಡಿಸಲಾಗುತ್ತದೆ. ಮಸೂದೆ ವಕ್ಫ್ ಭೂಮಿಯ ವಾಣಿಜ್ಯ ಉದ್ದೇಶವನ್ನು ಕಠಿಣವಾಗಿ ನಿಯಂತ್ರಿಸುತ್ತದೆ, ಆದಾಯ ತರುವ ಮಾರ್ಗದಲ್ಲಿ ಆಸ್ತಿಯನ್ನು ಗುತ್ತಿಗೆ ನೀಡದಂತೆ ತಡೆಯುತ್ತದೆ. ಹೆಚ್ಚುವರಿಯಾಗಿ ಮೋದಿ ಸರ್ಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವಕ್ಫ್ ಬೋರ್ಡ್‌ನಲ್ಲಿ ಪಾರದರ್ಶಕತೆಯನ್ನು ತರಲು ತೀವ್ರವಾದ ಪ್ರಯತ್ನ ನಡೆಸಿದೆ. ತಿದ್ದುಪಡಿ ಮಸೂದೆ ಸಮುದಾಯದ ಧಾರ್ಮಿಕ ಹಕ್ಕನ್ನು ನ್ಯಾಯಸಮ್ಮತ, ಹೊಣೆಗಾರಿಕೆ ಅಡಿಯಲ್ಲಿ ಸಮತೋಲನ ಮಾಡಲು ಮುಂದಾಗಿದೆ.

ಕಾಂಗ್ರೆಸ್ ಮತ್ತು ಪ್ರಮುಖ ಆಸ್ತಿ ವಕ್ಫ್ ಗೆ ಪರಿವರ್ತನೆ

ಕಾಂಗ್ರೆಸ್ ಪಕ್ಷದ ಟೀಕಾಕಾರರು ವಿಭಜನೆಯ ಸಮಯದಲ್ಲಿ ಸ್ಥಳಾಂತರಗೊಂಡವರು ಬಿಟ್ಟುಹೋದ ಪ್ರಮುಖ ಆಸ್ತಿಗಳನ್ನು ವಕ್ಫ್ ಗೆ ಪರಿವರ್ತಿಸುವಲ್ಲಿ ಅದರ ಪಾತ್ರವಿದೆ ಎಂದು ಹೇಳುತ್ತಾರೆ. ಈ ನಡೆ ಮೂಲಕ ರಾಜಕೀಯ ಲಾಭಕ್ಕಾಗಿ ಅಲ್ಪ ಸಂಖ್ಯಾತ ಸಮಯದಾಯವನ್ನು ಓಲೈಸಿ ಬಹು ಸಂಖ್ಯಾತರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪವೂ ಇದೆ. ಭೂ ಪರಿವರ್ತನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಐತಿಹಾಸಿಕ ನೀತಿಗಳು, ಮತ ಬ್ಯಾಂಕ್‌ಗಾಗಿ ಮಾಡಿರುವ ಕಾರ್ಯಗಳು ಸುಧಾರಣೆಗಾಗಿ ಬೇಡಿಕೆ ಇಡುವಂತೆ ಮಾಡಿದೆ.

ವಕ್ಫ್ ನಲ್ಲಿ ಮಹಿಳೆ, ಬೋಹ್ರಾ ಅಥವ ಆಗಾ ಖಾನಿಗಳಿಲ್ಲ

ವಕ್ಫ್ ನಲ್ಲಿನ ಮತ್ತೊಂದು ವಿವಾದ ಎಂದರೆ ಆಸ್ತಿಯ ಆಡಳಿತ ನಿರ್ವಹಣೆ ನೋಡಿಕೊಳ್ಳುವಲ್ಲಿ ಮಹಿಳೆ, ಬೋಗ್ರಾ ಅಥವ ಆಗಾ ಖಾನಿಗಳನ್ನು ಹೊರಗಿಡುವುದು. ತೀರ್ಮಾನ ತೆಗೆದುಕೊಳ್ಳುವ ಹಂತದಲ್ಲಿ ಇವರು ಪಾಲ್ಗೊಳ್ಳುವಂತಿಲ್ಲ. ಜನರ ಒಳಿತಿಗಾಗಿ ಸೇವೆ ಮಾಡುವ ಸಂಸ್ಥೆಯಲ್ಲಿ ಪಾಲ್ಗೊಳ್ಳುವಿಕೆ ಮತ್ತು ನ್ಯಾಯಸಮ್ಮತೆಯನ್ನು ಪ್ರಶ್ನೆ ಮಾಡುವಂತೆ ಇದು ಮಾಡಿದೆ. ಈ ಪ್ರಮುಖ ಅಂಶಗಳಲ್ಲಿನ ಪ್ರಾತಿನಿಧ್ಯ ಮುಸ್ಲಿಂ ಸಮುದಾಯದಲ್ಲಿಯೇ ಪ್ರಸ್ತುತ ವ್ಯವಸ್ಥೆಯ ನ್ಯೂನ್ಯತೆಯನ್ನು ಎತ್ತಿಹಿಡಿದಿದೆ ಮತ್ತು ಸಮಗ್ರವಾಗಿ ನ್ಯಾಯ ಸಮ್ಮತ ಪರಿವರ್ತನೆಗೆ ಬೇಕು ಎಂದು ಹೇಳಿದೆ.

ವಿಶೇಷ ಉಲ್ಲೇಖ: ಸರ್ಕಾರಕ್ಕೆ ಇ-ಮೇಲ್‌ಗಳು ಹೆಚ್ಚಳ

ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆ ದೇಶಾದ್ಯಂತ ಹಿಂದೂ ಸಂಘಟನೆಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ವಕ್ಫ್ ನಿರ್ವಹಣೆಯಲ್ಲಿ ಹೊಣೆಗಾರಿಕೆ ಮತ್ತು ಪಾರರ್ಶಕತೆ ಬೇಕು ಎಂದು ಬೇಡಿಕೆ ಹೆಚ್ಚಾಗುವಂತೆ ಮಾಡಬೇಕು ಎಂದು ಇ-ಮೇಲ್‌ಗಳು ಬರುತ್ತಿವೆ. ವಕ್ಫ್ ಭೂಮಿಯ ದುರುಪಯೋಗದ ಕುರಿತು ಹಿಂದೂ ಸಂಘಟನೆಗಳು ಧ್ವನಿ ಎತ್ತಿದ್ದು, ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿವೆ. ಇದುವರೆಗೂ ಸರ್ಕಾರಕ್ಕೆ ಸಾವಿರಾರು ಇ-ಮೇಲ್‌ಗಳು ತಿದ್ದುಪಡಿ ಮಸೂದೆಗೆ ಬೆಂಬಲವನ್ನು ನೀಡಿ ಬಂದಿವೆ.

ಅಂತಿಮ ಷರಾ

ಭಾರತದಲ್ಲಿ ಕಾನೂನಿನ ಹೊರತಾಗಿಯೂ ವಕ್ಫ್ ಎಂಬುದು ಚರ್ಚೆಯ ವಿಷಯವಾಗಿದೆ. ಇದು ದೇಶದ ರಾಜಕೀಯ ಮತ್ತು ಧಾರ್ಮಿಕತೆಯ ವಿಶಾಲವಾದ ಪ್ರತಿಬಿಂಬವಾಗಿದೆ. ಮೋದಿ ಸರ್ಕಾರದ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆ ಸಂಸ್ಥೆಗಳ ದುರುಪಯೋಗ, ಪಾರದರ್ಶಕತೆ ಖಚಿತ ಪಡಿಸುವುದು ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದರಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಮಸೂದೆಗೆ ವಿಪಕ್ಷಗಳ ವಿರೋಧದ ನಡುವೆಯೂ ಸುಧಾರಣೆಯನ್ನು ನಿರಾಕರಿಸಲಾಗದು. ಪಾರದರ್ಶಕ ಆಡಳಿತದ ವಿಚಾರದಲ್ಲಿ ಬಿಜೆಪಿಯ ಬದ್ಧತೆ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಖಂಡತೆಯನ್ನು ರಕ್ಷಿಣೆ, ಎಲ್ಲಾ ಸಮುದಾಯಗಳಿಗೆ ನ್ಯಾಯವನ್ನು ಉತ್ತೇಜಿಸುವ ಸುಧಾರಣೆಗಳಯ ಎಲ್ಲರಿಂದಲೂ ಸ್ವಾಗತಿಸಲ್ಪಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+