ಹಿಂದು ನಾಯಕರ ಹತ್ಯೆಗೆ ಸಂಚು, ಐವರನ್ನು ಬಂಧಿಸಿದ ಪೊಲೀಸರು
ಕೊಯಮತ್ತೂರು, ಸೆಪ್ಟೆಂಬರ್ 03: ತಮಿಳುನಾಡಿನ ಹಿಂದು ಮುಖಂಡರನ್ನು ಕೊಲ್ಲಲು ಸಂಚು ರೂಪಿಸಿದ್ದ ಐವರನ್ನು ಬಂಧಿಸಲಾಗಿದೆ.
ಕೊಯಮತ್ತೂರಿನ ವಿಶೇಷ ತನಿಖಾ ತಂಡ (ಎಸ್ ಐ ಟಿ) ದ ಸದಸ್ಯರು ಕಾರ್ಯಾಚರಣೆ ನಡೆಸಿ, ಸಂಚು ರೂಪಿಸಿ, ಹತ್ಯೆಗೈಯಲು ಬಂದಿದ್ದ ಐವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಹಿಂದು ಮಕ್ಕಳ್ ಕಚ್ಚಿಯ ಅರ್ಜುನ್ ಸಂಪತ್ ಹಾಗೂ ಹಿಂದೂ ಮುನ್ನನಿಯ ಮೂಕಾಂಬಿಕೈ ಮಣಿ ಅವರನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕೊಯಮತ್ತೂರಿನಲ್ಲಿ ನಡೆಯುತ್ತಿದ್ದ ಮದುವೆಗೆಂದು ನಾಲ್ವರಿದ್ದ ತಂಡವು ಚೆನ್ನೈನಿಂದ ಕೊಯಮತ್ತೂರಿಗೆ ಬಂದಿಳಿದಿದೆ. ಇವರನ್ನು ಕರೆದೊಯ್ಯಲು ಬಂದಿದ್ದ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬರುತ್ತಾನೆ. ಅಲ್ಲಿಂದ ಮುಂದಕ್ಕೆ ಸಾಗುವ ಯತ್ನದಲ್ಲಿದ್ದಾಗ ವಿಶೇಷ ತನಿಖಾ ತಂಡವು ಈ ಸಂಚುಕೋರರನ್ನು ತಮ್ಮ ವಶಕ್ಕೆ ಪಡೆಯುತ್ತದೆ.

ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಮತ್ತು ಹತ್ಯೆ ಪಿತೂರಿ ಕಾಯಿದೆ ಅಡಿಯಲ್ಲಿ ಐವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹತ್ಯೆಗೆ ಸಂಚು ರೂಪಿತವಾಗಿದ್ದ ನಾಯಕರಿಗೆ ಈಗಾಗಲೇ ಬಿಗಿ ಭದ್ರತೆ ಒದಗಿಸಲಾಗಿದೆ.
ಇದೊಂದು ದೊಡ್ಡ ಮಟ್ಟದ ಸಂಚಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.












Click it and Unblock the Notifications