ಹೊಸ ಭಾಷೆ ಕಲಿಯಲು ಬಿಯರ್ ಹೆಲ್ಪ್; ಚಿಪ್ಸ್ ಆಣೆಗೂ ಇದು ಅಧ್ಯಯನ ವರದಿ

Posted By:
Subscribe to Oneindia Kannada

ವಿದೇಶಿ ಭಾಷೆ ಕಲಿಯಲು ಒದ್ದಾಡ್ತಿದೀರಾ? ಪಿಂಟ್ ಗಿಂತ ಸ್ವಲ್ಪ ಕಡಿಮೆ ಬಿಯರ್ ಕುಡಿದರೆ ಹೊಸ ಭಾಷೆ ಕಲಿಯಲು ಬಹಳ ಅನುಕೂಲವಾಗುತ್ತದೆ ಎಂದು ಒಂದು ಅಧ್ಯಯನದ ಮೂಲಕ ಗೊತ್ತಾಗಿದೆ.

ಬಿಯರ್ ಆರೋಗ್ಯಕರ ಪೇಯವಂತೆ, 13 ಲಾಭಗಳಿವೆಯಂತೆ!

ಸಂಶೋಧಕರ ಪ್ರಕಾರ, ಆಲ್ಕೋಹಾಲ್ ನಿಂದ ಮೆದುಳು ಬಹಳ ಚೆನ್ನಾಗಿ ಕೆಲಸ ಮಾಡುತ್ತದಂತೆ. ನೆನಪಿನ ಶಕ್ತಿಯು ಹೆಚ್ಚಾಗುತ್ತದೆ. ಮತ್ತೊಂದು ಭಾಷೆ ಕಲಿಯುವಾಗ ಆಲ್ಕೋಹಾಲ್ ನಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದಂತೆ. ಸಾಮಾಜಿಕ ಆತಂಕ ಕಡಿಮೆ ಆಗುತ್ತದೆ. ಇವೆರಡರಿಂದ ಮತ್ತೊಬ್ಬರ ಜತೆಗೆ ಸಂವಹನ ನಡೆಸುವ ಸಾಮರ್ಥ್ಯ ಹೆಚ್ಚಾಗಿ, ಹೊಸ ಭಾಷೆ ಬೇಗ ಕಲಿಯಬಹುದಂತೆ.

Want to master a foreign language? Alcohol may be helpful, says study

ಆಲ್ಕೋಹಾಲ್ ಸೇವನೆಯಿಂದ ವಿದೇಶಿ ಭಾಷೆಗಳ ಉಚ್ಚಾರಣೆಗೆ ಅನುಕೂಲವಾಗುತ್ತದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆಯಂತೆ. "ಅಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದರೆ ಹೊಸ ಭಾಷೆ ಕಲಿತು, ಮಾತನಾಡುವ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವವರ ನಂಬಿಕೆಯೂ ಅದೇ. ತಮ್ಮ ಭಾಷಾ ಕಲಿಕೆ ಸಾಮರ್ಥ್ಯವನ್ನು ಆಲ್ಕೋಹಾಲ್ ಹೆಚ್ಚು ಮಾಡಿತು ಎಂಬುದು ಬಲವಾಗಿ ನಂಬುತ್ತಾರೆ.

ಡ್ರಿಂಕ್ & ಡ್ರೈವ್, ಯಾವಾಗ ಹಿಡಿತೀರಿ ಮದ್ಲ ಹೇಳಿಬಿಡ್ರಿ!

ಅಧ್ಯಯನದ ದೃಷ್ಟಿಯಿಂದ ತಂಡವು ಅಲ್ಪ ಪ್ರಮಾಣದ ಆಲ್ಕೋಹಾಲ್ ನ ಪ್ರಯೋಗ ಮಾಡಿದೆ. ಎಪ್ಪತ್ತು ಕೇಜಿ ತೂಕದ ಪುರುಷರಿಗೆ ಪಿಂಟ್ ಗಿಂತ ಸ್ವಲ್ಪ ಕಡಿಮೆ (ನಾನೂರ ಅರವತ್ತು ಮಿ.ಲೀ) ಐದು ಪರ್ಸೆಂಟ್ ಬಿಯರ್ ನೀಡಿದ್ದಾರೆ. ಡಚ್ ಭಾಷೆ ಕಲಿಯುವ ಅವರ ಶಕ್ತಿಯನ್ನು ಪರೀಕ್ಷಿಸಲಾಗಿದೆ.

ಯಾರು ಆಲ್ಕೋಹಾಲ್ ಸೇವಿಸಿದ್ದರೋ ಅವರ ಗಮನ, ಅದರಲ್ಲೂ ಉಚ್ಚಾರಣೆಯು ಆಲ್ಕೋಹಾಲ್ ಸೇವಿಸಿದ ಇತರರಿಗಿಂತ ಚೆನ್ನಾಗಿತ್ತು ಎಂಬುದು ಸಂಶೋಧನೆಯಲ್ಲಿ ಗೊತ್ತಾಗಿದೆ. ಇದಕ್ಕೆ ಆಲ್ಕೋಹಾಲ್ ನಲ್ಲಿ ಇರುವ ಆತಂಕ ನಿವಾರಣೆ ಗುಣ ಕಾರಣ ಎಂದು ಕೂಡ ನಂಬಲಾಗಿದೆ.

ಆದರೆ, ಒಟ್ಟಾರೆಯಾಗಿ ಇದರ ಪರಿಣಾಮ ಗೊತ್ತಾಗುವವರೆಗೆ ಎಚ್ಚರವಾಗಿರಬೇಕು. ಇನ್ನೂ ಹೆಚ್ಚಿನ ಅಧ್ಯಯನದಿಂದ ಇದರಿಂದ ಆಗುವ ಪರಿಣಾಮಗಳನ್ನು ತಿಳಿಯಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Struggling to gain efficiency in foreign language? According to a study, drinking a pint of beer may help you learn the new tongue much better. Researchers said it was well known that alcohol impairs cognitive, motor functions as well as executive mental functions, which include the ability to remember, pay attention and inhibit inappropriate behaviors.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ