ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲಿ ಜೈನ್‌ಗೆ ವಿವಿಐಪಿ ಸೌಲಭ್ಯ: ಬಿಜೆಪಿಯಿಂದ ಹೊಸ ಸಿಸಿಟಿವಿ ಕ್ಲಿಪ್‌ ಬಿಡುಗಡೆ

|
Google Oneindia Kannada News

ದೆಹಲಿ ನವೆಂಬರ್ 26: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‌ಗೆ ಹೊಸ ತೊಂದರೆ ಉಂಟಾಗಬಹುದು. ಏಕೆಂದರೆ ಅವರ ಜೈಲಿನ ಸೆಲ್‌ನ ಮತ್ತೊಂದು ಸಿಸಿಟಿವಿ ವಿಡಿಯೊ ಅವರು ಅತಿಥಿಗಳಿಗೆ ಆತಿಥ್ಯ ನೀಡುತ್ತಿರುವುದನ್ನು ತೋರಿಸುತ್ತದೆ. ಜೊತೆಗೆ ಈಗ ಅಮಾನತುಗೊಂಡಿರುವ ತಿಹಾರ್ ಜೈಲು ಅಧೀಕ್ಷಕರ ಭೇಟಿಯನ್ನು ಸಹ ಇದು ಒಳಗೊಂಡಿದೆ.

ಚುನಾವಣೆಯಲ್ಲಿ ಬಿಜೆಪಿ ತನ್ನ ನಾಯಕರನ್ನು ಕೆಣಕಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಬಿಡುಗಡೆ ಮಾಡಿದ ವಿಡಿಯೋಗಳು ಕಂಟಕವಾಗುವ ಸಾಧ್ಯತೆ ಇದೆ.

ಎಎಪಿಗೆ ಬಿಜೆಪಿ ವಿಡಿಯೋ ಸವಾಲ್

ಸುಮಾರು 10 ನಿಮಿಷಗಳ ಅವಧಿಯ ಈ ವಿಡಿಯೊ ಕ್ಲಿಪ್ ಸೆಪ್ಟೆಂಬರ್ 12 ರಂದು ರಾತ್ರಿ 8 ಗಂಟೆಯ ಸುಮಾರಿನದ್ದಾಗಿದೆ ಎಂದು ಹೇಳಲಾಗಿದೆ. ಜೈನ್ ಅವರನ್ನು ಮೂರು ಜನರು ಭೇಟಿ ಮಾಡಿರುವುದು ವಿಡಿಯೋದಲ್ಲಿದೆ. ಈ ವೇಳೆ ಅವರು ತಮ್ಮ ಹಾಸಿಗೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾ ಮಾತನಾಡುತ್ತಿರುವುದು ಕಂಡುಬಂದಿದೆ. ಜೈಲು ಸಂಖ್ಯೆ ಏಳರ ಅಧೀಕ್ಷಕರಾದ ಅಜಿತ್ ಕುಮಾರ್ ಅವರು ಒಳಗೆ ನಡೆಯುತ್ತಿದ್ದಂತೆ ಉಳಿದವರು ಹೊರನಡೆಯುವುದು ವಿಡಿಯೋದಲ್ಲಿ ಕಾಣಬಹುದು.

ಸತ್ಯೇಂದ್ರ ಜೈನ್ ಈ ಹಿಂದೆ ತನ್ನ ಸೆಲ್‌ನೊಳಗೆ ವ್ಯಕ್ತಿಯೊಬ್ಬನಿಂದ ಮಸಾಜ್ ಮಾಡಿಸಿಕೊಳ್ಳುವುದನ್ನು ಮತ್ತು ಇತರ ಕೈದಿಗಳೊಂದಿಗೆ ಮಾತನಾಡುವುದನ್ನು ನೋಡಲಾಗಿತ್ತು. ಜೈಲಿನೊಳಗೆ ಯಾವುದಕ್ಕೂ ಅವಕಾಶವಿಲ್ಲ. ಅದರೂ ಫ್ರೂಟ್ ಸಲಾಡ್ ತಿನ್ನುವುದನ್ನು ಸಹ ಇಲ್ಲಿ ಕಾಣಬಹುದು. ಜೈಲಿನಲ್ಲಿ ಆಹಾರದ ಗುಣಮಟ್ಟದ ಬಗ್ಗೆ ತಮ್ಮ ದೂರನ್ನು ಜೈನ್ ನೀಡಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಗಿಮಿಕಾ?

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಗಿಮಿಕಾ?

ಜೈನ್ ಅವರಿಗೆ ಮಸಾಜ್ ಮಾಡುವ ವಿಡಿಯೋ ಹಂಚಿಕೊಂಡಾಗ ಅದನ್ನು ಎಎಪಿ ಸಮರ್ಥಿಸಿಕೊಂಡಿತ್ತು. ಜೈನ್ ಅವರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ಬಳಿಕ ಅವರ ವೈದ್ಯರು ಅವರಿಗೆ ಫಿಸಿಯೋಥೆರಪಿ ಶಿಫಾರಸು ಮಾಡಿದ್ದರು ಎಂದು ಹೇಳಿಕೊಳ್ಳಲಾಗಿತ್ತು.

ಮುಂದಿನ ತಿಂಗಳು ನಡೆಯಲಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಈ ವಿಡಿಯೋಗಳು ಬಿಜೆಪಿ ಮತ್ತು ಎಎಪಿ ನಡುವೆ ಫ್ಲ್ಯಾಶ್ ಪಾಯಿಂಟ್ ಆಗಿದ್ದು, 'ವಿಶೇಷ ಚಿಕಿತ್ಸೆ'ಯ ಕಾರಣಕ್ಕಾಗಿ ಜೈನ್ ಅವರನ್ನು ತಿಹಾರ್ ಜೈಲಿನಿಂದ ಸ್ಥಳಾಂತರಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಭ್ರಷ್ಟಾಚಾರ ಮತ್ತು 'ವಿಐಪಿ ಟ್ರೀಟ್‌ಮೆಂಟ್' ವಿರುದ್ಧ ದನಿಗೂಡಿಸಿರುವ ಎಎಪಿ ವಾಸ್ತವವಾಗಿ ಅದನ್ನೇ ಮಾಡುತ್ತಿದೆ ಎಂಬ ಆರೋಪವನ್ನು ಪುಷ್ಟೀಕರಿಸಲು ಬಿಜೆಪಿ ನಾಯಕರು ಪ್ರತಿದಿನ ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿದೆ. ಇವರ ವಿಚಾರಣೆ ಬಾಕಿ ಇದ್ದು ಜೈನ್ ವಿಶೇಷ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದಾರೆ.

ಜೂನ್‌ನಿಂದ ಜೈಲಿನಲ್ಲಿರುವ ಜೈನ್

ಜೂನ್‌ನಿಂದ ಜೈಲಿನಲ್ಲಿರುವ ಜೈನ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಇದಾದ ಕೆಲವು ದಿನಗಳ ನಂತರ ಈ ವಿಡಿಯೋ ಕ್ಲಿಪ್‌ಗಳು ಹೊರಬೀಳಲಾರಂಭಿಸಿದವು. ಈ ವಿಡಿಯೋ ಕ್ಲಿಪ್‌ಗಳು "ವಿಐಪಿ ಚಿಕಿತ್ಸೆ" ಆರೋಪ ಡೈರೆಕ್ಟರ್ ಜನರಲ್ (ಜೈಲುಗಳು), ಸಂದೀಪ್ ಗೋಯೆಲ್ ಅವರನ್ನು ಹೊರತುಪಡಿಸಿ 12 ತಿಹಾರ್ ಜೈಲು ಅಧಿಕಾರಿಗಳನ್ನು ವರ್ಗಾಯಿಸಲು ಕಾರಣವಾಯಿತು.

ಜೈನ್ ಜೂನ್ ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಕಳೆದ ವಾರ ದೆಹಲಿ ನ್ಯಾಯಾಲಯ ಅವರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿತ್ತು.

ಜೈಲಿನಲ್ಲಿ ವಿವಿಐಪಿ ಸೌಲಭ್ಯ ಪಡೆಯಲು ಶಾಗೆ ಮಾತ್ರ ಸಾಧ್ಯ

ಜೈಲಿನಲ್ಲಿ ವಿವಿಐಪಿ ಸೌಲಭ್ಯ ಪಡೆಯಲು ಶಾಗೆ ಮಾತ್ರ ಸಾಧ್ಯ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ತಮ್ಮ ಸಚಿವ ಸತ್ಯೇಂದ್ರ ಜೈನ್ ಅವರನ್ನು ಸಮರ್ಥಿಸಿಕೊಂಡರು. "ಸತ್ಯೇಂದ್ರ ಜೈನ್ ಅವರಿಗೆ ಜೈಲಿನಲ್ಲಿ ವಿವಿಐಪಿ ಸೌಲಭ್ಯಗಳಿರಲಿಲ್ಲ. ಜೈಲು ಕೈಪಿಡಿ ಪ್ರಕಾರ ಸಿಕ್ಕಿದ್ದೆ ಆ ವ್ಯಕ್ತಿಗೆ ರೊಟ್ಟಿ. ಅದನ್ನೇ ಅವರು ತಿನ್ನುತ್ತಿದ್ದಾರೆ. ಅದನ್ನೂ ನೀವು ಪ್ರಶ್ನೆ ಮಾಡುತ್ತೀರಿ. ಇದು ಯಾವ ರೀತಿಯ ರಾಜಕೀಯ?" ಎನ್‌ಡಿಟಿವಿಗೆ ಟೌನ್‌ಹಾಲ್‌ನಲ್ಲಿ ಕೇಜ್ರಿವಾಲ್ ಕೇಳಿದ್ದರು.

ಗುಜರಾತ್‌ನ ಜೈಲಿನಲ್ಲಿದ್ದಾಗ ವಿಶೇಷ ಸವಲತ್ತುಗಳನ್ನು ನೋಡಬೇಕಾದರೆ ಗೃಹ ಸಚಿವ ಅಮಿತ್ ಶಾ ಅವರು ಜೈಲಿನಲ್ಲಿದ್ದಾಗ ನೋಡಬೇಕು ಎಂದು ಹೇಳಿದರು. ''ಜೈಲುಗಳಲ್ಲಿ ವಿವಿಐಪಿ ಸಂಸ್ಕೃತಿಯನ್ನು ನೋಡಬೇಕಿದ್ದರೆ, ಅಮಿತ್ ಶಾ ಜೈಲಿನಲ್ಲಿದ್ದಾಗ ಮಾತ್ರ.. ಅವರಿಗೆ ಡಿಲಕ್ಸ್ ಜೈಲು ಮಾಡಿಸುತ್ತಾರೆ. ಸತ್ಯೇಂದ್ರ ಜೈನ್ ಪ್ರಕರಣದಲ್ಲಿ ವಿವಿಐಪಿ ಸಂಸ್ಕೃತಿಯ ಬಗ್ಗೆ ಯಾರೂ ಕೇಳಲ್ಲ. ವಿವಿಐಪಿ ಸಂಸ್ಕೃತಿ ಏನು ಎಂಬುದನ್ನು ಆಗ ಅರ್ಥವಾಗುತ್ತದೆ'' ಎಂದು ಕೇಜ್ರಿವಾಲ್ ಹೇಳಿದರು.

2010 ರಲ್ಲಿ ಭೂಗತ ಪಾತಕಿ ಸೊಹ್ರಾಬುದ್ದೀನ್ ಶೇಖ್ ಅವರನ್ನು ನ್ಯಾಯಾಂಗೇತರ ಹತ್ಯೆಯ ಆರೋಪದ ಮೇಲೆ ಅಮಿತ್ ಶಾ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2014ರಲ್ಲಿ ಅವರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿತ್ತು.

English summary
BJP releases new CCTV clip showing Satyendra Jain being given VVIP facility in jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X