ಜಗತ್ತಿನ ಅತಿ ಎತ್ತರದ ದೇವಾಲಯ ಭಾರತದಲ್ಲಿ

Subscribe to Oneindia Kannada

ನವದೆಹಲಿ, ಸೆಪ್ಟೆಂಬರ್, 19: ಜಗತ್ತಿನ ಅತಿ ಎತ್ತರದ ಕಟ್ಟಡ ಎಲ್ಲಿದೆ? ಎಂಬ ಒಂದು ಅಂಕದ ಪ್ರಶ್ನೆಗೆ ಇನ್ನು ಮುಂದೆ ಭಾರತದ ಉತ್ತರಪ್ರದೇಶದ ವೃಂದಾವನ ಎಂಬ ಉತ್ತರವನ್ನು ನೀಡಬಹುದು.

ಸದ್ಯ ದುಬೈನ ಬುರ್ಜ್ ಖಲೀಫಾ ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಶ್ರೇಯ ಪಡೆದುಕೊಂಡಿದ್ದು ಇಸ್ಕಾನ್ ಈ ದಾಖಲೆಯನ್ನು ಭಾರತದ ಹೆಸರಿಗೆ ಮಾಡಿ ಕೊಡಲಿದೆ. ಜಗತ್ತಿನಲ್ಲೇ ಅತಿ ಎತ್ತರದ ಚಂದ್ರೋದಯ ಮಂದಿರ ನಿರ್ಮಾಣಕ್ಕೆ ಇಸ್ಕಾನ್ ಮುಂದಾಗಿದೆ. ದೇಗುಲದ ಗೋಪುರ 700 ಅಡಿ ಎತ್ತರವಿರಲಿದ್ದು, ದುಬೈನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗಿಂತ 5 ಅಡಿ ಹೆಚ್ಚು ಆಳದ ಅಡಿಪಾಯ ಸಹ ಈ ಮಂದಿರಕ್ಕಿರಲಿದೆ.[ಮದುವೆ ತಡವಾಗಿದ್ದರೆ ಕಾಣಿರಿ ನಿತ್ಯ ಕಲ್ಯಾಣ ಪೆರುಮಾಳ್]

Under-construction Vrindavan Chandrodaya Mandir is the world's tallest temple

ಬುರ್ಜ್ ಖಲೀಫಾ ಕಟ್ಟಡಕ್ಕೆ 50 ಮೀಟರ್ ಆಳದ ಅಡಿಪಾಯ ನಿರ್ಮಾಣ ಮಾಡಲಾಗಿದೆ. ಆದರೆ ಚಂದ್ರೋದಯ ಮಂದಿರದ ಅಡಿಪಾಯ 55 ಮೀಟರ್ ಆಳ ಹೊಂದಿರಲಿದೆ. ಅಡಿಪಾಯದಲ್ಲಿ 511 ಅಂಕಣಗಳಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಇಸ್ಕಾನ್‌ನ ಪ್ರಕಟಣೆಯಲ್ಲಿ ತಿಳಿಸಿದೆ.[ಅಷ್ಟಮಂಗಲ ಪ್ರಶ್ನೆ: ಅಲ್ಲೊಂದು ಶತಮಾನಗಳ ಹಿಂದಿನ ದೇವಸ್ಥಾನವಿತ್ತು]

ಜಗತ್ತಿನ ಅತಿ ಎತ್ತರದ ದೇವಾಲಯ 2022ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪ್ರತಿ ಕೋನದಲ್ಲಿ 4 ಮಂದಿರಗಳನ್ನು ನಿರ್ಮಿಸಲಾಗುತ್ತದೆ. ಅವುಗಳು ಕೃಷ್ಣ-ರಾಧಾ, ಕೃಷ್ಣ-ಬಲರಾಮ, ಚೈತನ್ಯ ಮಹಾಪ್ರಭು ಮತ್ತು ಸ್ವಾಮಿ ಪ್ರಭುಪಾದರ ಮಂದಿರಗಳಾಗಿರಲಿವೆ ಎಂದು ಇಸ್ಕಾನ್ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The under-construction Chandrodaya Mandir in Vrindavan, designed to be the world's tallest temple, will have its foundation five metres deeper than the famous Burj Khalifa in Dubai. "The foundation of the Burj Khalifa is 50 metres. The temple's foundation is 55-metre deep. The foundation will have 511 columns, which will be completed by March next year," said Narasimha Das, senior Vice-President and project director of the temple.
Please Wait while comments are loading...