ಪಿಎಂ ಮೋದಿ ಬಯೋಪಿಕ್ ನಲ್ಲಿ ವಿವೇಕ್ ಒಬೇರಾಯ್, ಇಲ್ಲಿದೆ ಮೊದಲ ಪೋಸ್ಟರ್

ನವದೆಹಲಿ, ಜನವರಿ 7: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸೋಮವಾರದಂದು ಬಿಡುಗಡೆ ಮಾಡಲಾಗಿದೆ. ವಿವೇಕ್ ಒಬೇರಾಯ್ ಅವರು ನರೇಂದ್ರ ಮೋದಿ ಪಾತ್ರವನ್ನು ನಿಭಾಯಿಸುತ್ತಾರೆ ಎಂದು ಪಕ್ಕಾ ಆದ ಕೆಲ ದಿನಗಳಿಗೆ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಿನಿಮಾಗೆ "ಪಿಎಂ ನರೇಂದ್ರ ಮೋದಿ" ಎಂದು ಹೆಸರಿಡಲಾಗಿದೆ.

ಪೋಸ್ಟರ್ ನಲ್ಲಿ ವಿವೇಕ್ ಒಬೇರಾಯ್ ಗೆ ವಯಸ್ಸಾದಂತೆ ಮೇಕಪ್ ಮಾಡಲಾಗಿದೆ. ಬಿಳಿ ಕೂದಲು, ಗಡ್ಡ ಹಾಗೂ ಚಿನ್ನದ ಬಣ್ಣದ ಕುರ್ತಾ ತೊಟ್ಟಿದ್ದಾರೆ. ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರಧ್ವಜ ಹಾಗೂ ಸೂರ್ಯೋದಯ ಆಗುತ್ತಿರುವಂತಿದೆ. ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಸಿನಿಮಾದ ಹೆಸರು, ನಿರ್ಮಾಣ ಮಾಡುತ್ತಿರುವವರು ಹಾಗೂ ನಿರ್ಮಾಣ ಸಂಸ್ಥೆಯ ವಿವರಗಳು ಇವೆ.

ಸಿನಿಮಾ ಪೋಸ್ಟರ್ ಯಾವಾಗ ಬಿಡುಗಡೆ ಆಗಲಿದೆ ಎಂದು ವಿವೇಕ್ ಒಬೇರಾಯ್ ಭಾನುವಾರದಂದು ಘೋಷಣೆ ಮಾಡಿದ್ದರು. ನಟ ಒಬೇರಾಯ್ ವಿವಿಧ ಭಾಷೆಗಳಲ್ಲಿ ಪೋಸ್ಟರ್ ಅನ್ನು ಮೂರು ಬಾರಿ ಪೋಸ್ಟರ್ ಷೇರ್ ಮಾಡಿದ್ದಾರೆ. ಭಾರತದಲ್ಲಿ ಇಪ್ಪತ್ಮೂರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Vivek Oberoi shares first look of PM Narendra Modi biopic poster

ಮೇರಿ ಕೋಮ್ ಹಾಗೂ ಸರಬ್ಜಿತ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಒಮಂಗ್ ಕುಮಾರ್ ಈ ಚಲನಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಉಳಿದ ತಾರಾಗಣದ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ್. ಪಿಎಂ ನರೇಂದ್ರ ಮೋದಿ ಸಿನಿಮಾದ ಮೊದಲ ಪೋಸ್ಟರ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ ಸೋಮವಾರ ಬಿಡುಗಡೆ ಮಾಡಿದ್ದಾರೆ.

ಅನುಪಮ್ ಖೇರ್ ಅಭಿನಯದ 'ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾದ ವಿವಾದ ಚರ್ಚೆಯಲ್ಲಿ ಇರುವಾಗಲೇ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+