ಅಮೆರಿಕದ ರಕ್ಷಣಾ ಸಲಹೆಗಾರರ ಭಾರತ ಭೇಟಿ ಹಿಂದಿನ ರಹಸ್ಯವೇನು?

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 18: ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ರಕ್ಷಣಾ ಸಲಹೆಗಾರರಾದ ಲೆಫ್ಟನೆಂಟ್ ಜನರಲ್ ಎಚ್.ಆರ್. ಮ್ಯಾಕ್ ಮಾಸ್ಟರ್ ಅವರು, ಮಂಗಳವಾರ ಸ್ವದೇಶಕ್ಕೆ ಮರಳಿದರು. ಭಾರತದಲ್ಲಿರುವ ಅಮೆರಿಕದ ಧೂತಾವಾಸವು ಇದನ್ನು ಅಧಿಕೃತವಾಗಿ ಪ್ರಕಟಿಸಿದೆ.

ಮ್ಯಾಕ್ ಮಾಸ್ಟರ್ ಅವರ ಈ ಭೇಟಿಯು ಪಾಕಿಸ್ತಾನ ಹಾಗೂ ಚೀನಾ ದೇಶಗಳು ಕೊಂಚ ದಿಗಿಲುಗೊಳ್ಳುವಂತೆ ಮಾಡಿದೆ ಎಂಬ ಊಹೆಯೂ ಹರಿದಾಡುತ್ತಿದೆ.

Visit of U.S. National Security Advisor H. R. McMaster to India ends

ಈ ಬಾರಿಯ ಭಾರತ ಭೇಟಿಯ ವೇಳೆ, ಅವರು, ಪ್ರಧಾನಿ ನರೇಂದ್ರ ಮೋದಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಸುಬ್ರಮಣ್ಯಂ ಜೈಶಂಕರ್ ಅವರನ್ನು ಭೇಟಿಯಾಗಿದ್ದಾರೆ.

ಆ ವೇಳೆ, ಉಭಯ ದೇಶಗಳ ನಡುವಿನ ಬಾಂಧವ್ಯ, ರಕ್ಷಣಾ ವ್ಯವಸ್ಥೆಗಳಲ್ಲಿ ಪರಸ್ಪರ ಸಹಕಾರ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇತ್ತೀಚೆಗೆ, ಚೀನಾದ ಸತತ ಎಚ್ಚರಿಕೆ ನಡುವೆಯೂ ದಲೈಲಾಮಾ ಅವರನ್ನು ಅರುಣಾಚಲ ಪ್ರವೇಶಿಸಲು ಭಾರತ ಅನುವು ಮಾಡಿಕೊಟ್ಟಿದ್ದು ಈಗಾಗಲೇ ಭಾರತ-ಚೀನಾ ನಡುವಿನ ಸಂಬಂಧ ಸಡಿಲಗೊಳ್ಳಲು ಮತ್ತೊಂದು ಕಾರಣವೆನಿಸಿದೆ. ಇದಕ್ಕೆ ಪ್ರತೀಕಾರವಾಗಿ, ಚೀನಾ ದೇಶವು, ಪಾಕಿಸ್ತಾನವು ಭಾರತದಲ್ಲಿ ನಡೆಸುವ ಭಯೋತ್ಪಾದಕ ಕೃತ್ಯಗಳಿಗೆ ಪರೋಕ್ಷವಾಗಿ ಹೆಚ್ಚಿನ ಸಹಕಾರ ಕೊಡಬಹುದು ಎಂದೂ ನಿರೀಕ್ಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಈಗ ಮ್ಯಾಕ್ ಮಾಸ್ಟರ್ ಹಾಗೂ ಭಾರತದ ನಾಯಕರೊಂದಿಗೆ ಭೇಟಿ ಮಾಡಿರುವುದು ಭಾರತಕ್ಕೆ ಅಭಯ ಹಸ್ತ ಸಿಕ್ಕಂತಾಗಿದೆ ಎಂದೂ ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
U.S. National Security Advisor Lieutenant General H. R. McMaster departed India today after productive meetings with Prime Minister Narendra Modi, National Security Advisor Ajit Doval, and Foreign Secretary Subrahmanyam Jaishankar.
Please Wait while comments are loading...