ವೈರಲ್ ವಿಡಿಯೋ: ಗೂಂಡಾಗಳಿಗೆ ಗುಂಡು ಹಾರಿಸಿ ಪತಿಯನ್ನು ಉಳಿಸಿದ ಪತ್ನಿ!

Recommended Video

      ಗೂಂಡಾಗಳಿಗೆ ಗುಂಡು ಹಾರಿಸಿ ಪತಿಯನ್ನು ಉಳಿಸಿದ ಪತ್ನಿ | Oneindia Kannada

      ಲಕ್ನೋ, ಫೆಬ್ರವರಿ 05: ಪತಿಯನ್ನು ಮಾರಣಾಂತಿಕವಾಗಿ ಥಳಿಸುತ್ತಿದ್ದ ಗೂಂಡಾಗಳೆಡೆಗೆ ಗುಂಡು ಹಾರಿಸಿ ಹೆದರಿಸಿ, ಪತ್ನಿಯೇ ಪತಿಯನ್ನು ಕಾಪಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

      ಪತಿಯನ್ನು ಥಳಿಸುತ್ತಿದ್ದ ಗೂಂಡಾಗಳನ್ನು ಪತ್ನಿ ಬೆದರಿಸಿ ಓಡಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

      ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಕಾಕೋರಿ ಎಂಬಲ್ಲಿ ತಮ್ಮ ಮನೆಯ ಎದುರಲ್ಲಿ ನಿಂತಿದ್ದ ಅಬಿದ್ ಅಲಿ ಎಂಬುವವರ ಮೇಲೆ ಕೆಲ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕೊಡಲಿ, ಮಚ್ಚುಗಳಿಂದ ಹಲ್ಲೆ ನಡೆಸುತ್ತಿದ್ದ ಅವರಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಹರಸಾಹಸ ಪಡುತ್ತಿದ್ದ ಸಮಯದಲ್ಲಿ ವಕೀಲರಾಗಿದ್ದ ಅವರ ಪತ್ನಿ ತಮ್ಮ ಬಳಿ ಇದ್ದ ಪರವಾನಗಿ ಹೊಂದಿರುವ ರಿವಾಲ್ವಾರ್ ನಿಂದ ಗೂಂಡಾಗಳೆಡೆಗೆ ಗುಂಡು ಹಾರಿಸಿದ್ದಾರೆ.

      ಇದರಿಂದ ಭಯಭೀತರಾದ ಗೂಂಡಾಗಳು ಅಲಿ ಅವರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ. ಮಾಲಿಕ ಮತ್ತು ಬಾಡಿಗೆದಾರನ ನಡುವಿನ ಜನಗಳ ಇದು ಎಂಬ ಮಾಹಿತಿ ದೊರಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+