ವಿಡಿಯೋ; ಸ್ವಚ್ಛತಾ ಅಭಿಯಾನಕ್ಕೆ ಹೊಸ ರಾಯಭಾರಿ!
ನವದೆಹಲಿ, ಅಕ್ಟೋಬರ್ 20; ಪ್ರಾಣಿ, ಪಕ್ಷಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಾಂತರ ಜನರು ಇಷ್ಟಪಡುತ್ತಾರೆ. ಎಂದೋ ಪೋಸ್ಟ್ ಮಾಡಿದ ವಿಡಿಯೋ ಮತ್ತೆಂದೋ ವೈರಲ್ ಆಗುವ ಮೂಲಕ ಜಾಲತಾಣದಲ್ಲಿ ಮಿಲಿಯನ್ ಗಟ್ಟಲೇ ಜನರು ನೋಡುವಂತಾಗುತ್ತದೆ.
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಟ್ವೀಟ್ ಮಾಡಿರುವ ವಿಡಿಯೋವೊಂದು 48 ಗಂಟೆಗಳಿಂದ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಸ್ವಚ್ಚತಾ ಅಭಿಯಾನಕ್ಕೆ ಹೊಸ ರಾಯಭಾರಿ ಸಿಕ್ಕಿದಂತೆ ಆಗಿದೆ.
ಪ್ರವೀಣ್ ಕಾಸ್ವಾನ್ 2020ರ ಆಗಸ್ಟ್ 28ರಂದು ಮಾಡಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ. ಆನೆಯೊಂದು ಕಸದ ಬುಟ್ಟಿ ಸಮೀಪ ಬಿದ್ದಿರುವ ಕಸವನ್ನು ಎತ್ತಿ ಬುಟ್ಟಿಗೆ ಹಾಕುವ 38 ಸೆಕೆಂಡ್ಗಳ ವಿಡಿಯೋ ಇದಾಗಿದೆ.

ಪ್ರವೀಣ್ ಕಾಸ್ವಾನ್ 'This elephant should be mascot of Swatch Bharat. A forward' ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕೇವಲ 30 ಸೆಕೆಂಡ್ ವಿಡಿಯೋವನ್ನು ಇದುವರೆಗೂ 398.2ಕೆ ಜನರು ವೀಕ್ಷಣೆ ಮಾಡಿದ್ದಾರೆ. 5983 ಜನರು ರಿ ಟ್ವೀಟ್ ಮಾಡಿದ್ದಾರೆ. 34.3ಕೆ ಜನರು ಲೈಕ್ ಮಾಡಿದ್ದಾರೆ.
This elephant should be mascot of Swatch Bharat. A forward. pic.twitter.com/1oOeoe1MA9
— Parveen Kaswan, IFS (@ParveenKaswan) August 28, 2020
ಕಂಡ ಕಂಡಲ್ಲಿ ಕಸ ಎಸೆಯುವ ಜನರಿಗಿಂತ ಕಸವನ್ನು ಬುಟ್ಟಿಗೆ ಹಾಕುವ ಆನೆಯ ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ವಿಡಿಯೋವನ್ನು ವೈರಲ್ ಮಾಡಿದ್ದಾರೆ. ತನ್ನ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನು ಆನೆ ನೋಡಿ ಕಲಿಯಬೇಕು ಎಂದು ಕಮೆಂಟ್ ಹಾಕಿದ್ದಾರೆ.
ಚಿರತೆಯ ಫೋಟೋ ವೈರಲ್; ಬುಧವಾರ ಚಿರತೆಯೊಂದ ಬಾಯಿಯ ಸಮೀಪದಲ್ಲಿ ಮಂಗ ಇರುವ ಫೋಟೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಪ್ರವೀಣ್ ಕಾಸ್ವಾನ್ ಅಕ್ಟೋಬರ್ 19ರಂದು ಮಾಡಿರುವ ಟ್ವೀಟ್ ಇದಾಗಿದೆ.
Later leopard played with baby for some time & then killed her also. Wild is raw. It’s real. https://t.co/MUZ4k7rStw
— Parveen Kaswan, IFS (@ParveenKaswan) October 19, 2021
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications