Viral Video: ಜೀವಂತ ಆಕ್ಟೋಪಸ್ ಗುಳುಂ ಮಾಡಿದ ವ್ಯಕ್ತಿ, ಇಲ್ಲಿದೆ ವೈರಲ್ ವಿಡಿಯೋ!

Viral Video: ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಇದರಲ್ಲಿ ಇದೀಗ ಕೊರಿಯನ್ ವ್ಯಕ್ತಿಯ ಚೇಷ್ಟೆ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊರಿಯನ್ ವ್ಯಕ್ತಿ ಜೀವಂತವಾಗಿರುವ ಆಕ್ಟೋಪಸ್‌ಗಳನ್ನು ಗುಳುಂ ಮಾಡಿದ್ದಾನೆ. ಈ ವಿಡಿಯೋದಲ್ಲಿ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಮೊದಲ ಬಾರಿಗೆ ಈ ಆಹಾರವನ್ನು ಸೇವನೆ ಮಾಡುತ್ತಿದ್ದೇನೆ ಎಂದು ವ್ಯಕ್ತಿ ಹೇಳಿದ್ದು. ಈ ವಿಡಿಯೋಗೆ ಚಿತ್ರವಿಚಿತ್ರವಾದ ಕಮೆಂಟ್‌ಗಳು ಬಂದಿವೆ.

ಜನ ವೈರಲ್ ಆಗುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರವಾದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಜೀವಂತ ಆಕ್ಟೋಪಸ್ ಅನ್ನು ಗುಳುಂ ಮಾಡುವುದಕ್ಕೆ ಪ್ರಯತ್ನಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ. ಮೊದಲ ಬಾರಿಗೆ ಈ ರೀತಿ ಆಹಾರವನ್ನು ಪ್ರಯತ್ನಿಸುತ್ತಿದ್ದಾನೆ. ಇದು ಅತ್ಯಂತ ಖುಷಿ ಕೊಡ್ತಿದೆ. ನೋಡಿ ಅಂತಾ ಕೊರಿಯಲ್ ವ್ಯಕ್ತಿ ಹೇಳಿಕೊಂಡಿದ್ದಾನೆ.

Viral Shock Man Caught on Camera Swallowing Live Octopus

ಚೀನಿಯರು ಹಾಗೂ ಕೊರಿಯನ್ ಅವರು ವಿಚಿತ್ರವಾದ ಆಹಾರಗಳನ್ನು ಸೇವಿಸುತ್ತಾರೆ ಎನ್ನುವ ಆರೋಪವು ಮೊದಲಿನಿಂದಲೂ ಇದೆ. ಚೀನಾದವರು ವಿಚಿತ್ರವಾದ ಆಹಾರ ಹಾಗೂ ಬಾವುಲಿಯಂತಹ ಆಹಾರಗಳನ್ನು ಸೇವನೆ ಮಾಡಿರುವುದರಿಂದಲೇ ಕೊರೊನಾದಂತಹ ಗಂಭೀರವಾದ ಸಾಂಕ್ರಾಮಿಕ ರೋಗ ಬಂದಿತ್ತು ಎನ್ನುವ ಭಾವನೆ ಹಲವರಲ್ಲಿ ಇದೆ. ಆದರೆ ಕೊರಿಯನ್‌ ವ್ಯಕ್ತಿಯ ಆಹಾರದ ಶೈಲಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಈಚೆಗೆ ಕೊರಿಯನ್ ವ್ಯಕ್ತಿ ಜೀವಂತವಾಗಿರುವ ಆಕ್ಟೋಪಸ್‌ ತಿನ್ನುವ ವಿಡಿಯೋವನ್ನೂ ಮಾಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಆಕ್ಟೋಪಸ್ ಅನ್ನು ಎಳ್ಳೆಣ್ಣೆಯಿಂದ ತೆಗೆದು ಹಸಿ..ಹಸಿಯಾಗಿ ಬಡಿಸಲಾಗಿದೆ. ನೋಡುವುದಕ್ಕೆ ವಿಚಿತ್ರವಾಗಿರುವ ಈ ವಿಡಿಯೋ ಹಲವರನ್ನು ಕೆರಳಿಸಿದೆ. ಮೊದಲ ಬಾರಿಗೆ ಸಮುದ್ರದ ಆಹಾರವನ್ನು ಸೇವಿಸುತ್ತಿದ್ದೇನೆ ಹೇಗಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು ಕೊರಿಯನ್ ವ್ಯಕ್ತಿ ವಿಡಿಯೋದಲ್ಲಿ "ಕಭಿ ಆಪ್ನೆ ಲೈವ್ ಆಕ್ಟೋಪಸ್ ಖಾಯಾ ಹೈ ಕ್ಯಾ? ಯೇ ಲೈವ್ ಆಕ್ಟೋಪಸ್ ಹೈ, ಯೇ ದೇಖೋ, ನಾಚ್ ರಹಾ ಹೈ. ಓ ದೇವರೇ. ಇಸ್ಕೋ ಕೈಸೆ ಖಾಯೇಂಗೆ " ಎಂದು ಹೇಳಿದ್ದಾರೆ. (ನೀವು ಎಂದಾದರೂ ಲೈವ್ ಆಕ್ಟೋಪಸ್ ತಿಂದಿದ್ದೀರಾ? ಇದು ಲೈವ್ ಆಕ್ಟೋಪಸ್, ನೋಡಿ, ಇದು ಡ್ಯಾನ್ಸ್‌ ಮಾಡುತ್ತಿದೆ. ದೇವರೇ. ನಾವು ಇದನ್ನು ಹೇಗೆ ತಿನ್ನುವುದು, ತಿನ್ನುವ ಮೊದಲು ನಾವು ಅದನ್ನು ಎಳ್ಳೆಣ್ಣೆಯಲ್ಲಿ ಮುಳುಗಿಸಬೇಕು) ಎಂದು ಹೇಳಲಾಗಿದೆ.

ಜನ ಹೇಳಿದ್ದೇನು ?

ಭಾರತದಲ್ಲಿದ್ದು ಈ ವ್ಯಕ್ತಿ ಕೊರಿಯನ್ ಭಾಷೆಯನ್ನೇ ಮರೆತಿರುವಂತಿದೆ. ನಾವು ನೂಡಲ್ಸ್‌ ಬಿಟ್ಟು ಮುಂದಕ್ಕೆ ಬೇರೆ ಯಾವ ಆಹಾರವನ್ನೂ ಸೇವಿಸಿಲ್ಲ. ಇದೆಲ್ಲಾ ಯಾಕೆ ಬ್ರೋ ಟ್ರೈ ಮಾಡ್ತೀರಿ ಎಂದು ಮತ್ತೊಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ ಕೊರಿಯನ್ ವ್ಯಕ್ತಿಯ ಪ್ರಯತ್ನಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+