ರಾಮ್ ರಹೀಮ್ ಗೆ ನೀಡಿದ ವಿಐಪಿ ಆತಿಥ್ಯಕ್ಕೆ ಕೋರ್ಟ್ ಗರಂ

Recommended Video

      Ram Rahim Sentencing 10 Years Punishment | Oneindia kannada

      ರೋಹ್ಟಕ್, ಆಗಸ್ಟ್ 28: ದೇರಾ ಸಚ್ಚಾ ಸೌದಾ ಮುಖ್ಯಸ್ಥ ಅತ್ಯಾಚಾರಿ ರಾಮ್ ರಹೀಮ್ ಸಿಂಗ್ ಗೆ ವಿಶೇಷ ಸೌಲಭ್ಯ ನೀಡಿದ್ದಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.

      "ರಾಮ್ ರಹೀಮ್ ಸಿಂಗ್ ಗೆ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಬಾರದು. ಸಾಮಾನ್ಯ ಖೈದಿಗಳಂತೆಯೇ ಆತನನ್ನು ನಡೆಸಿಕೊಳ್ಳಬೇಕು," ಎಂದು ಜೈಲಿನ ಅಧಿಕಾರಿಗಳಿಗೆ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.

       VIP treatment for Gurmeet Ram Rahim, CBI court slams officials

      ರಾಮ್ ರಹೀಮ್ ಸಿಂಗ್ ಗೆ ವೈಯಕ್ತಿಕ ಬಟ್ಟೆಗಳನ್ನು ಕೊಂಡೊಯ್ಯಲು ಅವಕಾಶ ನೀಡಬಾರದು. ಆತನಿಗೆ ಜೈಲಿನ ಸಮವಸ್ತ್ರವನ್ನೇ ನೀಡಬೇಕು ಎಂದೂ ಕೋರ್ಟ್ ಸೂಚಿಸಿದೆ.

      ಇನ್ನು ಇಂದು ಶಿಕ್ಷೆ ಪ್ರಕಟಿಸುವ ವೇಳೆ ರಾಮ್ ರಹೀಮ್ ಸಿಂಗ್ ಜೈಲಿನಲ್ಲಿ ನಕರಾ ಆಡಲು ಶುರು ಮಾಡಿದ್ದ. "ತನಗೆ ತುರ್ತು ವೈದ್ಯಕೀಯ ಸಹಾಯ ಬೇಕು. ನನಗೇನಾದರೂ ಆದರೆ ಅದಕ್ಕೆ ಸರಕಾರವೇ ಹೊಣೆ," ಎಂದು ಬೆದರಿಕೆ ಹಾಕಿದ್ದ. ಇದಾದ ನಂತರ ಸಿಎಂಒ ಡಾ. ದೀಪಾ ಆತನನ್ನು ಮತ್ತೊಂದು ಸುತ್ತು ಪರೀಕ್ಷೆಗೆ ಒಳಪಡಿಸಿದರು. ಖೈದಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಬೇಡ ಎಂದು ದೀಪಾ ಹೇಳಿದ್ದರಿಂದ ಪೊಲೀಸರು ಬಲವಂತವಾಗಿ ರಾಮ್ ರಹೀಮ್ ಸಿಂಗ್ ನನ್ನು ರೋಹ್ಟಗ್ ಜೈಲಿನೊಳಕ್ಕೆ ಕೊಂಡೊಯ್ದರು.

      ಇದಕ್ಕೂ ಮೊದಲು ರಾಮ್ ರಹೀಮ್ ಸಿಂಗ್ ನನ್ನು ವಿಶೇಷ ಸೆಲ್ ನಲ್ಲಿ ಇಡಲಾಗಿತ್ತು. ಆತನಿಗೊಬ್ಬ ಸಹಾಯಕ, ಜತೆಗೆ ಮಿನರಲ್ ವಾಟರ್ ಪೂರೈಸಲಾಗಿತ್ತು. ಪಂಚಕುಲಾದಿಂದ ಆತನ ಬ್ಯಾಗ್ ಗಳನ್ನು ಪೊಲೀಸ್ ಸಿಬ್ಬಂದಿಗಳೇ ಹೊತ್ತು ತಂದಿದ್ದರು. ಇದಕ್ಕೆ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳನ್ನು ಶಿಕ್ಷೆ ಪ್ರಕಟಣೆ ವೇಳೆ ತರಾಟೆಗೆ ತೆಗೆದುಕೊಂಡಿತು.

      ಇನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡಾ ಅಧಿಕಾರಿಗಳಿಂದ ವಿವಿಐಪಿ ಆತಿಥ್ಯ ಸಂಬಂಧ ವಿವರಣೆ ಕೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+