ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್‌ ರೂಪಾನಿ ಪ್ರಮಾಣ

By Madhusoodhan
|
Google Oneindia Kannada News

ಗಾಂಧಿನಗರ, ಆಗಸ್ಟ್, 07: ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ ರೂಪಾನಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆನಂದಿ ಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ರಾಜ್ಯಪಾಲ ಒ.ಪಿ. ಕೊಹ್ಲಿ ಅವರು ಪ್ರಮಾಣ ವಚನ ಬೋಧನೆ ಮಾಡಿದರು. ಉಪ ಮುಖ್ಯಮಂತ್ರಿಯಾಗಿ ನಿತಿನ್‌ ಪಟೇಲ್‌ ಸಹ ಪ್ರಮಾಣ ವಚನ ಸ್ವೀಕರಿಸಿದರು. [ರಾಜೀನಾಮೆಗೆ ಮುಂದಾದ ಗುಜರಾತ್ ಮುಖ್ಯಮಂತ್ರಿ]

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಹೊಸ ಮುಖ್ಯಮಂತ್ರಿಗೆ ಶುಭಾಶಯ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಹ ಶುಭಾಶಯ ಕೋರಿದ್ದಾರೆ.

gujarat

ಪ್ರಮಾಣ ವಚನದ ವೇಳೆ ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ , ಹಣಕಾಸು ಸಚಿವ ಅರುಣ್‌ ಜೇಟ್ಲಿ ,ಅಮಿತ್‌ ಶಾ , ಮಾಜಿ ಮುಖ್ಯಮಂತ್ರಿ ಆನಂದಿ ಬೆನ್‌ ಪಟೇಲ್‌, ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಹಾಜರಿದ್ದರು.

ಇಳಿವಯಸ್ಸು ಮತ್ತು ಪಟೇಲ್ ಸಮುದಾಯದ ಹೋರಾಟ ಮುಂತಾದ ಕಾರಣಕ್ಕೆ ಆನಂದಿಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ತಮ್ಮ ಸಾಮಾಜಿಕ ತಾಣದ ಪೇಜ್ ನಲ್ಲೂ ಬರೆದುಕೊಂಡಿದ್ದರು.

English summary
Vijay Rupani was on Sunday, Aug 8 sworn in as the chief minister while Nitin Patel took oath as Deputy Chief Minister at a grand ceremony attended by top BJP leaders. Nine ministers from the previous Cabinet, including some considered as loyalists of outgoing Chief Minister Anandiben Patel, have been dropped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X