ಮಲ್ಯ ಮರೆ ಮಾಚಿದ್ದು 258 ಕೋಟಿ ರು. : ಸುಪ್ರೀಂ ಕೋರ್ಟ್
ನವದೆಹಲಿ, ಮೇ 10: ಮದ್ಯದ ದೊರೆ ವಿಜಯ್ ಮಲ್ಯ, ತಮ್ಮ ದೇಶ ತೊರೆಯುವ ಮುನ್ನ ತಮ್ಮ ಹತೋಟಿಯಲ್ಲಿದ್ದ 40 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 258 ಕೋಟಿ ರು.) ಮೊತ್ತವನ್ನು ಭಾರತೀಯ ನ್ಯಾಯಾಂಗದ ಕೈಗೆ ಸಿಲುಕದಂತೆ ಹುಷಾರಾಗಿ ತಮ್ಮ ಮಕ್ಕಳಿಗೆ ಹಸ್ತಾಂತರಿಸಿದ್ದಾರೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ ದೇಶ ಬಿಟ್ಟು ತೆರಳಿ ಲಂಡನ್ ನಲ್ಲಿರುವ ವಿಜಯ್ ಮಲ್ಯ ಅವರು ಇನ್ನೂ ಭಾರತದಲ್ಲಿದ್ದಾಗಲೇ ನ್ಯಾಯಾಲಯವು ಅವರಿಗೆ ತಮ್ಮ (ಮಲ್ಯ) ಹಿಡಿತದಲ್ಲಿರುವ ಯಾವುದೇ ಆಸ್ತಿಯನ್ನು ಹರಾಜು ಹಾಕುವುದಾಗಲೀ, ಮಾರುವುದಾಗಲೀ, ಪರಭಾರೆ ಮಾಡುವುದಾಗಲೀ ಮಾಡಬಾರದೆಂದು ನ್ಯಾಯಾಲಯವು ಕಟ್ಟಾಜ್ಞೆ ವಿಧಿಸಿತ್ತು.[ಮಲ್ಯ ಈಗಲೂ ಸಾವಿರಾರು ಕೋಟಿ ರು ಒಡೆಯ: ಟೈಮ್ಸ್ ನೌ]

ಆದರೂ, ಗುಟ್ಟಾಗಿ ವ್ಯಾಪಾರ ನಡೆಸಿರುವ ಅವರು, ಲಂಡನ್ ನ ಪ್ರತಿಷ್ಠಿತ ಕಂಪನಿಯಾದ ಡಿಯಾಜಿಯೊ ವತಿಯಿಂದ ತಮಗೆ ಬಂದ 40 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಕೆಲವಾರು ಟ್ರಸ್ಟ್ ಗಳಿಗೆ ವರ್ಗಾಯಿಸಿದ್ದಾರೆ. ಈ ಟ್ರಸ್ಟ್ ಗಳ ಮೇಲೆ ಮಲ್ಯ ಅವರಿಗೆ ಹಿಡಿತವಿಲ್ಲದಿದ್ದರೂ, ಆಸ್ತಿ ಮಾರಾಟವು ನ್ಯಾಯಾಲಯ ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.[7 ಸಾವಿರ ಕೋಟಿ ಸಾಲಕ್ಕೆ ಬ್ಯಾಂಕ್ ಗಳಿಗೆ ನಾಮವಿಟ್ಟ ಜತಿನ್ ಮೆಹ್ತಾ ಕಥೆಯೇನು]












Click it and Unblock the Notifications