ಮಲ್ಯ ಕೋಟಿ-ಕೋಟಿ ವೇತನ ಪಡೆಯುತ್ತಿದ್ದಾರೆಯೇ?

Subscribe to Oneindia Kannada

ನವದೆಹಲಿ, ಏಪ್ರಿಲ್, 18: ವಿಜಯ್ ಮಲ್ಯ ಅವರ ಕತೆಯೇ ವಿಭಿನ್ನವಾಗಿದೆ. ಒಂದೆಡೆ ಸುಸ್ತಿದಾರ, ಇನ್ನೊಂದು ಕಡೆ ಭರ್ಜರಿ ವೇತನ ಪಡೆಯುವ ಸಂಸ್ಥೆಯೊಂದರ ಗೌರವಾನ್ವಿತ ನೌಕರ!

ಹೌದು... ಕಂಪನಿಯೊಂದರ ಮೂಲಕ ಮಲ್ಯ ಬರೋಬ್ಬರಿ 1.71 ಕೋಟಿ ರೂ. ವೇತನ ಪಡೆಯುತ್ತಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮಲ್ಯ ಅಧ್ಯಕ್ಷರಾಗಿರುವ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಮದ್ಯ ತಯಾರಿಕಾ ಸಂಸ್ಥೆ "ಮೆಂಡೋಸಿನೋ ಬ್ರೂಯಿಂಗ್‌ ಕಂಪನಿ' ಮೂಲಕ ಮಲ್ಯ ವೇತನ ಪಡೆದುಕೊಳ್ಳುತ್ತಿದ್ದಾರೆ, ಕಂಪನಿ ವಿಶ್ವದ ಹಲವು ರಾಷ್ಟ್ರಗಳಲ್ಲಿ "ಕಿಂಗ್‌ಫಿಶರ್‌' ಬ್ರಾಂಡ್‌ನ‌ ಬಿಯರ್‌ ಮಾರಾಟದ ಹಕ್ಕು ಹೊಂದಿದೆ.[ಮಲ್ಯಜೀ, ವಾರದೊಳಗೆ ಉತ್ರ ಕೊಡಿ, ಇಲ್ಲಾ ಬಂಧನ ಮಾಡ್ತೇವೆ]

mallya

ಕಂಪನಿಯ ಪ್ರಚಾರದ ಸಂಬಂಧ 2015ನೇ 1.71 ಕೋಟಿ ರೂ. ವೇತನವನ್ನು ಸಂಸ್ಥೆಯ ಚೇರ್ಮನ್‌ ವಿಜಯ್‌ ಮಲ್ಯ ಅವರಿಗೆ ನೀಡಲಾಗಿದೆ ಎಂದು ಮೆಂಡೋಸಿನೋ ಕಂಪನಿ ಅಮೆರಿಕದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗೆ ಸಲ್ಲಿಸಿದ ತನ್ನ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ಉಲ್ಲೇಖ ಮಾಡಿದೆ. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಅರ್ಧ ಹಣ ವಿದೇಶದಲ್ಲಿ ಹೂಡಿಕೆ?
ಐಡಿಬಿಐನಿಂದ ಮಲ್ಯ ಪಡೆದಿದ್ದ 950 ಕೋಟಿ ರೂ. ಸಾಲದ ಪೈಕಿ ಅರ್ಧಕ್ಕಿಂತ ಹೆಚ್ಚಿನ ಹಣ ವಿದೇಶಗಳಲ್ಲಿ ಹೂಡಿಕೆಯಾಗಿದೆ ಎಂದು ಮಲ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ತನಿಖಾದಳ ಹೇಳಿದೆ. ಆದರೆ ಯುಬಿ ಗ್ರೂಪ್ ಈ ಸಂಗತಿಯನ್ನು ಅಲ್ಲಗಳೆದಿದ್ದು ಹಣ ಹೂಡಿಕೆ ಮಾಡಿಲ್ಲ ಎಂದು ತಿಳಿಸಿದೆ.

ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಬೇಕು ಎಂದು ಜಾರಿ ನಿರ್ದೇಶನಾಲಯ ಮಾಡಿರುವ ಮನವಿಯ ವಿಚಾರಣೆ ನಡೆಸುತ್ತಿರುವ ದೆಹಲಿಯ ವಿಶೇಷ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ (ಏಪ್ರಿಲ್ 18) ತೀರ್ಪು ಪ್ರಕಟಿಸಲಿದೆ ಎಲ್ಲರ ಚಿತ್ತ ಅತ್ತ ನೆಟ್ಟಿದೆ. ಶುಕ್ರವಾರ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅಮಾನತು ಮಾಡಲಾಗಿತ್ತು. ವಾರದೊಳಗೆ ಉತ್ತರ ನೀಡದಿದ್ದರೆ ಮಲ್ಯ ಅವರನ್ನು ಬಂಧನ ಮಾಡಲಾಗುತ್ತದೆ ಎಂದು ವಿದೇಶಾಂಗ ಎಚ್ಚರಿಕೆ ನೀಡಿ ಮೂರು ದಿನ ಕಳೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijay Mallya got a pay package of over Rs 1.7 crore last year from his US-based brewery firm that itself is struggling for funds and has been served 'default' notices by lenders. More than half of Mallya's total package for 2015 has been paid by California-based Mendocino Brewing Company Inc to him for "promoting" the company's beer brands.
Please Wait while comments are loading...