ಸಾಲ ಮಾಡಿ ಮರೆಯಾದ ಮಲ್ಯಗೆ ಸಿಬಿಐ ಹೊಸ ಕುಣಿಕೆ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮೇ 11: ಸಾಲ ಮಾಡಿ ಮರೆಯಾಗಿರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವುದಿಲ್ಲ ಆದರೆ ವಿಚಾರಣೆಗೆ ಕಳುಹಿಸಿಕೊಡುತ್ತೇವೆ ಎಂದು ಇಂಗ್ಲೆಂಡ್ ಹೇಳಿದೆ.

ಭಾರತದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಈ ಬಗ್ಗೆ ಕಾರ್ಯಚಟುವಟಿಕೆ ಆರಂಭ ಮಾಡಿದೆ. ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಇಂಗ್ಲೆಂಡಿನಿಂದ ಕರೆತರುವ ಯತ್ನಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

vijay mallya

ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲಿಗೆ ವ್ಯವಸ್ಥೆ ಮಾಡಿಕೊಂಡಿದ್ದರೂ ಮಲ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜಾರಿ ನಿರ್ದೇಶನಾಲಯದ ವಿನಂತಿಯಂತೆ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನ್ನು ಸಿಬಿಐ ಜಾರಿ ಮಾಡಲು ಮುಂದಾಗಿದೆ. ಮಲ್ಯ ಮೇಲೆ ಎರಡು ಜಾಮೀನು ರಹಿತ ವಾರಂಟ್ ಗಳಿವೆ.[ಮಲ್ಯರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ: ಯುಕೆ]

ಮಲ್ಯ ಅವರು ತಮ್ಮ ರಾಜ್ಯಸಭೆ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಿಂದ ಮಲ್ಯ 9 ಸಾವಿರ ಕೋಟಿಗೂ ಅಧಿಕ ಸಾಲ ಪಡೆದು ಸುಸ್ತಿದಾರರಾಗಿ ಇಂಗ್ಲೆಂಡಿಗೆ ಹಾರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the United Kingdom refusing to deport Vijay Mallya, a long drawn and tedious process of extradition will now be undertaken by India. The first step would be taken by the Enforcement Directorate which through the Central Bureau of Investigation have a red corner alert against Mallya.
Please Wait while comments are loading...