ಶುಕ್ರವಾರ ಸಿಬಿಐ ಕೋರ್ಟ್ ನಲ್ಲಿ ಮಲ್ಯ ಭವಿಷ್ಯ ನಿರ್ಧಾರ

Subscribe to Oneindia Kannada

ಬೆಂಗಳೂರು, ಫೆಬ್ರವರಿ 8: ವಿಜಯ್ ಮಲ್ಯ ಸಾಲ ಬಾಕಿ ಉಳಿಸಿಕೊಂಡಿದ್ದ ಪ್ರಕರಣದಲ್ಲಿ 11 ಆರೋಪಿಗಳ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ತನ್ನ ತೀರ್ಪು ನೀಡಲಿದೆ.

ವಿಜಯ್ ಮಲ್ಯ ಸೇರಿದಂತೆ 11 ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು, ಇದೇ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಲಿದೆ. ಒಂದೊಮ್ಮೆ ತೀರ್ಪಿನಲ್ಲಿ ಮಲ್ಯ ಮತ್ತು ಇತರ ಆರೋಪಿಗಳಿಗೆ ಜಾಮೀನು ಸಿಕ್ಕಿದಲ್ಲಿ, ಮಲ್ಯ ಆರಾಮವಾಗಿ ಭಾರತಕ್ಕೆ ಹಿಂದುರುಗಬಹುದು. ಇಲ್ಲದಿದ್ದಲ್ಲಿ ಮಲ್ಯ ಮತ್ತೆ ವಿದೇಶಗಳಲ್ಲಿ ತಲೆ ಮರೆಸಿಕೊಂಡು ಓಡಾಡಬೇಕಾಗುತ್ತದೆ.[ಯುಪಿಎ, ಎನ್ ಡಿಎ ಪಾಲಿಗೆ ನಾನು ಫುಟ್ಬಾಲ್ ಆಗಿದ್ದೇನೆ: ಮಲ್ಯ ವಿಷಾದ]

Vijay Mallya bail case: CBI court pronounce order on 10th Feb

*ಯುಬಿಎಚ್ಎಲ್ ಮುಚ್ಚಲು ಆದೇಶ*

ಮಂಗಳವಾರವಷ್ಟೆ ಬ್ಯಾಂಕ್ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ 'ಯುಬಿಎಚ್ಎಲ್' ಕಂಪೆನಿ ಮುಚ್ಚಿ ಸಾಲ ಮರು ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ. ಈ ಮೂಲಕ ವಿಜಯ್ ಮಲ್ಯಗೆ ಸಾಲು ಸಾಲು ಗಂಡಾಂತರಗಳು ಕಾದಿವೆ.[ಶೀಘ್ರ ವಿಜಯ್ ಮಲ್ಯ ಆಸ್ತಿ ಜಪ್ತಿ? ಬಜೆಟ್ ನಲ್ಲಿ ಜೇಟ್ಲಿ ಸುಳಿವು]

ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಸಾಲ ಮರು ಪಾವತಿಸದ ಹಿನ್ನಲೆಯಲ್ಲಿ ಯುನೈಟೆಡ್ ಬ್ರೇವರಿಸ್ ಹೋಲ್ಡಿಂಗ್ಸ್ ಲಿ. (ಯುಬಿಹೆಚ್ಎಲ್) ಸಂಸ್ಥೆಯನ್ನು ಮುಚ್ಚಲು ಅನುಮತಿ ನೀಡುವಂತೆ ಸ್ಟೇಟ್ ಬ್ಯಾಂಕ್ ನೇತೃತ್ವದ 14 ಬ್ಯಾಂಕುಗಳ ಒಕ್ಕೂಟ ಹಾಗೂ ವಿಮಾನ ತಯಾರಕ
ಕಂಪೆನಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದವು. ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಮಂಗಳವಾರ ಆದೇಶ ನೀಡಿತ್ತು.

ಪ್ರಕರಣವೇನು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 14 ಬ್ಯಾಂಕುಗಳಿಂದ ವಿಜಯ್ ಮಲ್ಯ 6,000 ಕೋಟಿಗೂ ಮಿಕ್ಕಿ ಸಾಲ ಪಡೆದಿದ್ದರು. ಆರಂಭದಲ್ಲಿ ಯುಬಿಎಚ್ಎಲ್ ಕಿಂಗ್ ಫಿಷರ್ ಏರ್ಲೈನ್ಸಿನಲ್ಲಿ ಪಾಲು ಹೊಂದಿತ್ತು. ಮುಂದೆ ಯುಬಿಎಚ್ಎಲ್ ಅನ್ನು ಪ್ರತ್ಯೇಕಿಸಲಾಗಿತ್ತು. ಆದರೆ ಸಾಲ ಮರುಪಾವತಿಯಾಗದ ಹಿನ್ನಲೆಯಲ್ಲಿ ಕಂಪೆನಿಯನ್ನು ಮುಚ್ಚುವಂತೆ ಬ್ಯಾಂಕುಗಳ ಒಕ್ಕೂಟ ಕೇಳಿಕೊಂಡಿತ್ತು.

ಬ್ಯಾಂಕುಗಳ ಬೇಡಿಕೆಯಂತೆ ಇದೀಗ ಹೈಕೋರ್ಟ್ 'ಯುಬಿಎಚ್ಎಲ್ 'ಮುಚ್ಚಲು ಆದೇಶ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hearing on bail application of all 11 accused in Vijay Mallya loan default case, completed. Special CBI court to pronounce order on 10th February. On Tuesday Karnataka HC ordered to shut down the UBHL company to fill the bank loans.
Please Wait while comments are loading...