ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ : ಸಂಸತ್ತಿನಲ್ಲಿ ಚೌಕಿದಾರ 'ಮೋದಿ' ಕಾಲೆಳೆದ ರಾಹುಲ್ ಗಾಂಧಿ

By Mahesh
|
Google Oneindia Kannada News

ನವದೆಹಲಿ, ಜುಲೈ 28: ಸಂಸತ್ತಿನ ಮುಂಗಾರು ಅಧಿವೇಶನದ ಒಂಭತ್ತನೇ ದಿನದಂದು ಬೆಲೆ ಏರಿಕೆ ಬಗ್ಗೆ ಸಂಸದ ರಾಹುಲ್ ಗಾಂಧಿ ಭಾಷಣ ಎಲ್ಲರ ಹುಬ್ಬೇರಿಸಿತು. 'ನಾನು ದೇಶದ ಸೇವಕ' ಎನ್ನುವ ಪ್ರಧಾನಿ ಮೋದಿ ಅವರೇ ಬೆಲೆ ಏರಿಕೆ ಬಗ್ಗೆ ಏನು ಹೇಳುತ್ತೀರಾ ಎಂದು ರಾಹುಲ್ ಗಾಂಧಿ ನೇರವಾಗಿ ಪ್ರಶ್ನಿಸಿದರು.

ಉತ್ತರಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡುವಾಗ ನೀವು ಹೇಳಿದ್ದು ಇನ್ನೂ ನೆನಪಿದೆ. ನನ್ನನ್ನು ಪ್ರಧಾನ ಮಂತ್ರಿ ಎನ್ನಬೇಡಿ, ಪ್ರಧಾನ ಸೇವಕ(ಚೌಕಿದಾರ) ಮಾಡಿ ಎಂದು ಹೇಳಿದ್ರಿ. ಆದರೆ, ಚೌಕಿದಾರನ ಮೂಗಿನ ಕೆಳಗೆ ಬೆಳೆಗಳ ಕಳ್ಳತನವಾಗುತ್ತಿದೆ. [ಎಪಿಎಂಸಿಯಲ್ಲಿ 130 ರೂ.ಗಳಿಗೆ ತೊಗರಿ ಬೇಳೆ ಲಭ್ಯ]

Rahul Gandhi speaks on prise rise and takes a dig at PM Modi in Lok Sabha

ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಈ ಬಗ್ಗೆ ಪ್ರಧಾನ ಚೌಕಿದಾರರು ಏಕೆ ಮಾತನಾಡುತ್ತಿಲ್ಲ. ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೀರಿ, ಆಲೂಗೆಡ್ಡೆ, ಧಾನ್ಯ, ಬೆಳೆಕಾಳುಗಳ ಬೆಲೆ ಬಗ್ಗೆ ಮಾತನಾಡಿ, ಟೊಮ್ಯಾಟೋ ಬೆಲೆಯಂತೂ 300% ಏರಿಕೆ ಕಂಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ವಿವರಿಸಿದರು.[ಟೊಮ್ಯಾಟೊ ಬೆಲೆ ಡಬ್ಬಲ್, ಕಂಗಲಾದ ಸಾರು, ಚಟ್ನಿ ಪ್ರಿಯರು]

ಸಾಲಮನ್ನಾ: ಯುಪಿಎ ಕಾಲದಲ್ಲಿ ರೈತರಿಗೆ ನೀಡಿದ್ದ ಸಾಲದಲ್ಲಿ 6,000 ಕೋಟಿ ರು ಮನ್ನಾ ಮಾಡಲಾಯಿತು. ಮೋದಿ ಅವರ ಕಾಲದಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ನೀಡಿದ 1.14 ಲಕ್ಷ ಕೋಟಿ ರು ಮನ್ನಾ ಮಾಡಲಾಗಿದೆ.[ನಿದ್ದೆ ಮಾಡಿದ ರಾಹುಲ್‌ಗೆ ಗುದ್ದು ನೀಡಿದ ಟ್ವಿಟ್ಟರ್]

ಸ್ಟಾಂಡ್ ಅಪ್ ಇಂಡಿಯಾ, ಸ್ಟಾರ್ ಅಪ್ ಇಂಡಿಯಾ ನಮಗೆ ಗೊತ್ತಿಲ್ಲ, ಆಲೂಗೆಡ್ಡಿ ಬೆಲೆ ಯಾವಾಗ ಡೌನ್ ಆಗುತ್ತೆ ಹೇಳಿ. ಈಗಂತೂ ಗಲ್ಲಿ ಗಲ್ಲಿಗಳಲ್ಲಿ ಒಂದೇ ಕೂಗು arhar Modi, arhar Modi.'

ಯುಪಿಎ ಕಾಲದಲ್ಲಿ ಎಂಎಸ್ ಪಿ ಹಾಗೂ ಮಾರುಕಟ್ಟೆ ದರ ನಡುವಿನ ಅಂತರ 30ರು ನಷ್ಟಿತ್ತು. ಈಗ ಸಾವಿರಾರು ರುಪಾಯಿಯಾಗಿದೆ. ಆ ಸಾವಿರ ರುಪಾಯಿ ಯಾರ ಜೇಬಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಇತ್ತ ರಾಜ್ಯಸಭೆಯಲ್ಲಿ ಕೆಮಿಕಲ್, ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರು ಅಗತ್ಯ ಔಷಧಿಗಳ ಬೆಲೆ ಏರಿಕೆ, ಜನರಿಕ್ ಔಷಧಾಲಯ ಸ್ಥಾಪನೆ ಬಗ್ಗೆ ವಿವರಣೆ ನೀಡಿದ್ದು ಸ್ವಲ್ಪ ಮಟ್ಟಿಗೆ ಚರ್ಚೆಯಾಯಿತು.

English summary
Rahul Gandhi speaks on price rise and takes a dig at PM Modi in Lok Sabha Rahul Gandhi speaks at Lok Sabha during the price rise discussion on the day nine of Monsoon session today (July 28). AICC vice president Rahul takes dig at PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X