ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಫ್ಟ್‌ನಲ್ಲಿ ಬಾಲಕನಿಗೆ ಕಚ್ಚಿದ ನಾಯಿ: ವಿಡಿಯೋ ಸೆರೆ

|
Google Oneindia Kannada News

ನೋಯ್ಡಾ ನವೆಂಬರ್ 16: ಯುಪಿಯ ಗ್ರೇಟರ್ ನೋಯ್ಡಾದ ಲಾ ರೆಸಿಡೆನ್ಶಿಯಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಾಯಿ ದಾಳಿಯ ಮತ್ತೊಂದು ಘಟನೆ ವರದಿಯಾಗಿದೆ. ಲಿಫ್ಟ್‌ನಲ್ಲಿ ಶಾಲಾ ಬಾಲಕನಿಗೆ ಸಾಕು ನಾಯಿಯೊಂದು ಕಚ್ಚಿದೆ. ಮಗು ಶಾಲೆಗೆ ತೆರಳಲು ತನ್ನ ತಾಯಿಯೊಂದಿಗೆ ಲಿಫ್ಟ್‌ನಲ್ಲಿತ್ತು. ಆಗ ವ್ಯಕ್ತಿಯೊಬ್ಬ ನಾಯಿಯೊಂದಿಗೆ ಲಿಫ್ಟ್‌ನಲ್ಲಿ ಪ್ರವೇಶಿಸುತ್ತಾನೆ. ಈ ವೇಳೆ ನಾಯಿ ಏಕಾಏಕಿ ಪುಟ್ಟ ಬಾಲಕನ ಮೇಲೆ ದಾಳಿ ಮಾಡಿದೆ. ಬಳಿಕ ಬಾಲಕನಿಗೆ ನಾಲ್ಕು ಚುಚ್ಚುಮದ್ದುಗಳನ್ನು ನೀಡಲಾಗಿದೆ.

ಕಟ್ಟಡದ ಲಿಫ್ಟ್‌ನಲ್ಲಿ ಈ ಘಟನೆ ನಡೆದಿದ್ದು, ದಾಳಿಯ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶಾಲಾ ಬಾಲಕ ಮತ್ತು ಅವನ ತಾಯಿ ಈಗಾಗಲೇ ಲಿಫ್ಟ್‌ನಲ್ಲಿ ಇರುತ್ತಾರೆ. ನಂತರ ಒಬ್ಬ ವ್ಯಕ್ತಿ ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್‌ಗೆ ಪ್ರವೇಶಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಲಿಫ್ಟ್ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ನಾಯಿ ಮಗುವಿನ ಮೇಲೆ ದಾಳಿ ಮಾಡಿ ಕೈಗೆ ಕಚ್ಚಿದೆ.

 ನೋಯ್ಡಾ: ದೇಶದ ಅತಿದೊಡ್ಡ ಡೇಟಾ ಸೆಂಟರ್ ಉದ್ಘಾಟಿಸಿದ ಯೋಗಿ ನೋಯ್ಡಾ: ದೇಶದ ಅತಿದೊಡ್ಡ ಡೇಟಾ ಸೆಂಟರ್ ಉದ್ಘಾಟಿಸಿದ ಯೋಗಿ

ಮಗು ಮೇಲೆ ನಾಯಿ ದಾಳಿ ಬಳಿಕ ಮಗುವಿನ ತಾಯಿ ಸಾಕು ನಾಯಿ ಮಾಲೀಕರ ವಿರುದ್ಧ ಆಕ್ರೋಶಗೊಂಡಿದ್ದಾರೆ. "ನಾಯಿಗಳನ್ನು ಚಿಕ್ಕ ಮಕ್ಕಳಿರುವ ಜಾಗಕ್ಕೆ ತರಬಾರದು. ದಾರಿ ತಪ್ಪಿಯೂ ಅಪಾರ್ಟ್‌ಮೆಂಟ್ ಪ್ರವೇಶಿಸಲು ಬಿಡಬಾರದು' ಎಂದು ಬಾಲಕನ ತಾಯಿ ಒತ್ತಾಯಿಸಿದ್ದಾರೆ.

Video: Pet Dog Bites Child In lift Ghaziabad

ನಾಯಿಗಳಿಂದ ಉಂಟಾಗುವ ಹಾವಳಿಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ನೋಯ್ಡಾ ಪ್ರಾಧಿಕಾರವು ಇತ್ತೀಚೆಗೆ ಸಾಕುಪ್ರಾಣಿಗಳ ಬಗ್ಗೆ ನೀತಿಯನ್ನು ರೂಪಿಸಿದೆ. ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿ ಅಥವಾ ಬೆಕ್ಕುಗಳನ್ನು ಮುಂದಿನ ವರ್ಷ ಜನವರಿ 31 ರೊಳಗೆ ನೋಂದಾಯಿಸಿಕೊಳ್ಳಬೇಕು ಅಥವಾ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ ಯಾವುದೇ ಅನಾಹುತ ಉಂಟಾದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ.

ನೋಯ್ಡಾದ ಹೊಸ ಪೆಟ್ ರೂಲ್ಸ್-

*ನೋಯ್ಡಾ ಪ್ರಾಧಿಕಾರದ ಹೊಸ ನೀತಿಯ ಪ್ರಕಾರ, ಸಾಕು ನಾಯಿಗಳು ಅಥವಾ ಬೆಕ್ಕುಗಳ ನೋಂದಣಿಯು ಜನವರಿ 31, 2023 ರ ಒಳಗೆ ಕಡ್ಡಾಯವಾಗಿದೆ. ನೋಂದಣಿಯಾಗದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ.

*ಅಹಿತಕರ ಘಟನೆಯ ಸಂದರ್ಭದಲ್ಲಿ ಸಾಕುಪ್ರಾಣಿಗಳ ಮಾಲೀಕರು ರೂ 10,000 ದಂಡವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (AWBI) ಮಾರ್ಗಸೂಚಿಗಳಿಗೆ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Video: Pet Dog Bites Child In lift Ghaziabad

*ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಪಡೆಯಲು ಸಾಕು ನಾಯಿಯ ಮಾಲೀಕರು ಮಾರ್ಚ್ 1, 2023 ರಿಂದ ರೂ 10,000 ದಂಡವನ್ನು ವಿಧಿಸುತ್ತಾರೆ.

*ಸಾಕು ನಾಯಿಗಳಿಗೆ ಕ್ರಿಮಿನಾಶಕ ಅಥವಾ ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

*ನೋಯ್ಡಾ ಪ್ರದೇಶದಲ್ಲಿ ನಾಯಿ ಕಡಿತದ ಕುರಿತು ಹಲವು ದೂರುಗಳು ಮತ್ತು ವರದಿಗಳ ನಂತರ ನಿಯಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಹಿಂದೆ ಬಾಲಕನಿಗೆ ಲಿಫ್ಟ್‌ನಲ್ಲಿ ಕಚ್ಚಿದ ನಾಯಿ

ಸೆಪ್ಟೆಂಬರ್ 06ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಇಂಥಹದ್ದೇ ಘಟನೆ ನಡೆದಿತ್ತು. ಲಿಫ್ಟ್‌ನಲ್ಲಿದ್ದ ಮಗುವನ್ನು ನಾಯಿ ಕಚ್ಚಿತ್ತು. ನಾಯಿ ಮಾಲೀಕರಾದ ಮಹಿಳೆ ಮಗುವಿನ ಮೇಲೆ ನಾಯಿ ದಾಳಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲದೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಾಯಿ ಕಚ್ಚಿದ್ದಕ್ಕಿಂತ ಮಹಿಳೆಯ ವರ್ತನೆಯಿಂದ ಜನ ಆಕ್ರೋಶ ಹೊರಹಾಕಿದ್ದರು.

09 ವರ್ಷದ ಬಾಲಕ ಟ್ಯೂಷನ್ ಮುಗಿಸಿಕೊಂಡು ಅಪಾರ್ಟ್‌ಮೆಂಟ್‌ ಲಿಫ್ಟ್ ನಿಂದ ಮನೆಗೆ ಮರಳುತ್ತಿದ್ದನು. ಅಷ್ಟರಲ್ಲಿ ಮಹಿಳೆಯೊಬ್ಬಳು ತನ್ನ ಮುದ್ದಿನ ನಾಯಿಯೊಂದಿಗೆ ಲಿಫ್ಟ್‌ಗೆ ಬರುತ್ತಾಳೆ. ಈ ವೇಳೆ ಏಕಾಏಕಿ ದಾಳಿ ಮಾಡಿದ ನಾಯಿ ಬಾಲಕನ ಸೊಂಟಕ್ಕೆ ಕಚ್ಚಿದೆ. ಅದರ ನಂತರ ಮಗು ನೋವಿನಿಂದ ನರಳಲು ಪ್ರಾರಂಭಿಸುತ್ತದೆ. ಆಶ್ಚರ್ಯದ ಸಂಗತಿಯೆಂದರೆ ಮಹಿಳೆ ಮಗುವಿನ ಯೋಗಕ್ಷೇಮದ ಬಗ್ಗೆ ಏನ್ನನ್ನೂ ಕೇಳಲಿಲ್ಲ ಮತ್ತು ಮೌನವಾಗಿ ಲಿಫ್ಟ್‌ನಿಂದ ಇಳಿದು ಹೋಗುತ್ತಾಳೆ. ಮಗುವಿನ ತಂದೆಯ ದೂರಿನ ಮೇರೆಗೆ ಪೊಲೀಸರು ಮಗುವಿನ ವೈದ್ಯಕೀಯ ಪರೀಕ್ಷೆಯ ನಂತರ ಎಫ್‌ಐಆರ್ ದಾಖಲಿಸಿದ್ದರು. ನಾಯಿ ಮಾಲೀಕರಾದ ಮಹಿಳೆಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

English summary
Pet Dog Bites Child In Ghaziabad Housing Society Lift in Ghaziabad district of Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X