ಮಹಾರಾಷ್ಟ್ರ ಡಿಸಿಎಂ ಐಫೋನ್ ಶೋಕಿಯ ವಿಡಿಯೋ ವೈರಲ್!
ರಾಜಕಾರಣಿಗಳು ಏನೇ ಮಾಡಿದರೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾರೆ. ಇದೀಗ ನೆರೆಯ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಐಫೋನ್ ಶೋಕಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದಲ್ಲಿ ಕೆಲವೇ ದಿನಗಳ ಮುಂಚೆಯಷ್ಟೇ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಅವರು ಇದೀಗ ಉಪ ಮುಖ್ಯಮಂತ್ರಿ ಇದ್ದಾರೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇದೆ. ಶಿವಸೇನೆಯಿಂದ ಬಂಡಾಯವೆದ್ದು ಪ್ರತ್ಯೇಕವಾಗಿ ಎನ್‌ಡಿಎದೊಂದಿಗೆ ಕೈಜೋಡಿಸಿರುವ ಏಕನಾಥ್ ಶಿಂಧೆ ಅವರು ಇದೀಗ ಅವರ ಐಪೋನ್‌ನಿಂದಲೇ ಸುದ್ದಿಯಲ್ಲಿ ಇದ್ದಾರೆ.
ನಮ್ಮ ದೇಶದಲ್ಲಿ ರಾಜಕಾರಣಿಗಳು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಹೇಗೆ ಇರುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ಇರುತ್ತಾರೆ ಎನ್ನುವ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲ್ಲ ಇರುತ್ತವೆ. ಇದೀಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ವಿಚಾರವೂ ಸಹ ಚರ್ಚೆಯಾಗುತ್ತಿದೆ. ಐಪೋನ್ ನಿಂದ ಅವರು ಮಾಡಿರುವ ಕೆಲಸಕ್ಕೆ ಮಹಾರಾಷ್ಟ್ರದ ಜನ ದಂಗಾಗಿದ್ದರೆ. ಈ ವಿಡಿಯೋವನ್ನು ನೋಡಿದವರು ಇಷ್ಟೊಂದು ದುರಂಕಾರವೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಡಿಸಿಎಂ ಐಪೋನ್‌ನಿಂದ ಏನು ಮಾಡಿದ್ರು ಅಂತ ನೋಡೋಣ...

ಐಫೋನ್‌ನಿಂದ ಕೇಕ್ ಕತ್ತರಿಸಿದರು!
ಏಕನಾಥ್ ಶಿಂಧೆ ಅವರು ಅವರ ಹುಟ್ಟುಹಬ್ಬದ ದಿನ ಐಫೋನ್‌ನಿಂದ ಕೇಕ್ ಕತ್ತರಿಸಿದ್ದಾರೆ. ಇದೀಗ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜನುಮದಿನದಲ್ಲಿ ಈ ಘಟನೆ ನಡೆದಿದೆ. ಅವರ ಜನುಮದಿನಕ್ಕೆ ಕೇಕ್ ಕತ್ತರಿಸಲಾಗಿದ್ದು, ಅದನ್ನು ಐಫೋನ್ನಿಂದಲೇ ಕತ್ತರಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಹಾರಾಷ್ಟ್ರದ ಡಿಸಿಎಂ ಹುಟ್ಟುಹಬ್ಬ ಫೆಬ್ರವರಿ 9ರಂದು ಆಯೋಜಿಸಲಾಗಿತ್ತು. ಮಹಾರಾಷ್ಟ್ರದ ಥಾಣೆಯಲ್ಲಿ ಈ ಸಮಾರಂಭ ನಡೆದಿದ್ದು, ಅಲ್ಲಿ ದೊಡ್ಡ ಕೇಕ್ ಕಟ್ ಮಾಡಲಾಗಿದೆ ಎಂದು ಹೇಳಲಾಗಿದೆ. ಅವರ ಐಫೋನ್‌ನಿಂದಲೇ ಕೇಕ್ ಕತ್ತರಿಸಿ ಹಂಚಿದ್ದಾರೆ ಎಂದು ಹೇಳಲಾಗುತ್ತಿದೆ. ರೆಬೆಲ್ ನಾಯಕನ ಈ ಶೋಕಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಲವರು ಇಷ್ಟೊಂದು ಮೆರೆಯುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಇನ್ನು ಏಕನಾಥ್ ಶಿಂಧೆ ಹುಟ್ಟುಹಬ್ಬದ ದಿನ ಅವರ ಕುಟುಂಬದವರು ಹಾಗೂ ಬೆಂಬಲಿಗರು ಸೇರಿದಂತೆ ನೂರಾರು ಜನ ಸೇರಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಜನ್ಮದಿನಾಚರಣೆಯ ಸಮಯದಲ್ಲಿ ಅವರ ಐಫೋನ್ ಶೋಕಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ರೆಬೆಲ್ ನಾಯಕ: ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ರೆಬೆಲ್ ನಾಯಕ ಅಂತಲೇ ಗುರುತಿಸಿಕೊಂಡಿದ್ದಾರೆ. ಮೂಲ ಶಿವಸೇನಾ ಪಕ್ಷದಿಂದ ಹೊರ ಬಂದ ಇವರು ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾಗಿಯೂ 2.5 ವರ್ಷ ಆಡಳಿತ ನಡೆಸಿದ್ದರು. ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications