• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಡಿಯೋ: ಅಲ್ಯೂಮಿನಿಯಂ ತಪ್ಪಲೆಯಲ್ಲಿ ನದಿ ದಾಟುವ ಪುಟಾಣಿ ಮಕ್ಕಳು

|
   ಅಸ್ಸಾಂ ನಲ್ಲಿ ಅಲ್ಯೂಮಿನಿಯಂ ತಪ್ಪಲೆಯಲ್ಲಿ ನದಿ ದಾಟಿ ಶಾಲೆಗೆ ಹೋಗುತ್ತಿರುವ ಪುಟ್ಟ ಮಕ್ಕಳು | Oneindia Kannada

   ಬಿಶ್ವನಾಥ್ (ಅಸ್ಸಾಂ), ಸೆಪ್ಟೆಂಬರ್ 28: ಈ ಪುಟ್ಟಮಕ್ಕಳು ತಮ್ಮ ಪುಟ್ಟ ಪುಟಾಣಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ಅಲ್ಯೂಮಿನಿಯಂ ತಪ್ಪಲೆ ಮೂಲಕ ಮುಂದಕ್ಕೆ ಸಾಗುತ್ತಿದ್ದರೆ 'ಇದೆಂಥ ಆಟ?' ಎಂದು ಅರೆ ಕ್ಷಣ ಅನಿಸಬಹುದು. ಆದರೆ ಈ ಮಕ್ಕಳು ತಮ್ಮ ಶಾಲೆಗೆ ತೆರಳಲು ನದಿ ದಾಟುವ ರೀತಿ ಇದು ಎಂದು ತಿಳಿದರೆ ಗಾಬರಿ ಆಗದಿದ್ದರೆ ಹೇಳಿ.

   ಅಸ್ಸಾಂ ರಾಜ್ಯದ ಬಿಶ್ವನಾಥ್ ಜಿಲ್ಲೆಯ ಸಣ್ಣ ಹಳ್ಳಿ ಸೂಟಿಯಾ. ಇಲ್ಲಿನ ಪ್ರಾಥಮಿಕ ಶಾಲೆಯ ಮಕ್ಕಳು ತಾವು ಶಾಲೆಗೆ ಹೋಗುವಾಗ ಪುಸ್ತಕದ ಚೀಲದ ಜತೆಗೆ ತಾವು ಕೂರಬಹುದಾದಷ್ಟು ದೊಡ್ಡದಾದ ಅಲ್ಯೂಮಿನಿಯಂ ತಪ್ಪಲೆ ಅಥವಾ ಸಣ್ಣ ತೆಪ್ಪದ ಆಕಾರದ ಪಾತ್ರೆಯನ್ನು ತೆಗೆದುಕೊಂಡು ಹೋಗುತ್ತಾರೆ.

   ಅಪ್ಪನ ಶವದೆದುರು ಮಗನ ಆರ್ತನಾದ: ಕರುಳು ಕಿವುಚಿದ ಆ ಚಿತ್ರ

   ನದಿಗುಂಟ ನಡೆದು ಹೋದರೆ ಅಲ್ಲಿ ಯಾವುದೇ ಸೇತುವೆ ಅಥವಾ ದೋಣಿ ಏನೂ ಇಲ್ಲ. ನದಿ ನೀರಿನ ಬಳಿ ತಾವು ತಂದಿರುವ ಅಲ್ಯೂಮಿನಿಯಂ ಪಾತ್ರೆಯನ್ನು ಇಟ್ಟು, ಪುಸ್ತಕದ ಚೀಲದ ಜತೆಗೆ ಅದರೊಳಗೆ ಕೂರುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಮಕ್ಕಳ ಪಯಣ. ಎರಡೂ ಕೈಯಲ್ಲಿ ನದಿ ನೀರನ್ನು ಹಿಂದಕ್ಕೆ ತಳ್ಳುತ್ತಾ ತಮ್ಮ ಶಾಲೆ ಸೇರುತ್ತಾರೆ. ವಾಪಸ್ ಬರುವಾಗಲೂ ಇದೇ ವಿಧಾನ.

   ಬಾಳೆ ದಿಂಡಿನಿಂದ ಮಾಡಿದ ದೋಣಿಯಲ್ಲಿ ನದಿ ದಾಟುತ್ತಿದ್ದರು

   ಬಾಳೆ ದಿಂಡಿನಿಂದ ಮಾಡಿದ ದೋಣಿಯಲ್ಲಿ ನದಿ ದಾಟುತ್ತಿದ್ದರು

   "ಪ್ರತಿ ಸಲ ಮಕ್ಕಳು ನದಿ ದಾಟುವಾಗಲೂ ನನ್ನ ಎದೆ ಡವಗುಟ್ಟುತ್ತಲೇ ಇರುತ್ತದೆ. ಈ ಪ್ರದೇಶದಲ್ಲಿ ಯಾವುದೇ ಸೇತುವೆ ಇಲ್ಲ. ಇದಕ್ಕೂ ಮುಂಚೆ ಬಾಳೆ ದಿಂಡಿನಿಂದ ಮಾಡಿದ ದೋಣಿಯಲ್ಲಿ ನದಿ ದಾಟುತ್ತಿದ್ದರು" ಎನ್ನುತ್ತಾರೆ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜೆ.ದಾಸ್. ಯಾವಾಗ ಈ ಮಕ್ಕಳ ನಿತ್ಯದ ಪ್ರಯಾಣದ ಬಗ್ಗೆ ವಿಡಿಯೋ ವೈರಲ್ ಆಯಿತೋ, ಈ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಜನಪ್ರತಿನಿಧಿ ಪ್ರಮೋದ್ ಬೋರ್ಥಾಕೂರ್ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿ, ಮಕ್ಕಳನ್ನು ಈ ರೀತಿ ನೋಡುವುದಕ್ಕೆ ನಾಚಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.

   ದ್ವೀಪದಲ್ಲಿ ಶಾಲೆ ಕಟ್ಟಿದ್ದಾದರೂ ಹೇಗೆ?

   ದ್ವೀಪದಲ್ಲಿ ಶಾಲೆ ಕಟ್ಟಿದ್ದಾದರೂ ಹೇಗೆ?

   ಈ ಪ್ರದೇಶದಲ್ಲಿ ಲೋಕೋಪಯೋಗಿ ರಸ್ತೆಗಳಿಲ್ಲ. ಈ ದ್ವೀಪದಲ್ಲಿ ಸರಕಾರಿ ಶಾಲೆ ಕಟ್ಟಡವಾದರೂ ಹೇಗೆ ನಿರ್ಮಾಣ ಮಾಡಿದರು ಅಂತ ತಿಳಿದಿಲ್ಲ. ನಾವು ಈ ವಿದ್ಯಾರ್ಥಿಗಳಿಗೆ ದೋಣಿಯನ್ನು ಒದಗಿಸಬಹುದು. ಈ ಶಾಲೆಯನ್ನು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಜಿಲ್ಲಾ ಅಧಿಕಾರಿಯನ್ನು ಕೇಳಿಕೊಳ್ಳುತ್ತೇನೆ ಎಂದು ಪ್ರಮೋದ್ ಸುದ್ದಿ ಮಾಧ್ಯಮಕ್ಕೆ ಹೇಳಿದ್ದಾರೆ. ಶಾಲೆಗೆ ಹೋಗುವ ಸಲುವಾಗಿ ಮಕ್ಕಳು ನದಿ ದಾಟುವುದು ಈ ದೇಶದಲ್ಲಿ ಹೊಸ ಸಂಗತಿಯೇನಲ್ಲ. ಈಚೆಗೆ ಆಘಾತ ಆಗುವಂಥ ಪ್ರಕರಣವೊಂದು ನಡೆದಿದೆ.

   ಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆ

   ದೇಶದ ನಾನಾ ಭಾಗದಲ್ಲಿ ಇಂಥ ಪರಿಸ್ಥಿತಿ ಇದೆ

   ದೇಶದ ನಾನಾ ಭಾಗದಲ್ಲಿ ಇಂಥ ಪರಿಸ್ಥಿತಿ ಇದೆ

   ಹರಿಯಾಣದ ಪಂಚಕುಲದಲ್ಲಿ ಈ ತಿಂಗಳ ಆರಂಭದಲ್ಲಿ ಶಾಲೆಯಿಂದ ವಾಪಸ್ ಬರುವಾಗ ಘಗ್ಗರ್ ನದಿಯನ್ನು ದಾಟಬೇಕಾಯಿತು. ವರದಿಗಳ ಪ್ರಕಾರ, ಬೆಳಗ್ಗೆ ನೀರು ಸ್ವಲ್ಪ ಪ್ರಮಾಣದಲ್ಲಿ ಇತ್ತು. ಆದರೆ ನಂತರ ಭಾರೀ ಮಳೆಯಾಗಿ, ಕೊನೆಗೆ ಪೈಪ್ ನ ಸಹಾಯದಿಂದ ದಾಟಬೇಕಾಯಿತು. ಈ ಘಟನೆ ಕೋಠಿ ಹಳ್ಳಿಯಲ್ಲಿ ನಡೆದಿದ್ದು, ನದಿಗೆ ಸೇತುವೆ ಇಲ್ಲ. ಈ ರೀತಿಯ ದೂರು ಮತ್ತೆ ಮತ್ತೆ ನೀಡುತ್ತಿದ್ದರೂ ಆಡಳಿತದಲ್ಲಿರುವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು.

   ಕರ್ನಾಟಕದಲ್ಲೂ ಇಂಥ ಮಕ್ಕಳು ಇದ್ದಾರೆ

   ಕರ್ನಾಟಕದಲ್ಲೂ ಹಳ್ಳ ದಾಟಿ ಶಾಲೆಗೆ ತಲುಪಬೇಕಾದ ಪರಿಸ್ಥಿತಿ ಇರುವ ಬೇಕಾದಷ್ಟು ಶಾಲೆಗಳಿವೆ. ಸಣ್ಣ ಸಂಕಗಳನ್ನು ನಿರ್ಮಿಸಿದ್ದರೂ ಅವುಗಳು ಅಪಾಯಕ್ಕೆ ಆಹ್ವಾನ ನೀಡುವಂಥವೇ ಆಗಿರುತ್ತವೆ. ಇನ್ನು ಮಳೆಗಾಲದಲ್ಲಂತೂ ಪರಿಸ್ಥಿತಿ ಮತ್ತೂ ಗಂಭೀರವಾಗುತ್ತದೆ. ಅಸ್ಸಾಂನ ಈ ಪುಟ್ಟ ಮಕ್ಕಳನ್ನು ನೋಡಿದಾಗ ಕರ್ನಾಟಕವೂ ಸೇರಿದ ಹಾಗೆ ಇಡೀ ದೇಶದ ಮಕ್ಕಳ ನೆನಪಾಗುತ್ತದೆ.

   ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರಿ ಶಾಲೆಯ ಮಾದರಿ ಪದ್ಧತಿ!

   ಇನ್ನಷ್ಟು human interest story ಸುದ್ದಿಗಳುView All

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Little children in Assam's Biswanath district risk their lives every day to go to school. A video of the students crossing a swift flowing river in aluminium pots grabbed attention on social media on Friday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more